ಮುಸ್ಲಿಮರು ಅಮಾಯಕರು, ಕಾಂಗ್ರೆಸ್ ನಾಯಕರು ಅವರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ: ಸಚಿವ ಆನಂದ್ ಸಿಂಗ್
ಮುಸ್ಲಿಮರು ಅಮಾಯಕರಿದ್ದಾರೆ, ಆದರೆ ಕೆಲವರು ಅವರನ್ನು ಪ್ರಚೋದನೆ ಮಾಡಿ ಹಾಳುಮಾಡುತ್ತಿದ್ದಾರೆ. ಮುಸ್ಲಿಮ್ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಲು ಕೆಲವರು ನೋಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆರೋಪಿಸಿದ್ದಾರೆ.
Published: 21st April 2022 11:32 AM | Last Updated: 21st April 2022 01:37 PM | A+A A-

ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸ್ ವಾಹನ ಹಾಳಾಗಿರುವುದು
ವಿಜಯನಗರ: ಮುಸ್ಲಿಮರು ಅಮಾಯಕರಿದ್ದಾರೆ, ಆದರೆ ಕೆಲವರು ಅವರನ್ನು ಪ್ರಚೋದನೆ ಮಾಡಿ ಹಾಳುಮಾಡುತ್ತಿದ್ದಾರೆ. ಮುಸ್ಲಿಮ್ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಲು ಕೆಲವರು ನೋಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆರೋಪಿಸಿದ್ದಾರೆ.
ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ, ಸಚಿವನಾಗಿ ನಾನು ಈ ಮಾತುಗಳನ್ನು ಹೇಳುತ್ತಿಲ್ಲ, ಬದಲಿಗೆ ಒಬ್ಬ ಸಾಮಾನ್ಯ ಮನುಷ್ಯನಾಗಿ ಮಾತನಾಡುತ್ತಿದ್ದೇನೆ, ಜಾತಿ ವಿಷಬೀಜಗಳನ್ನು ಬಿತ್ತಿ ಮುಸ್ಲಿಮರ ಮನಸ್ಸಿನಲ್ಲಿ ಬೇಡದ ವಿಚಾರಗಳನ್ನು ತುಂಬುತ್ತಾರೆ. ಕೆಲವರು ಪ್ರಚೋದನಾಕಾರಿ ವಿಷಯಗಳನ್ನು ಪದೇಪದೇ ಹೇಳುವುದರಿಂದ ಅವರ ತಲೆಹಾಳು ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಮತ್ತೆ 11 ಮಂದಿ ಆರೋಪಿಗಳ ಬಂಧನ, ತಲೆಮರೆಸಿಕೊಂಡಿರುವ ಮೌಲ್ವಿಗಾಗಿ ತೀವ್ರಗೊಂಡ ಹುಡುಕಾಟ
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಸ್ಲಿಮರಿಗೊಂದು, ಹಿಂದೂಗಳಿಗೊಂದು, ಕ್ರಿಸ್ತಿಯನ್ನರಿಗೊಂದು ಎಂದು ಸಂವಿಧಾನ ನೀಡಿಲ್ಲ, ನಾವೆಲ್ಲರೂ ಭಾರತೀಯರು, ಇಡೀ ಭಾರತಕ್ಕೆ ಒಂದೇ ಸಂವಿಧಾನ ನೀಡಿದ್ದಾರೆ. ಸಮಾನತೆಯ ಸಂವಿಧಾನ ಬರೆದುಕೊಟ್ಟಿದ್ದಾರೆ. ಹಾಗಾಗಿ ಇಲ್ಲಿ ಯಾರೂ ಮೇಲುಕೀಳಲ್ಲ ಎಂದರು.