
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಂಸ್ಥೆಯ ನಿಯಮಗಳ ಪ್ರಕಾರ ಕೆಲಸದಿಂದ ವಜಾ ಮಾಡಿದ್ದಕ್ಕಾಗಿ ಮ್ಯಾನೇಜರ್ ಗೆ ವ್ಯಕ್ತಿಯೋರ್ವ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೇಶದ ಮುಂಚೂಣಿಯಲ್ಲಿರುವ ಪೀಠೋಪಕರಣ ತಯಾರಿಕಾ ಕಂಪನಿ ಫೆದರ್ಲೈಟ್ನ 50 ವರ್ಷದ ಡೆಪ್ಯುಟಿ ಮ್ಯಾನೇಜರ್ ಮೇಲೆ ವಜಾಗೊಂಡ ಉದ್ಯೋಗಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದು, ಅನಧಿಕೃತ ಗೈರುಹಾಜರಿಗಾಗಿ ಅವರ ಸೇವೆಯನ್ನು ಮೊದಲು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ಪ್ರೀತಿಸಲೊಪ್ಪದ ಯುವತಿ ಮೇಲೆ ಆ್ಯಸಿಡ್ ಎರಚಿ ಪಾಗಲ್ ಪ್ರೇಮಿಯ ಹುಚ್ಚಾಟ
ಕಳೆದ ಗುರುವಾರ ಸಂಜೆ 4.45 ರ ಸುಮಾರಿಗೆ ಬಿಡದಿಯ ಹೆಜ್ಜಾಲ ಸರ್ಕಲ್ನಲ್ಲಿರುವ ಕಂಪನಿ ಆವರಣಕ್ಕೆ ಲಾರಿಗಳಿಗೆ ಗೇಟ್ ತೆರೆದಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹರೀಶ್ ಗೌಡ (26) ಎಂಬಾತ ಸಂಸ್ಥೆಯ ಆವರಣ ಪ್ರವೇಶಿಸಿದ್ದ. ಕಂಪನಿಯ ಮರಗೆಲಸ ವಿಭಾಗದಲ್ಲಿ ಸಣ್ಣ, ಅಂಟು ತುರಿಯುವ ಚಾಕುವನ್ನು ಹೊರತೆಗೆದು ಸಂತ್ರಸ್ತ ಆರ್ ಉಮೇಶ್ ಅವರ ಮುಖದ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಕವಿತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, "ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ". ಆತನ ವಿರುದ್ಧ ಅತಿಕ್ರಮಣ (IPC 448) ಮತ್ತು ಸ್ವಯಂಪ್ರೇರಣೆಯಿಂದ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಂಭೀರವಾದ ಗಾಯ ಮಾಡುವಿಕೆ (IPC 326) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೀತಂ ವಿಶ್ವವಿದ್ಯಾಲಯದಲ್ಲಿ ಉಗಾಂಡ ವಿದ್ಯಾರ್ಥಿನಿ ಸಾವು: ಹಾಸ್ಟೆಲ್ ಕ್ಯಾಂಪಸ್ ನಲ್ಲಿ ಬಿಗುವಿನ ವಾತಾವರಣ
“ಮರದ ಕೆಲಸ ಮಾಡುವ ವಿಭಾಗದಲ್ಲಿ ಸಹಾಯಕರಾಗಿದ್ದ ಆರೋಪಿ ಹರೀಶ್ ನನ್ನು ಕಿಶೋರ್ ಮ್ಯಾನ್ಪವರ್ ಏಜೆನ್ಸಿಯಿಂದ ಹೊರಗುತ್ತಿಗೆ ಪಡೆದು ಕಳೆದ ಆರು ತಿಂಗಳಿನಿಂದ ಕೆಲಸ ಮಾಡಿಸುತ್ತಿದ್ದರು. ಈತ ನಿಯಮಬಾಹಿರವಾಗಿ, ಅನುಮತಿ ಇಲ್ಲದೆ ರಜೆ ತೆಗೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಉಮೇಶ್ ಮತ್ತು ಮೇಲ್ವಿಚಾರಕ ರಾಜೇಶ್ ಅವರು ಅನಧಿಕೃತ ಗೈರುಹಾಜರಿಯ ಬಗ್ಗೆ ಆರೋಪಿ ಹರೀಶ್ ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಆತ ರಜೆ ತೆಗೆದುಕೊಳ್ಳುವುದನ್ನು ಮುಂದುವರೆಸಿದ್ದ. ನಂತರ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು ಎಂದು ದೂರು ಸ್ವೀಕರಿಸಿರುವ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುವಕರ ಮೇಲೆ ಹಲ್ಲೆ ಆರೋಪ: ಬಜ್ಪೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಅಮಾನತಿಗೆ ರಾಜಕೀಯ ಬಣ್ಣ!
ಇನ್ನು ದಾಳಿ ಬಳಿಕ ಇತರ ನೌಕರರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಆರೋಪಿ ಹರೀಶ್ ಗೌಡ ತನ್ನ ದ್ವಿಚಕ್ರ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಮತ್ತು ಅಪರಾಧ ನಡೆದ ಸ್ಥಳದಲ್ಲಿ ಚಾಕುವನ್ನು ಎಸೆದಿದ್ದಾನೆ. ಬಳಿಕ ದಾಳಿಗೊಳಗಾದ ಮ್ಯಾನೇಜರ್ ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಇದೊಂದು ಸಣ್ಣ ಘಟನೆಯಾಗಿದ್ದು, ಸಂತ್ರಸ್ತ ಮ್ಯಾನೇಜರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕವಿತಾ TNIE ಗೆ ತಿಳಿಸಿದ್ದಾರೆ.