ಹಣ ಹಿಂತಿರುಗಿಸದ ಶ್ರೀಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್: ಹೂಡಿಕೆದಾರರಿಂದ ಪ್ರತಿಭಟನೆ
ಶ್ರೀಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ನ ನೂರಾರು ಹೂಡಿಕೆದಾರರು ನಿನ್ನೆ ಬುಧವಾರ ಗಾಂಧಿ ಬಜಾರ್ನಲ್ಲಿ ಪ್ರತಿಭಟನೆ ನಡೆಸಿ, ಸೊಸೈಟಿಯ ಪದಾಧಿಕಾರಿಗಳು ಹೂಡಿಕೆದಾರರಿಗೆ ಹಣ ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Published: 28th April 2022 02:21 PM | Last Updated: 28th April 2022 02:36 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಶ್ರೀಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ನ ನೂರಾರು ಹೂಡಿಕೆದಾರರು(Srishailagiri Souhardha Credit Co-operative Limited) ನಿನ್ನೆ ಬುಧವಾರ ಗಾಂಧಿ ಬಜಾರ್ನಲ್ಲಿ ಪ್ರತಿಭಟನೆ ನಡೆಸಿ, ಸೊಸೈಟಿಯ ಪದಾಧಿಕಾರಿಗಳು ಹೂಡಿಕೆದಾರರಿಗೆ ಹಣ ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆಚ್ಚಿನ ಹೂಡಿಕೆದಾರರು ತಮ್ಮ ಪಿಂಚಣಿಯನ್ನು ಬ್ಯಾಂಕ್ನಲ್ಲಿ ಹೂಡಿಕೆ ಮಾಡಿದ ಹಿರಿಯ ನಾಗರಿಕರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹೂಡಿಕೆದಾರರು ಯಾವುದೇ ಆದಾಯವನ್ನು ಸಹಕಾರ ಸೊಸೈಟಿಯಿಂದ ಪಡೆದಿಲ್ಲ. ಪದೇ ಪದೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಪ್ರಯೋಜನವಾಗಿಲ್ಲ. ಪ್ರತಿಭಟನಾಕಾರರು ಪ್ರಕರಣ ದಾಖಲಿಸುವಂತೆ ಬಸವನಗುಡಿ ಪೊಲೀಸರ ಮೊರೆ ಹೋಗಿದ್ದು, ಅಲ್ಲಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಹೂಡಿಕೆದಾರರಿಗೆ ಬಡ್ಡಿ ಮೊತ್ತ ಮತ್ತು ಹೂಡಿಕೆ ಹಣವೇ ಸಿಕ್ಕಿಲ್ಲ. 2020 ರಲ್ಲಿ, ಠೇವಣಿ ಮಾಡಿದ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಖಾಸಗಿ ಸಾಲದಾತರಿಂದ ಸಾಲವನ್ನು ತೆಗೆದುಕೊಳ್ಳಬೇಕಾಯಿತು. ಇನ್ನೂ ಖಾಸಗಿ ಸಾಲಗಾರನಿಗೆ ಬಡ್ಡಿಯನ್ನು ಪಾವತಿಸುತ್ತಿದ್ದೇನೆ. ನನ್ನ ಹಣವನ್ನು ಮರಳಿ ಪಡೆಯಲು ಕಾಯುತ್ತಿದ್ದೇನೆ ಎಂದು ಸಂತ್ರಸ್ತರಲ್ಲಿ ಒಬ್ಬರಾದ ಕುಮಾರ್ ಸಿಎ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.