ರಾಜ್ಯದ 60 ಸಾವಿರ ಯುವಕರನ್ನು ಸ್ವಾವಲಂಬಿಗೊಳಿಸಲು ಸರ್ಕಾರದಿಂದ ತರಬೇತಿ

ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ ಯುವಕರು ಸ್ವಾವಲಂಬಿಯಾಗಿ ವೃತ್ತಿ ನಡೆಸಲು ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಯುವ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸ್ವಾವಲಂಬನೆಗೆ ತರಬೇತಿ ನೀಡಲಿದೆ.

Published: 23rd April 2022 09:31 AM  |   Last Updated: 23rd April 2022 01:51 PM   |  A+A-


Chief minister Basavaraja Bommai inaugarated skill on wheel at Kalaburagi

'ಕೌಶಲ್ಯ ರಥ - Skill on Wheels' ಅನ್ನು ಕಲಬುರಗಿಯಲ್ಲಿ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

The New Indian Express

ಬೆಂಗಳೂರು: ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ ಯುವಕರು ಸ್ವಾವಲಂಬಿಯಾಗಿ ವೃತ್ತಿ ನಡೆಸಲು ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಯುವ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸ್ವಾವಲಂಬನೆಗೆ ತರಬೇತಿ ನೀಡಲಿದೆ. 18ರಿಂದ 27 ವರ್ಷದೊಳಗಿನ ಸುಮಾರು 60 ಸಾವಿರ ಯುವಕರಿಗೆ ತರಬೇತಿ ನೀಡಲಿದೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯ ವರದಿ ಪ್ರಕಾರ, ರಾಜ್ಯದಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸುಮಾರು 75 ಸಾವಿರ ಯುವಕರಿದ್ದಾರೆ. ರಾಜ್ಯದ 6 ಸಾವಿರ ಗ್ರಾಮ ಪಂಚಾಯತ್ ಗಳಲ್ಲಿ ಕನಿಷ್ಟ 10 ಯುವಕರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಗುರುತಿಸಲಿದ್ದು ಯುವ ಸ್ವಸಹಾಯ ಗುಂಪುಗಳನ್ನು ರಚಿಸಲಿದೆ. ಅವರಿಗೆ ತರಬೇತಿ ನೀಡಿ ಸ್ವ ಉದ್ಯೋಗ ಮಾಡಲು ಹಣಕಾಸಿನ ನೆರವು ನೀಡಲಿದೆ.

ಇಂತಹ ಯುವ ಸ್ವಸಹಾಯ ಗುಂಪುಗಳಲ್ಲಿ ಕನಿಷ್ಟ 10 ಸ್ಥಳೀಯ ಯುವಕರು ತಮ್ಮ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ನಿರುದ್ಯೋಗಿಗಳಾಗಿದ್ದಾರೆ. ಇದೇ ವಿಷಯವನ್ನು ಕಳೆದ ಬಾರಿ ಮಂಡಿಸಿದ್ದ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ನಿಮ್ಹಾನ್ಸ್ ನ ಯುವ ಸ್ಪಂದನ ಕಾರ್ಯಕ್ರಮ ಮೂಲಕ ಪ್ರತಿ ಜಿಲ್ಲೆಯಲ್ಲಿ ಯುವ ಸಂಚಾಲಕರಿಗೆ ಮುಖ್ಯ ತರಬೇತಿ ನೀಡಲಾಗುವುದು. ಕೌಶಲ್ಯಾಭಿವೃದ್ಧಿ ಇಲಾಖೆ ಮೂಲಕ ತರಬೇತಿ ಕೊಡಿಸಲಾಗುವುದು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಧಿಕಾರಿಗಳು ಸ್ವಸಹಾಯ ಸಂಸ್ಥೆಗಳನ್ನು ರಚಿಸಲಿವೆ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂತಹ ಸ್ವಸಹಾಯ ಗುಂಪುಗಳನ್ನು ರಚಿಸಿದ ನಂತರ ಈ ಗುಂಪಿನ ಸದಸ್ಯರಿಗೆ ಮೈಸೂರಿನಲ್ಲಿ ಅಬ್ದುಲ್ ನಜೀರ್ ಸಾಬ್ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಹಂತಹಂತವಾಗಿ ತರಬೇತಿ ನೀಡಲಾಗುವುದು. ಅದರ ಭಾಗವಾಗಿ, ಮೈಸೂರು ವಲಯದ ಯುವ ಸ್ವಸಹಾಯ ಗುಂಪುಗಳನ್ನು ಮೇ ಕೊನೆಯ ವಾರದಲ್ಲಿ ರಚಿಸಲಾಗುವುದು ಎಂದು ಹೇಳಿದರು.


Stay up to date on all the latest ರಾಜ್ಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp