ಏರ್ ಟೆಲ್ ಭಾರ್ತಿಗೆ ಬುದ್ದಿ ಕಲಿಸಿದ ನಿವೃತ್ತ ಚಾರ್ಟೆರ್ಡ್ ಅಕೌಂಟೆಂಟ್: 20 ರೂಪಾಯಿ ಮರಳಿಸಲು ಗ್ಯಾಹಕ ವ್ಯಾಜ್ಯ ಆಯೋಗ ಆದೇಶ!
ಭಾರ್ತಿ ಏರ್ಟೆಲ್ ಲಿಮಿಟೆಡ್ಗೆ 20 ರೂಪಾಯಿ ಮರುಪಾವತಿ ಮಾಡುವಂತೆ ಮತ್ತು ಗ್ರಾಹಕ ಆಯೋಗದ ಮುಂದೆ ಆನ್ಲೈನ್ ಕಾನೂನು ಸಂಸ್ಥೆಯ ಸಹಾಯದಿಂದ ಸ್ವಂತವಾಗಿ ಕಾನೂನು ಹೋರಾಟ ನಡೆಸಿದ ಎ.ಎಂ.ಹುಸೇನ್ ಷರೀಫ್ಗೆ ಹಾನಿ ಮತ್ತು ದಾವೆ ವೆಚ್ಚಗಳಿಗೆ ತಲಾ 500 ರೂಪಾಯಿ ಪಾವತಿಸಲು ಆದೇಶಿಸಿದ ಘಟನೆ ನಡೆದಿದೆ.
Published: 29th April 2022 02:21 PM | Last Updated: 29th April 2022 02:28 PM | A+A A-

ಏರ್ ಟೆಲ್
ಬೆಂಗಳೂರು: ಭಾರ್ತಿ ಏರ್ಟೆಲ್ ಲಿಮಿಟೆಡ್ಗೆ 20 ರೂಪಾಯಿ ಮರುಪಾವತಿ ಮಾಡುವಂತೆ ಮತ್ತು ಗ್ರಾಹಕ ಆಯೋಗದ ಮುಂದೆ ಆನ್ಲೈನ್ ಕಾನೂನು ಸಂಸ್ಥೆಯ ಸಹಾಯದಿಂದ ಸ್ವಂತವಾಗಿ ಕಾನೂನು ಹೋರಾಟ ನಡೆಸಿದ ಎ.ಎಂ.ಹುಸೇನ್ ಷರೀಫ್ಗೆ ಹಾನಿ ಮತ್ತು ದಾವೆ ವೆಚ್ಚಗಳಿಗೆ ತಲಾ 500 ರೂಪಾಯಿ ಪಾವತಿಸಲು ಆದೇಶಿಸಿದ ಘಟನೆ ನಡೆದಿದೆ.
ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಷರೀಫ್ ದೊಡ್ಡಕಾನಳ್ಳಿಯಲ್ಲಿ ತಮ್ಮ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ. 49 ರೂಪಾಯಿಗಳನ್ನು ರಿಚಾರ್ಜ್ ಮಾಡಿ ಅದು 2021ರ ಆಗಸ್ಟ್ 4ರಂದು ಮುಗಿದಿತ್ತು. ನಂತರ ಆಗಸ್ಟ್ 7ರಂದು 20 ರೂಪಾಯಿ ಆನ್ ಲೈನ್ ನಲ್ಲಿ ರಿಚಾರ್ಜ್ ಮಾಡಿದ್ದರು, ರಿಚಾರ್ಜ್ ಮಾಡಿದ್ದಕ್ಕೆ ಮೆಸೇಜ್ ಬಂದಿತ್ತು.
ಟಾಕ್ ಟೈಮ್ 14.95 ರೂಪಾಯಿ ಆಗಿತ್ತು. ಆದರೆ ಆ ದಿನ ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ನಿಲ್ಲಿಸಲಾಯಿತು, ರೀಚಾರ್ಜ್ ಅಮಾನ್ಯವಾಗಿದೆ ಎಂದು ಸಂದೇಶ ಬಂದಿತ್ತು. ಹಣ ಕಳೆದುಕೊಂಡ ಷರೀಫ್ ಅವರು ಆನ್ಲೈನ್ ಕಾನೂನು ವೇದಿಕೆಯನ್ನು ಸಂಪರ್ಕಿಸಿದರು. ನವೆಂಬರ್ 2021 ರಲ್ಲಿ ಅತ್ಯಲ್ಪ ಶುಲ್ಕದೊಂದಿಗೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಹಳೆ ದೋಷಪೂರಿತ ಕ್ಯಾಮರಾ ವಿತರಣೆ: Paytm ವಿರುದ್ಧ ಕಾನೂನು ಸಂಘರ್ಷದಲ್ಲಿ ಬೆಂಗಳೂರು ಮಹಿಳೆಗೆ ಗೆಲುವು
ಬೆಂಗಳೂರು ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಏರ್ಟೆಲ್ಗೆ 20 ರೂಪಾಯಿ ಮರುಪಾವತಿ ಮಾಡುವಂತೆ ನಿರ್ದೇಶನ ನೀಡಿದ್ದು ಮಾತ್ರವಲ್ಲದೆ ಷರೀಫ್ಗೆ ಹಾನಿ ಮತ್ತು ದಾವೆ ವೆಚ್ಚವಾಗಿ ತಲಾ 500 ರೂಪಾಯಿ ಪಾವತಿಸಲು ಆದೇಶಿಸಿದೆ.
ಅನ್ಯಾಯದ ವ್ಯಾಪಾರ: ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ಮತ್ತು ಸದಸ್ಯರಾದ ವೈ.ಎಸ್.ತಮ್ಮಣ್ಣ ಮತ್ತು ಎಸ್.ಎಂ.ಶರಾವತಿ ಅವರನ್ನೊಳಗೊಂಡ ಆಯೋಗವು ದೂರುದಾರರು ಏರ್ಟೆಲ್ಗೆ ಪತ್ರ ವ್ಯವಹಾರ ನಡೆಸಿ ಲೀಗಲ್ ನೋಟಿಸ್ ನೀಡಿದ್ದರೂ, ದೂರುದಾರರಿಗೆ ಸ್ಪಂದಿಸಿರಲಿಲ್ಲ ಎಂದು ಹೇಳಿದೆ.
ಈ ತಿಂಗಳು ಪ್ರಕರಣ ಇತ್ಯರ್ಥ: ಏರ್ ಟೆಲ್ ಭಾರ್ತಿಯ 20 ರೂಪಾಯಿ ಯೋಜನೆ ಇಲ್ಲದಿರುವಾಗ ಹಣ ಸ್ವೀಕರಿಸಲು ಹೇಗೆ ಸಾಧ್ಯ, ಕೇವಲ 20 ರೂಪಾಯಿ ಎಂದು ಗ್ರಾಹಕರು ಸಾಮಾನ್ಯವಾಗಿ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಏರ್ ಟೆಲ್ ಗೆ ಒಂದು ಪಾಠವನ್ನು ಕಲಿಸಿ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಬೇಕೆಂದು ಗ್ರಾಹಕ ವ್ಯಾಜ್ಯ ಆಯೋಗದ ಮೊರೆ ಹೋದೆ ಎಂದು ಷರೀಫ್ ಹೇಳುತ್ತಾರೆ.