ಚಿನ್ನಕ್ಕೂ ಕಾಲಿಟ್ಟ ಧರ್ಮ ಸಂಘರ್ಷ: ಅಕ್ಷಯ ತೃತೀಯಕ್ಕೆ ಮುಸ್ಲಿಂ ಅಂಗಡಿಗಳಿಂದ ಚಿನ್ನ ಖರೀದಿಸದಂತೆ ಅಭಿಯಾನ
ಹಿಂದೂ-ಮುಸ್ಲಿಂ ಧರ್ಮಗಳ ಮಧ್ಯೆ ಎರಡು ಗುಂಪುಗಳ ಮಧ್ಯೆ ಎದ್ದಿರುವ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಿಜಾಬ್ ವಿವಾದದಿಂದ ಆರಂಭವಾಗಿ ಹಲಾಲ್ ಮಾಂಸ ಖರೀದಿಗೆ ನಿಷೇಧ, ಜಾತ್ರೆ-ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಂದ ಸಾಮಾನು ಖರೀದಿಸಬಾರದೆಂಬ ಕಟ್ಟುನಿಟ್ಟು ಈಗ ಚಿನ್ನದ ಅಂಗಡಿಯವರೆಗೂ ಬಂದು ನಿಂತಿದೆ.
Published: 25th April 2022 10:07 AM | Last Updated: 25th April 2022 02:00 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹಿಂದೂ-ಮುಸ್ಲಿಂ ಧರ್ಮಗಳ (Hindu-Muslim) ಮಧ್ಯೆ ಎರಡು ಗುಂಪುಗಳ ಮಧ್ಯೆ ಎದ್ದಿರುವ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಿಜಾಬ್ ವಿವಾದದಿಂದ ಆರಂಭವಾಗಿ ಹಲಾಲ್ ಮಾಂಸ ಖರೀದಿಗೆ ನಿಷೇಧ, ಜಾತ್ರೆ-ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಂದ ಸಾಮಾನು ಖರೀದಿಸಬಾರದೆಂಬ ಕಟ್ಟುನಿಟ್ಟು ಈಗ ಚಿನ್ನದ ಅಂಗಡಿಯವರೆಗೂ ಬಂದು ನಿಂತಿದೆ.
ಮುಸ್ಲಿಂ ಧರ್ಮದವರ ಚಿನ್ನದ ಅಂಗಡಿಗಳು, ಮಳಿಗೆಗಳಿಂದ ಹಿಂದೂಗಳು ಬರುವ ಅಕ್ಷಯ ತೃತೀಯಕ್ಕೆ (Akshaya Tritiya) ಚಿನ್ನ ಖರೀದಿಸಬಾರದೆಂದು ಹಿಂದೂಪರ ಸಂಘಟನೆಗಳು ಮುಖ್ಯವಾಗಿ ಪ್ರಮೋದ್ ಮುತಾಲಿಕ್ ಅವರ ಶ್ರೀರಾಮ ಸೇನೆ ಆಗ್ರಹಿಸುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಶೇಕಡಾ 30ರಷ್ಟು ಚಿನ್ನದ ವ್ಯಾಪಾರಿಗಳಿದ್ದು ಅದರಲ್ಲಿ ಶೇಕಡಾ 10ರಷ್ಟು ಮುಸ್ಲಿಂ ವ್ಯಾಪಾರಿಗಳಿದ್ದಾರೆ. ಇಂತಹ ಅಭಿಯಾನಗಳು ಖಂಡಿತಾ ಒಳ್ಳೆಯದಲ್ಲ, ಇದು ಎರಡೂ ಧರ್ಮದವರ ಸಂಘರ್ಷಕ್ಕೆ ಪುಷ್ಟಿ ನೀಡುತ್ತದೆ, ಸರ್ವ ಜನಾಂಗದ ಶಾಂತಿಯ ತೋಟ ಎನಿಸಿರುವ ಕರ್ನಾಟಕ ರಾಜ್ಯದ ಜನತೆಗೆ ಇದು ಒಳ್ಳೆಯದಲ್ಲ ಎನ್ನುತ್ತಾರೆ ಚಿನ್ನದ ವ್ಯಾಪಾರಿಯಾಗಿರುವ ಜೆಡಿಎಸ್ ನಾಯಕ ಟಿ ಎ ಶರವಣ.
ಇದನ್ನೂ ಓದಿ: ನೆಟ್ಟಿಗರ ಕೋಪಕ್ಕೆ ಗುರಿಯಾದ ಕರೀನಾ ಕಪೂರ್ ಖಾನ್ ನಟನೆಯ ಜಾಹೀರಾತು!
ರಾಜ್ಯಾದ್ಯಂತ ಮುಸ್ಲಿಮರ ಅಂಗಡಿಗಳಲ್ಲಿ ಬಂಗಾರ ಖರೀದಿಸಬೇಡಿ, ಹಿಂದೂಗಳ ಅಂಗಡಿಗಳಲ್ಲಿಯೇ ಚಿನ್ನ(Gold) ಖರೀದಿಸಿ ಎಂದು ಪ್ರಮೋದ್ ಮುತಾಲಿಕ್ ಅಭಿಯಾನ ಆರಂಭಿಸಿದ್ದಾರೆ. ಮುಸ್ಲಿಮರ ಅಂಗಡಿಗಳಲ್ಲಿ ಚಿನ್ನ ಖರೀದಿಸಿದರೆ ಹಣ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತದೆ ಎಂದು ಕಿಡಿಕಾರಿದ್ದಾರೆ.