ಆಧಾರ್ ಕೇಂದ್ರ ನಿರ್ವಾಹಕರ ವಿರುದ್ಧ ದೂರು: UIDAI ದಕ್ಷಿಣ ಭಾಗದಿಂದ ಟೋಲ್ ಫ್ರೀ ಸಂಖ್ಯೆ ಆರಂಭ
ದಕ್ಷಿಣ ಭಾರತ ರಾಜ್ಯಗಳಾದ್ಯಂತ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳನ್ನು ನಿರ್ವಹಿಸುವ ಸುಮಾರು 10 ಸಾವಿರ ಆಪರೇಟರ್ಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ-UIDAI), ಸಾರ್ವಜನಿಕ ದೂರುಗಳನ್ನು ಪರಿಹರಿಸಲು ಶೀಘ್ರದಲ್ಲೇ ಟೋಲ್-ಫ್ರೀ ಸಂಖ್ಯೆಯನ್ನು ಪ್ರಾರಂಭಿಸಲಿದೆ.
Published: 21st April 2022 02:16 PM | Last Updated: 21st April 2022 02:26 PM | A+A A-

ಆಧಾರ್ ಕೇಂದ್ರ
ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳಾದ್ಯಂತ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳನ್ನು ನಿರ್ವಹಿಸುವ ಸುಮಾರು 10 ಸಾವಿರ ಆಪರೇಟರ್ಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ-UIDAI), ಸಾರ್ವಜನಿಕ ದೂರುಗಳನ್ನು ಪರಿಹರಿಸಲು ಶೀಘ್ರದಲ್ಲೇ ಟೋಲ್-ಫ್ರೀ ಸಂಖ್ಯೆಯನ್ನು ಪ್ರಾರಂಭಿಸಲಿದೆ.
1800-425-6666 ಸಂಖ್ಯೆ ಪ್ರಾಯೋಗಿಕವಾಗಿ ಪ್ರಾರಂಭವಾಗಿದ್ದು, ಮುಂದಿನ ವಾರ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಆಧಾರ್ ಕಾರ್ಡ್ಗೆ ಯಾವುದೇ ಮಾರ್ಪಾಡುಗಳನ್ನು ಮಾಡಲು ಆಪರೇಟರ್ಗಳಿಂದ ಹೆಚ್ಚಿನ ಶುಲ್ಕ ವಿಧಿಸುವ ಕುರಿತು ಆಗ್ಗಾಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ UIDAI ಈ ಉಪಕ್ರಮವನ್ನು ಕೈಗೊಂಡಿದೆ. ಕಾರ್ಡ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾದರೂ ಆಧಾರ್ ಕೇಂದ್ರಕ್ಕೆ ಪ್ರತಿ ಭೇಟಿಗೆ ಸಾರ್ವಜನಿಕರಿಂದ 50 ರೂಪಾಯಿ ಪಡೆಯುವ ಬಗ್ಗೆ ಸಾರ್ವಜನಿಕರು ಅವರನ್ನು ಭೇಟಿ ಮಾಡಿದಾಗ ಸಿಬ್ಬಂದಿ ಸರಿಯಾಗಿ ಸ್ಪಂದಿಸದಿರುವ ಬಗ್ಗೆಯೂ ನಾವು ದೂರುಗಳನ್ನು ಸ್ವೀಕರಿಸಿದ್ದೇವೆ ಎಂದು ಯುಐಡಿಎಐ ದಕ್ಷಿಣ ವಲಯದ ಉಪ ನಿರ್ದೇಶಕ ಎಂ ಎಸ್ ಕೃಷ್ಣಮೂರ್ತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ದಕ್ಷಿಣ ಭಾರತದ ವಿಭಾಗವು ಕರ್ನಾಟಕ, ತಮಿಳುನಾಡು, ಕೇರಳ ಪುದುಚೆರಿ ಮತ್ತು ಲಕ್ಷದ್ವೀಪಗಳನ್ನು ನೋಡಿಕೊಳ್ಳುತ್ತದೆ.ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ ದಕ್ಷಿಣ ಭಾಗದಲ್ಲಿರುವ ಯುಐಡಿಎಐನ ಮುಖ್ಯ ಕಚೇರಿಯಲ್ಲಿ ಕರೆಗಳನ್ನು ನಿರ್ವಹಿಸಲು ಕಚೇರಿಯನ್ನು ಸ್ಥಾಪಿಸಲಾಗುವುದು ಎಂದು ಕೃಷ್ಣಮೂರ್ತಿ ಹೇಳಿದರು. ಯುಐಡಿಎಐ ಕಚೇರಿಯ ಸಮಯದಲ್ಲಿ (ಬೆಳಿಗ್ಗೆ 9.30 ರಿಂದ ಸಂಜೆ 6) ಕರೆಗಳಿಗೆ ಉತ್ತರಿಸಲು ಲಭ್ಯವಿದ್ದು, ಸಾರ್ವಜನಿಕ ಪ್ರತಿಕ್ರಿಯೆಯನ್ನು ಅವಲಂಬಿಸಿ ಸಮಯವನ್ನು ವಿಸ್ತರಿಸಲಾಗುತ್ತದೆ ಎಂದರು.
ರಾಷ್ಟ್ರವ್ಯಾಪಿ ಟೋಲ್-ಫ್ರೀ ಸಂಖ್ಯೆ - 1947 - ಆಧಾರ್ಗೆ ಸಂಬಂಧಿಸಿದ ಎಲ್ಲಾ ಕುಂದುಕೊರತೆಗಳನ್ನು ನೋಡಿಕೊಳ್ಳಲು ಈಗಾಗಲೇ ಅಸ್ತಿತ್ವದಲ್ಲಿದ್ದು, ವರ್ಷವಿಡೀ 24x7 ನಿರ್ವಹಿಸಲಾಗುತ್ತದೆ. ನಿರ್ವಾಹಕರ ವಿರುದ್ಧದ ದೂರುಗಳ ಬಗ್ಗೆ ಸಾರ್ವಜನಿಕರು ಸಂಪರ್ಕಿಸಿದರೆ ಈ ಉದ್ದೇಶಕ್ಕಾಗಿ ಮಾತ್ರ ಸ್ಥಾಪಿಸಲಾದ ನಮ್ಮ ಹೊಸ ಸಂಖ್ಯೆಗೆ ಬದಲಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.
ಆಧಾರ್ ದಾಖಲಾತಿ ಕೇಂದ್ರಗಳು ಪ್ರಸ್ತುತ ರಿಜಿಸ್ಟ್ರಾರ್ಗಳು, ಬ್ಯಾಂಕ್ಗಳು, ಅಂಚೆ ಕಚೇರಿಗಳು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ನಡೆಸಲ್ಪಡುವ ಸಾಮಾನ್ಯ ಸೇವಾ ಕೇಂದ್ರಗಳನ್ನು ವಹಿಸಿಕೊಂಡಿವೆ.