ಕೊಡಗು: ವನ್ಯ ಜೀವಿ ದಾಳಿಯ ಭಯ; ಕಾಫಿ ಬೆಳೆಗಾರರಿಗೆ ಕಾರ್ಮಿಕರ ಕೊರತೆಯ ಸಮಸ್ಯೆ!
ದಕ್ಷಿಣ ಕೊಡಗಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಹ ಪ್ರದೇಶಗಳಲ್ಲಿ ವನ್ಯಜೀವಿ ದಾಳಿಯಿಂದಾಗಿ ಕಾಫಿ ಎಸ್ಟೇಟ್ ನಿರ್ವಹಣೆಯಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ನಿರ್ವಹಣೆ ಸಮಸ್ಯೆಯಲ್ಲಿ ತೀವ್ರ ಸಮಸ್ಯೆ ತಲೆದೋರುತ್ತಿದೆ.
Published: 26th April 2022 07:20 PM | Last Updated: 26th April 2022 08:06 PM | A+A A-

ಸಾಂದರ್ಭಿಕ ಚಿತ್ರ
ಮಡಿಕೇರಿ: ದಕ್ಷಿಣ ಕೊಡಗಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಹ ಪ್ರದೇಶಗಳಲ್ಲಿ ವನ್ಯಜೀವಿ ದಾಳಿಯಿಂದಾಗಿ ಕಾಫಿ ಎಸ್ಟೇಟ್ ನಿರ್ವಹಣೆಯಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ನಿರ್ವಹಣೆ ಸಮಸ್ಯೆಯಲ್ಲಿ ತೀವ್ರ ಸಮಸ್ಯೆ ತಲೆದೋರುತ್ತಿದೆ.
ವನ್ಯಜೀವಿಗಳು ಆಗಾಗ್ಗೆ ವಸತಿ ಪ್ರದೇಶ ಪ್ರವೇಶಿಸಿ ಜನ, ಜಾನುವಾರಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ಕಾರ್ಮಿಕರ ಕೊರತೆ ಉದ್ಬವಿಸಿದೆ. ಕಳೆದ ವರ್ಷ ಹುಲಿ ದಾಳಿಯಿಂದ ಮೂವರು ಮೃತಪಟ್ಟಿದ್ದಾರೆ. ಈ ವರ್ಷ ಮಾರ್ಚ್ 28 ರಂದು ಹುಲಿ ದಾಳಿಯಿಂದ ಕಾಫಿ ಎಸ್ಟೇಟ್ ನಲ್ಲಿನ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದರು. ಈ ಪ್ರದೇಶದಲ್ಲಿ ಆಗಾಗ್ಗೆ ಆನೆಗಳ ಓಡಾಟವೂ ವರದಿಯಾಗುತ್ತಲೇ ಇದೆ.
ಕಳೆದ ತಿಂಗಳು ಒಬ್ಬರನ್ನು ಬಲಿತೆಗೆದುಕೊಂಡ ಹುಲಿಯ ಹುಡುಕಾಟದಲ್ಲಿ ಅರಣ್ಯ ಇಲಾಖೆ ತೊಡಗಿಸಿಕೊಂಡಿದ್ದಾರೆ. ಆದರೆ, ಅವರ ಪ್ರಯತ್ನ ಇನ್ನೂ ಕೈಗೊಂಡಿಲ್ಲ.ಹುಲಿಯ ದಾಳಿಯಿಂದಾಗಿ ಕಾರ್ಮಿಕರು ಎಸ್ಟೇಟ್ ಗೆ ಬರಲು ಭಯಪಡುತ್ತಿದ್ದಾರೆ ಒಂದು ವೇಳೆ ಕಾರ್ಮಿಕರೂ ಬಂದರೂ, ಕಾರ್ಮಿಕರ ಸುರಕ್ಷತೆ ಬಗ್ಗೆ ಎಸ್ಟೇಟ್ ಮಾಲೀಕರಿಗೆ ಯಾವಾಗಲೂ ಭಯ ಕಾಡುತ್ತಲೇ ಇರುತ್ತದೆ ಎಂದು ಕಾಫಿ ಬೆಳೆಗಾರ ಹರೀಶ್ ಮಾದಪ್ಪ ಹೇಳಿದರು.
ಬಿ. ಶೆಟ್ಟಿಗೆರಿ, ಹುಡಿಕೇರಿ, ಬೇಗೂರು, ಮತ್ತಿತರ ಕಡೆಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ವರ್ಷ ಅನೇಕ ಮನುಷ್ಯರು ಹಾಗೂ ಜನ ಜನುವಾರಗಳನ್ನು ಬಲಿತೆಗೆದುಕೊಂಡಿದೆ. ಜೀವ ಭಯದಿಂದಾಗಿ ಕಾರ್ಮಿಕರು ಯಾರೂ ಕೂಡಾ ಕೆಲಸಕ್ಕೆ ಬರುತ್ತಿಲ್ಲ ಎಂದು ಬಿ ಶೆಟ್ಟಿಗೆರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಗಣಪತಿ ತಿಳಿಸಿದರು.
ಮೂರು ದಿನಗಳ ಹಿಂದಷ್ಟೇ ಮೂರು ಕಾಡಾನೆಗಳು ತಮ್ಮ ಎಸ್ಟೇಟ್ ಗೆ ಲಗ್ಗೆ ಹಾಕಿ ಬೆಳೆಯನೆಲ್ಲಾ ಹಾಳು ಮಾಡಿವೆ. ಹೆಚ್ಚುತ್ತಿರುವ ವನ್ಯಜೀವಿಗಳ ಸಂಘರ್ಷ, ಸಣ್ಣ ಕಾಫಿ ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.