ಬೆಂಗಳೂರು: ಡಾ.ಶಿವರಾಮ ಕಾರಂತ ಲೇಔಟ್ ವೆಚ್ಚ 800 ಕೋಟಿ ರೂಪಾಯಿಗಳಷ್ಟು ಏರಿಕೆ; ಪುನಃ ಟೆಂಡರ್ ನೀಡಲು ಬಿಡಿಎ ಮುಂದು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಡಾ. ಶಿವರಾಮ ಕಾರಂತ ಲೇಔಟ್ ಗೆ ಈ ಹಿಂದೆ ನೀಡಿದ್ದ ಟೆಂಡರ್ ಅಧಿಸೂಚನೆಯನ್ನು ರದ್ದುಗೊಳಿಸಿದ್ದು, ಹೊಸ ಟೆಂಡರ್ ಅಧಿಸೂಚನೆಯನ್ನು ಈ ವಾರ ನೀಡಲಿದೆ.
Published: 21st April 2022 01:57 PM | Last Updated: 21st April 2022 02:40 PM | A+A A-

ಡಾ.ಶಿವರಾಮ ಕಾರಂತ ಲೇ ಔಟ್
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಡಾ. ಶಿವರಾಮ ಕಾರಂತ ಲೇಔಟ್ ಗೆ ಈ ಹಿಂದೆ ನೀಡಿದ್ದ ಟೆಂಡರ್ ಅಧಿಸೂಚನೆಯನ್ನು ರದ್ದುಗೊಳಿಸಿದ್ದು, ಹೊಸ ಟೆಂಡರ್ ಅಧಿಸೂಚನೆಯನ್ನು ಈ ವಾರ ನೀಡಲಿದೆ.
ಯೋಜನೆಯ ವೆಚ್ಚ 800 ಕೋಟಿ ರೂಪಾಯಿಗಳನ್ನು ಮೀರಿದ್ದು ಹೊಸ ಟೆಂಡರ್ ಅಧಿಸೂಚನೆ ಪ್ರಕಟಿಸಲು ಕಾರಣ ಎಂದು ಬಿಡಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ. ಯೋಜನೆಗೆ ಇತ್ತೀಚೆಗೆ ಬಿಡಿಎ ಪರಿಸರ ಇಲಾಖೆಯಿಂದ ಕ್ಲಿಯರೆನ್ಸ್ ಪಡೆದಿತ್ತು.
ಬಿಡಿಎ ಈ ಹಿಂದೆ 1,865 ಕೋಟಿ ರೂಪಾಯಿಗಳಿಗೆ ಮಾ.21 ರಂದು 9 ಪ್ರತ್ಯೇಕ ಟೆಂಡರ್ ಗಳನ್ನು ಟೆಂಡರ್ ನ್ನು ಕರೆದಿತ್ತು. ಬಿಡ್ ಗಳಿಗಾಗಿ ಏ.25 ರ ಗಡುವು ವಿಧಿಸಲಾಗಿತ್ತು. ಆದರೆ ಈಗ ಈ ಟೆಂಡರ್ ರದ್ದುಗೊಂಡಿದೆ.
ಇದನ್ನೂ ಓದಿ: ಶಿವರಾಮ ಕಾರಂತ್ ಲೇಔಟ್ನಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ 15,000 ಫ್ಲ್ಯಾಟ್ಗಳು!
"ಲೋಕೋಪಯೋಗಿ ಇಲಾಖೆ-2022 ಬಿಡುಗಡೆ ಮಾಡಿರುವ ಹೊಸ ದರಗಳ ಪಟ್ಟಿಯ ಪ್ರಕಾರ ಎಲ್ಲಾ ಕಟ್ಟಡ ಯೋಜನೆಗಳ ವೆಚ್ಚ ಹೆಚ್ಚಳವಾಗಿರುವುದು, ಕಾರ್ಮಿಕರು, ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಮಾಡಲಾಗಿದೆ. ಆದ್ದರಿಂದ ಈ ಹಿಂದೆ ಲೇ ಔಟ್ ನಿರ್ಮಾಣದ ಅಂದಾಜು ವೆಚ್ಚ 4,530 ಕೋಟಿ ರೂಪಾಯಿಗಳಿಂದ 5,337 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು ಹಳೆ ಟೆಂಡರ್ ನ್ನು ರದ್ದುಗೊಳಿಸಿ ಹೊಸ ಟೆಂಡರ್ ಕರೆಯಲಾಗುತ್ತದೆ" ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.