ರಾಜ್ಯದಲ್ಲಿ ವಾಯು ಮಾಲಿನ್ಯ ಹೆಚ್ಚಳ: ಗಾಳಿ ಗುಣಮಟ್ಟ ಪರೀಕ್ಷೆ ಮಾಡಲು ಸ್ಟಾರ್ಟಪ್ ಗೆ 1 ಮಿಲಿಯನ್ ಡಾಲರ್ ಹಣ!
ರಾಜ್ಯದಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಮಾಪನ ಮಾಡಲು ಸ್ಟಾರ್ಟಪ್ ಒಂದಕ್ಕೆ 1 ಮಿಲಿಯನ್ ಡಾಲರ್ ಹಣ ನೀಡಲಾಗಿದೆ ಎನ್ನಲಾಗಿದೆ.
Published: 23rd April 2022 11:41 AM | Last Updated: 23rd April 2022 01:58 PM | A+A A-

ಕರ್ನಾಟಕದಲ್ಲಿ ವಾಯುಮಾಲಿನ್ಯ
ಬೆಂಗಳೂರು: ರಾಜ್ಯದಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಮಾಪನ ಮಾಡಲು ಸ್ಟಾರ್ಟಪ್ ಒಂದಕ್ಕೆ 1 ಮಿಲಿಯನ್ ಡಾಲರ್ ಹಣ ನೀಡಲಾಗಿದೆ ಎನ್ನಲಾಗಿದೆ.
ಹೌದು.. ಕರ್ನಾಟಕದಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಕಳವಳ ವ್ಯಕ್ತಪಡಿಸಿರುವ ಟೆಕ್ ಸ್ಟಾರ್ಟಪ್ ರಾಜ್ಯ ಮತ್ತು ಮಹಾರಾಷ್ಟ್ರದಲ್ಲಿ ಗಾಳಿಯ ಮೇಲ್ವಿಚಾರಣೆ ಮತ್ತು ಶೋಧನೆಗಾಗಿ 1 ಮಿಲಿಯನ್ ಡಾಲರ್ ಹಣವನ್ನು ಪಡೆದಿದೆ. ಎಥೆರಿಯಮ್ ಸಂಸ್ಥಾಪಕ ವಿಟಾಲಿಕ್ ಬುಟೆರಿನ್ ಅವರ ನಿಧಿಯ ಉಪಕ್ರಮವಾದ ಬಾಲ್ವಿ ಫಂಡ್ನಿಂದ ನಿಧಿಯು ಬರುತ್ತದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಪರಿಹಾರ ಯೋಜನೆಗಳ ಪ್ರಯೋಜನಕ್ಕಾಗಿ ಈ ವರ್ಷದ ಆರಂಭದಲ್ಲಿ ನಿಧಿಯನ್ನು ಸ್ಥಾಪಿಸಲಾಯಿತು ಎನ್ನಲಾಗಿದೆ.
ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (NEERI) ವರದಿಯ ಪ್ರಕಾರ, ಕರ್ನಾಟಕವು ದಕ್ಷಿಣ ಭಾರತದಲ್ಲಿ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿದೆ ಎಂದು ವರದಿಯಾಗಿದೆ. ಪ್ರಮುಖವಾಗಿ ರಾಜ್ಯದ ಬೀದರ್, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಟ್ಟದ ವಾಯು ಮಾಲಿನ್ಯ ದಾಖಲಾಗುತ್ತಿದ್ದು, ಇದನ್ನು ಎದುರಿಸಲು, ಸ್ಟಾರ್ಟಪ್, ಆಕ್ಟಿವ್ ಬಿಲ್ಡಿಂಗ್ಸ್ ಮತ್ತು ಬಾಲ್ವಿ ಫಂಡ್ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡರಲ್ಲೂ 5,000 ಒಳಾಂಗಣ ವಾಯು ಗುಣಮಟ್ಟ ಮಾನಿಟರ್ ಮತ್ತು 10,000 ಏರ್ ಕ್ಲೀನರ್ಗಳನ್ನು ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯ ಮಟ್ಟಗಳು, ಗಾಳಿಯ ಗುಣಮಟ್ಟ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು ಸಹಭಾಗಿತ್ವವು ಕೆಲಸ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
"ಏರ್ ಫಿಲ್ಟರ್ಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಮೂಲಕ ಕೋವಿಡ್ ಮತ್ತು ಇತರ ವೈರಸ್ಗಳ ವಾಯುಗಾಮಿ ಹರಡುವಿಕೆಯನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ ಮತ್ತು CO2 ಸಂವೇದಕಗಳು ಕಳಪೆ ಗಾಳಿಯ ಗುಣಮಟ್ಟವನ್ನು ಪತ್ತೆ ಮಾಡುತ್ತದೆ ಮತ್ತು ಯಾವಾಗ ಶೋಧನೆ ಅಥವಾ ವಾತಾಯನ ಅಗತ್ಯವಿರಬಹುದು ಎಂದು ಸೂಚಿಸುತ್ತದೆ" ಎಂದು ವಿಟಾಲಿಕ್ ಬುಟೆರಿನ್ ಹೇಳಿದರು.
ಈ ಸಮಸ್ಯೆಯ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಪ್ರಾರಂಭಿಸಲು ಸ್ಟಾರ್ಟಪ್ ಆಶಿಸುತ್ತಿದ್ದು, ಈ ಬಗ್ಗೆ ಮಾತನಾಡಿದ ಸ್ಚಾರ್ಟಪ್ ನ ಅಭಿನವ್ ಗುಪ್ತಾ ಅವರು, 'ಈ ಪಾಲುದಾರಿಕೆಯೊಂದಿಗೆ, ನಾವು 600,000 ಚದರ ಮೀಟರ್ಗಳ ಒಳಾಂಗಣ ಸ್ಥಳಗಳನ್ನು ಕವರ್ ಮಾಡಲು ಉದ್ದೇಶಿಸಿದ್ದೇವೆ, ಇದನ್ನು ಬಬಲ್ ಕೊರ್ಸಿ-ರೊಸೆಂತಾಲ್ ಬಾಕ್ಸ್ಗಳ 10,000 ಘಟಕಗಳ ಸಹಾಯದಿಂದ ಶಾಲೆಗಳು, ಆರೋಗ್ಯ ಸೌಲಭ್ಯಗಳು ಇತ್ಯಾದಿ ಸಾರ್ವಜನಿಕ ಸ್ಥಳಗಳಿಗೆ ರಕ್ಷಿಸಲಾಗುವುದು" ಎಂದು ಹೇಳಿದರು. ಈ ಬಾಕ್ಸ್ DYI (ನೀವೇ ತಯಾರಿಸಿ) ಏರ್ ಪ್ಯೂರಿಫೈಯರ್ ಆಗಿದ್ದು, ಇದನ್ನು ಅಮೆರಿಕ ಮೂಲದ ಪರಿಸರ ಎಂಜಿನಿಯರ್ನಿಂದ ಸಾಂಕ್ರಾಮಿಕ ಸಮಯದಲ್ಲಿ ಅಭಿವೃದ್ಧಿಪಡಿಸಲಾಗಿತ್ತು ಎಂದು ಹೇಳಿದರು.