ಸೈಬರ್ ವಂಚನೆಯಿಂದ ಕಳೆದುಕೊಂಡ ಹಣವನ್ನು ವಾಪಸ್ ಪಡೆದ ನಿವೃತ್ತ ಸೇನಾಧಿಕಾರಿ: ಪೊಲೀಸರಿಗೆ ಶ್ಲಾಘನೆ
ಸೇನೆಯಿಂದ ನಿವೃತ್ತಿಗೊಂಡ 60 ವರ್ಷದ ವ್ಯಕ್ತಿಗೆ ವೈಟ್ ಫೀಲ್ಡ್ ವಿಭಾಗ ಸೈಬರ್ ಕ್ರೈಂ ಪೊಲೀಸರು ಕಳೆದುಹೋದ ಹಣವನ್ನು ವಾಪಸ್ ಕೊಡಿಸುವಲ್ಲಿ ಸಹಾಯ ಮಾಡಿದ್ದಾರೆ. ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸೈಬರ್ ಮೋಸದ ಜಾಲಕ್ಕೆ ತುತ್ತಾಗಿದ್ದರು.
Published: 23rd April 2022 01:14 PM | Last Updated: 23rd April 2022 02:03 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸೇನೆಯಿಂದ ನಿವೃತ್ತಿಗೊಂಡ 60 ವರ್ಷದ ವ್ಯಕ್ತಿಗೆ ವೈಟ್ ಫೀಲ್ಡ್ ವಿಭಾಗ ಸೈಬರ್ ಕ್ರೈಂ ಪೊಲೀಸರು ಕಳೆದುಹೋದ ಹಣವನ್ನು ವಾಪಸ್ ಕೊಡಿಸುವಲ್ಲಿ ಸಹಾಯ ಮಾಡಿದ್ದಾರೆ. ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸೈಬರ್ ಮೋಸದ ಜಾಲಕ್ಕೆ ತುತ್ತಾಗಿದ್ದರು.
ಬೆಂಗಳೂರಿನ ಆವಲಹಳ್ಳಿ ನಿವಾಸಿ ಕ್ಯಾ.ರಾಜೇಂದ್ರ ಸಿಂಗ್ ವಾಲ್ಡಿಯಾ ಅವರು ತಮ್ಮ ಪತ್ನಿಯನ್ನು ಉತ್ತಮ ಆಯುರ್ವೇದ ವೈದ್ಯರಲ್ಲಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಇಂಟರ್ನೆಟ್ ನಲ್ಲಿ ಹುಡುಕಾಡುತ್ತಿದ್ದರು. ದುರದೃಷ್ಟವೆಂಬಂತೆ ನಕಲಿ ಆಯುರ್ವೇದ ಕೇಂದ್ರದ ಸಂಖ್ಯೆಗೆ ಸಂಪರ್ಕಿಸಿದರು. ತಾವು ಮೋಸ ಹೋಗಿದ್ದು ಗೊತ್ತಾದ ಕೂಡಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಸೈಬರ್ ಕ್ರೈಂ ಪೊಲೀಸರು ಆರೋಪಿಯ ಅಕೌಂಟ್ ನಂಬರ್ ನ್ನು ನಿಷ್ಕ್ರಿಯಗೊಳಿಸಿ ನಿವೃತ್ತ ಅಧಿಕಾರಿಯ ಹಣ ಕೊಡಿಸುವಲ್ಲಿ ಯಶಸ್ವಿಯಾದರು.
ಘಟನೆ ಏನಾಯ್ತು?: ಕ್ಯಾಪ್ಟನ್ ವಾಲ್ಡಿಯಾ ಅವರು ಫೆಬ್ರವರಿ 21ರಂದು 28 ಸಾವಿರದ 600 ರೂಪಾಯಿ ಆನ್ ಲೈನ್ ಮೋಸದಲ್ಲಿ ಕಳೆದುಕೊಂಡಿದ್ದರು. ಮೊನ್ನೆ ಏಪ್ರಿಲ್ 19ಕ್ಕೆ ಅವರ ಅಕೌಂಟಿಗೆ ಹಣ ಬಂದಾಗ ನಿಜಕ್ಕೂ ಅವರಿಗೆ ಅಚ್ಚರಿಯಾಯಿತು.
ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದು ಹೀಗೆ, ನನಗೆ ಹಣ ಮುಖ್ಯವಾಗಿರಲಿಲ್ಲ, ಆನ್ ಲೈನ್ ವಂಚನೆ ಮಾಡಿದವರು ಸಿಕ್ಕಿಬೀಳುವುದು ಮುಖ್ಯವಾಗಿತ್ತು. ಅವರು ಎಷ್ಟು ಚುರುಕಾಗಿದ್ದರು ಎಂದರೆ ಆಯುರ್ವೇದ ಸಂಸ್ಥೆಯ ಎಲ್ಲಾ ಉತ್ಪನ್ನಗಳು ಮತ್ತು ಪ್ರಕೃತಿಚಿಕಿತ್ಸೆಯನ್ನು ನಿಖರವಾಗಿ ತಿಳಿದಿದ್ದರು. ನನ್ನ ಹೆಂಡತಿಯ ವೈದ್ಯಕೀಯ ಪ್ರಮಾಣಪತ್ರಗಳನ್ನು ಹಂಚಿಕೊಳ್ಳುವಂತೆ ಮಾಡಿದರು. ಅವರ ಸಹವರ್ತಿಯೊಬ್ಬರು ವೈದ್ಯರಂತೆ ನಟಿಸಿ ನನ್ನೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರು, ಅವರ ಮಾತಿಗೆ ಯಾರಾದರೂ ಮೋಸ ಹೋಗಬಹುದಿತ್ತು. ಕೊನೆಗೆ ಹಣ ಕಳುಹಿಸಲು ಬ್ಯಾಂಕ್ ವಿವರಗಳನ್ನು ಕಳುಹಿಸಿದ್ದಾರೆ. ನನಗೆ ಇಮೇಲ್ ಮಾಡಲು ರಸೀದಿಗಳನ್ನು ಕೇಳಿದಾಗ ಸಂಸ್ಥೆಯ ಗ್ರಾಹಕ ಸಂಖ್ಯೆಗಳು ವಿಭಿನ್ನವಾಗಿವೆ ಎಂದು ನಾನು ಅರಿತುಕೊಂಡೆ. ನಾನು ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ, ನಾನು ಮೋಸ ಹೋಗಿರುವುದು ಗೊತ್ತಾಯಿತು ಎಂದು ಹೇಳಿದರು.
ಕೂಡಲೇ ಕ್ಯಾಪ್ಟನ್ ವಾಲ್ಡಿಯಾ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆಗೆ ಕರೆ ಮಾಡಿದರು. ಅವರು ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸಲಹೆ ನೀಡಿದರು. ಬ್ಯಾಂಕ್ ನ್ನು ಸಂಪರ್ಕಿಸಿದರು. “ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಬ್-ಇನ್‌ಸ್ಪೆಕ್ಟರ್ ಅರುಣ್ ಹಣ ವಾಪಸ್ ಬರುವಲ್ಲಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಈ ವಿಷಯವನ್ನು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಖಾತೆ ಸಂಖ್ಯೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗೆ ಸೂಚಿಸಿದ ನ್ಯಾಯಾಲಯವನ್ನು ಸಂಪರ್ಕಿಸಲು ಕಾನೂನು ನೆರವು ಒದಗಿಸಿತು ಎಂದು ಕ್ಯಾಪ್ಟನ್ ವಾಲ್ಡಿಯಾ ವಿವರಿಸುತ್ತಾರೆ.
ಸೈಬರ್ ಕ್ರೈಂ ಪೊಲೀಸರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಪೊಲೀಸ್ ಕಮಿಷನರ್ ಕಮಲ್ ಪಂತ್ , ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್ ಗಿರೀಶ್ ಸಹ ಟ್ವೀಟ್ ಮಾಡಿದ್ದಾರೆ.
A message of gratitude and appreciation for @BlrCityPolice's Cyber Crime Unit and DCP Ramarajan, IPS & team from Capt. (Retd.) Rajendra Singh Waldia. It is messages like these that bring a smile to our faces!
— Kamal Pant, IPS. ಪೊಲೀಸ್ ಆಯುಕ್ತರು, ಬೆಂಗಳೂರು ನಗರ. (@CPBlr) April 21, 2022
Proud of you, team. Keep up the good work! pic.twitter.com/0KnOy0qBxk
Appreciation pic.twitter.com/L8EZnNVBeL
— S.Girish, IPS (@dcpwhitefield) April 21, 2022