ಬೆಂಗಳೂರು: ಬಿಡಿಎ ಆಸ್ತಿ ತೆರಿಗೆ ಪಾವತಿಸಲು ರಿಯಾಯಿತಿ ಘೋಷಣೆ, ಆದರೆ ಕೆಲಸ ಮಾಡದ ಪೋರ್ಟಲ್
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಸ್ತಿಗಳ ತೆರಿಗೆ ಪಾವತಿಸಲು ಈ ತಿಂಗಳ ಆರಂಭವಾದಿಂದ ಅವಕಾಶ ನೀಡಲಾಗಿದೆ ಮತ್ತು ಏಪ್ರಿಲ್ 30 ರೊಳಗೆ ತೆರಿಗೆ ಪಾವತಿಸುವವರಿಗೆ ಶೇ. 5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
Published: 21st April 2022 03:17 PM | Last Updated: 21st April 2022 03:17 PM | A+A A-

ಬಿಡಿಎ ವೆಬ್ ಸೈಟ್
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಸ್ತಿಗಳ ತೆರಿಗೆ ಪಾವತಿಸಲು ಈ ತಿಂಗಳ ಆರಂಭವಾದಿಂದ ಅವಕಾಶ ನೀಡಲಾಗಿದೆ ಮತ್ತು ಏಪ್ರಿಲ್ 30 ರೊಳಗೆ ತೆರಿಗೆ ಪಾವತಿಸುವವರಿಗೆ ಶೇ. 5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಆದರೆ ಫ್ಲಾಟ್ ಮತ್ತು ಸೈಟ್ ಮಾಲೀಕರು ತಮ್ಮ ಆಸ್ತಿ ತೆರಿಗೆ ಪಾವತಿಸಲು ಬುಧವಾರ ಬಿಡಿಎ ವೆಬ್ಸೈಟ್ಗೆ ಭೇಟಿ ನೀಡಿದ್ದು, ಪಾವತಿ ಲಿಂಕೇ ಕಾಣೆಯಾಗಿದೆ. ಇದರಿಂದ ಮಾಲೀಕರಿಗೆ ತೀವ್ರ ನಿರಾಸೆಯಾಗಿದ್ದು, ಗುರುವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಲಿದೆ ಎಂದು ಬಿಡಿಎ ಹೇಳಿದೆ. ಕಳೆದ ವರ್ಷದ ಮಾಹಿತಿ ಪ್ರಕಾರ ಬಿಡಿಎ ನಗರದಾದ್ಯಂತ 1,02,000 ಆಸ್ತಿ ಹೊಂದಿದೆ.
"ಈ ಆರ್ಥಿಕ ವರ್ಷಕ್ಕೆ ತೆರಿಗೆ ಸಂಗ್ರಹಿಸಲು ಪ್ರಾರಂಭಿಸಿದ ನಂತರ ಈ ಸಮಸ್ಯೆ ಎದುರಾಗಿದೆ. https://propertytax.bdabangalore.org ನಲ್ಲಿ ಆಕ್ಷನ್ ಟ್ಯಾಬ್ ಅಡಿಯಲ್ಲಿ, ಪಾವತಿ ಲಿಂಕ್ ಆಯ್ಕೆಯನ್ನು ತೆಗೆದುಹಾಕಲಾಗಿದೆ" ಎಂದು ನಾಡಪ್ರಭು ಕೆಂಪೇಗೌಡ ಲೇಔಟ್ನಲ್ಲಿರುವ ಸೈಟ್ ಮಾಲೀಕರಲ್ಲಿ ಒಬ್ಬರಾದ ಶಾಮ್ ಜುನಾರೆ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದ್ದಾರೆ.
ಇದನ್ನು ಓದಿ: ಬೆಂಗಳೂರು: ಡಾ.ಶಿವರಾಮ ಕಾರಂತ ಲೇಔಟ್ ವೆಚ್ಚ 800 ಕೋಟಿ ರೂಪಾಯಿಗಳಷ್ಟು ಏರಿಕೆ; ಪುನಃ ಟೆಂಡರ್ ನೀಡಲು ಬಿಡಿಎ ಮುಂದು
ಮತ್ತೊಬ್ಬ ಆಸ್ತಿ ಮಾಲೀಕರಾದ ಡಾ ಪದ್ಮ ಪ್ರಸಾದ್ ಅವರು ಮಾತನಾಡಿ, "ಬಿಡಿಎ ಏಪ್ರಿಲ್ 30 ರವರೆಗೆ ನಮಗೆ ರಿಯಾಯಿತಿ ನೀಡಿದೆ. ಆದರೆ ಏಪ್ರಿಲ್ 20 ಆದರೂ ತನ್ನ ಪೋರ್ಟಲ್ ಸರಿ ಮಾಡಿಲ್ಲ. ಹೀಗಾಗಿ ಶೇ.5 ರಷ್ಟು ರಿಯಾಯಿತಿ ಕೊಡುಗೆಯನ್ನು ಮೇ 31 ರವರೆಗೆ ವಿಸ್ತರಿಸುವುದು ಅವರ ಜವಾಬ್ದಾರಿ ಎಂದಿದ್ದಾರೆ.
ಈ ಬಗ್ಗೆ ಐಟಿ ಇಲಾಖೆಯ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದಾಗ, "ನಮಗೆ ಇಂದು ಸಂಪೂರ್ಣವಾಗಿ ಸಮಸ್ಯೆ ಇದೆ, ನಾಳೆ ಮಧ್ಯಾಹ್ನ 3 ಗಂಟೆ ನಂತರ ಸರಿಯಾಗಿ ಕಾರ್ಯನಿರ್ವಹಿಸಲಿದೆ " ಎಂದು ಹೇಳಿದ್ದಾರೆ.