ಹುಬ್ಬಳ್ಳಿ ಗಲಭೆ: ತಲೆಮರೆಸಿಕೊಂಡಿದ್ದ ಮೌಲ್ವಿ ವಾಸೀಂ ಪಠಾಣ್ ಬಂಧನ
ಕಳೆದ ಶನಿವಾರ ರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಪ್ರಮುಖ ರುವಾರಿ ಎಂದೇ ಹೇಳಲಾಗುತ್ತಿರುವ ತಲೆಮರೆಸಿಕೊಂಡಿದ್ದ ಮೌಲ್ವಿ ವಾಸೀಂ ಪಠಾಣ್ ನನ್ನು ಹಳೆ ಹುಬ್ಬಳ್ಳಿಯ ಪೊಲೀಸರು ಗುರುವಾರ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.
Published: 21st April 2022 05:08 PM | Last Updated: 21st April 2022 06:12 PM | A+A A-

ವಾಸೀಂ ಪಠಾಣ್
ಹುಬ್ಬಳ್ಳಿ: ಕಳೆದ ಶನಿವಾರ ರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಪ್ರಮುಖ ರುವಾರಿ ಎಂದೇ ಹೇಳಲಾಗುತ್ತಿರುವ ತಲೆಮರೆಸಿಕೊಂಡಿದ್ದ ಮೌಲ್ವಿ ವಾಸೀಂ ಪಠಾಣ್ ನನ್ನು ಹಳೆ ಹುಬ್ಬಳ್ಳಿಯ ಪೊಲೀಸರು ಗುರುವಾರ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.
ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಬಿಂಬಿತವಾಗಿದ್ದ ವಾಸೀಂ ಪಠಾಣ ಬೆಂಗಳೂರು, ಬೆಳಗಾವಿ, ಮುಂಬೈ ಸೇರಿದಂತೆ ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸ್ ಅಧಿಕಾರಿ ಅಲ್ತಾಪ್ ಮುಲ್ಲಾ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಇದನ್ನು ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಮತ್ತೆ 11 ಮಂದಿ ಆರೋಪಿಗಳ ಬಂಧನ, ತಲೆಮರೆಸಿಕೊಂಡಿರುವ ಮೌಲ್ವಿಗಾಗಿ ತೀವ್ರಗೊಂಡ ಹುಡುಕಾಟ
ಇಂದು ಬೆಳಗ್ಗೆಯಷ್ಟೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ವಾಸೀಂ ಪಠಾಣ, ಘಟನೆಗೆ ನಾನು ಕಾರಣನಲ್ಲ. ನನ್ನ ಮೇಲೆ ವ್ಯವಸ್ಥಿತ ಪಿತೂರಿ ನಡೆದಿದೆ. ನಾನು ಘಟನೆಯ ಮಾಸ್ಟರ್ ಮೈಂಡ್ ಅಲ್ಲ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಹುಬ್ಬಳ್ಳಿಯ ವಾತಾವರಣ ಹದಗೆಡಿಸುವ ಉದ್ದೇಶ ನನ್ನದಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
Vasim Pathan from #Hubballi who is wanted in recent #HubballiViolence releases a video. Claims climbed jeep to pacify the crowd as per the wish of police @NewIndianXpress @XpressBengaluru @KannadaPrabha @karnatakacom @hublimandi @HUBLI_RANGER @Arunkumar_TNIE @HUBLI_RANGER pic.twitter.com/VuY5HqZZB6
— Amit Upadhye (@Amitsen_TNIE) April 21, 2022
ನಮ್ಮ ಧರ್ಮಕ್ಕೆ ಅಪಮಾನ ಮಾಡಿದ ಬಗ್ಗೆ ಮುಸ್ಲಿಂ ಯುವಕರಲ್ಲಿ ಅಸಮಾಧಾನ ಇತ್ತು. ಈ ಕುರಿತು ದೂರು ನೀಡಲು ಹಲವಾರು ಯುವಕರು ಅಲ್ಲಿ ಜಮಾಯಿಸಿದ್ದರು. ಅವರೊಂದಿಗೆ ಮಾತನಾಡಲು ನನ್ನನ್ನು ಕರೆಸಿದ್ದರು. ಪೊಲೀಸರ ಜೊತೆಗೆ ಮಾತನಾಡಿದೆ. ಪೊಲೀಸರು ಸಹಕಾರ ಕೊಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರೇ ಜೀಪ್ ಹತ್ತಿ ಜನರಿಗೆ ತಿಳಿ ಹೇಳಲು ಹೇಳಿದರು. ನಾನು ವಾಹನದ ಮೇಲೆ ಹತ್ತಿದಾಗ ಅಲ್ಲಿ ಮೈಕ್ ಇರಲಿಲ್ಲ. ಹೀಗಾಗಿ ಕೈ ಸನ್ನೆ ಮಾಡುವ ಮೂಲಕ ಶಾಂತಿ ಕಾಪಾಡಲು ಹೇಳಿದೆ ಎಂದು ಇಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.
The #Hubballi police take Vasim Pathan, the cleric into custody on Thursday afternoon. Inquiry underway @Arunkumar_TNIE @NewIndianXpress @XpressBengaluru @KannadaPrabha @karnatakacom @HubballiRetweet @HUBLI_RANGER @hublimandi @HubliCityeGroup @Hubballi_Infra @Namma_HD pic.twitter.com/D5U0yTQLJ9
— Amit Upadhye (@Amitsen_TNIE) April 21, 2022