ಕನಿಷ್ಠ ಬೆಂಬಲ ಬೆಲೆಯಡಿ ರಾಗಿ ಖರೀದಿ: ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೆರಿ
ಸೋಮವಾರದಿಂದ ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮದಡಿ ರಾಗಿಯನ್ನು ಸರಕಾರ ಖರೀದಿಸಲಿದ್ದು, ಪ್ರತಿ ಕ್ವಿನಿಟಾಲ್ಗೆ 3377 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
Published: 25th April 2022 12:20 PM | Last Updated: 25th April 2022 12:20 PM | A+A A-

ಕವಿತಾ ಮನ್ನಿಕೇರಿ
ಚಿತ್ರದುರ್ಗ: ಸೋಮವಾರದಿಂದ ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮದಡಿ ರಾಗಿಯನ್ನು ಸರಕಾರ ಖರೀದಿಸಲಿದ್ದು, ಪ್ರತಿ ಕ್ವಿನಿಟಾಲ್ಗೆ 3377 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ರಾಗಿ ಖರೀದಿಗೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದ್ದು, ಕಳೆದ 2020-21ನೇ ಸಾಲಿನಲ್ಲಿ ಸುಮಾರು 76,646.50 ಟನ್ ರಾಗಿಯನ್ನು ಖರೀದಿಸಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಚಿತ್ರದುರ್ಗ ಜಿಲ್ಲೆ ಅತಿ ಹೆಚ್ಚು ರಾಗಿಯನ್ನು ಉತ್ಪಾದಿಸುತ್ತಿದ್ದು, ಎಂಎಸ್ಪಿ ಮೂಲಕ ಖರೀದಿ ವಿಚಾರವನ್ನು ಹೊಸದುರ್ಗ ಗೂಳಿಹಟ್ಟಿಯ ಶಾಸಕ ಡಿ.ಶೇಖರ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು, ನಂತರ ಸರ್ಕಾರ ರಾಗಿ ಖರೀದಿಯ ಭರವಸೆ ನೀಡಿತ್ತು. ಶ್ರೀರಾಂಪುರ, ಹೊಸದುರ್ಗ, ಚಿಕ್ಕಜಾಜೂರು ಮತ್ತು ಚಿತ್ರದುರ್ಗದಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.