ಕಲ್ಲಿದ್ದಲು ಕೊರತೆ: 'ಆಪ್' ಸುಳ್ಳು ಹೇಳುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ- ಸಚಿವ ಪ್ರಹ್ಲಾದ್ ಜೋಶಿ
ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ‘ಸುಳ್ಳು ಹೇಳುವ ಅಭ್ಯಾಸ’ ಇದೆ ಇದ್ದು, ಕಲ್ಲಿದ್ದಲು ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಶನಿವಾರ ಹೇಳಿದ್ದಾರೆ.
Published: 30th April 2022 12:34 PM | Last Updated: 30th April 2022 01:47 PM | A+A A-

ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ‘ಸುಳ್ಳು ಹೇಳುವ ಅಭ್ಯಾಸ’ ಇದೆ ಇದ್ದು, ಕಲ್ಲಿದ್ದಲು ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದ ನೂತನ ನಾಯಕ ರಾಘವ್ ಚಡ್ಡಾ ಪಂಜಾಬ್‌ನ ಸೂಪರ್ ಮುಖ್ಯಮಂತ್ರಿ ಎಂದು ಕರೆಯಲ್ಪಡುವ ಭಗಂತ್ ಮಾನ್ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ) ಅರವಿಂದ್ ಕೇಜ್ರಿವಾಲ್‌ಗೆ ತುಂಬಾ ಹತ್ತಿರವಾಗಿದ್ದಾರೆ. ಈ ಪಕ್ಷಕ್ಕೆ ಸುಳ್ಳು ಹೇಳುವ ಅಭ್ಯಾಸವಿದೆ. ನನ್ನನ್ನು ಅವರು ಎಂದಿಗೂ ಭೇಟಿ ಮಾಡಿಲ್ಲ, ಮಾತುಕತೆ ನಡೆಸಿಲ್ಲ. ನನ್ನ ಹೆಸರು ಬಳಸಿಕೊಂಡು ಸುಳ್ಳು ಹೇಳುತ್ತಿದ್ದಾರೆಂದು ಹೇಳಿದ್ದಾರೆ.
ಇದನ್ನೂ ಓದಿ: ಕಲ್ಲಿದ್ದಲು ಬಿಕ್ಕಟ್ಟು: ರಾಹುಲ್ ಗಾಂಧಿಯನ್ನು 'ನಕಲಿ ಜ್ಯೋತಿಷಿ' ಎಂದ ಪ್ರಹ್ಲಾದ್ ಜೋಶಿ
ಈ ಹಿಂದೆ ಹೇಳಿಕೆ ನೀಡಿದ್ದ ಚಡ್ಡಾ ಅವರು, ಪಂಜಾಬ್ ಸೇರಿದಂತೆ 16 ರಾಜ್ಯಗಳು ಇನ್ನು ಒಂದು ಅಥವಾ ಎರಡು ದಿನಗಳ ಕಾಲ ಮಾತ್ರ ಕಲ್ಲಿದ್ದನ್ನು ಪೂರೈಕೆಯನ್ನು ನೋಡಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಕಲ್ಲಿದ್ದಲು ಸಮಸ್ಯೆ: ವಿದ್ಯುತ್ ಅಭಾವ ನೀಗಿಸಲು 657 ರೈಲುಗಳ ಸಂಚಾರ ರದ್ದುಗೊಳಿಸಿದ ಕೇಂದ್ರ
ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದರು. ಈ ವೇಳೆ ಸಚಿವರು ಕಲ್ಲಿದ್ದಲು ಕೊರತೆ ಇಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಪಂಜಾಬ್ ಸೇರಿ 16 ರಾಜ್ಯಗಳು ಇನ್ನೆರಡು ದಿನಗಳ ಕಾಲ ಕಲ್ಲಿದ್ದಲು ಪೂರೈಕೆಯನ್ನು ನೋಡಲಿದೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದೆ ಎಂದು ವ್ಯಂಗ್ಯವಾಡಿದ್ದರು.