
ಸಾಂಕೇತಿಕ ಚಿತ್ರ
ಬೆಂಗಳೂರು: ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ವಾಸವಿರುವ ಉತ್ತರ ಪ್ರದೇಶದ ಮೂವರು ಕಳ್ಳನನ್ನು ಹಿಡಿದು ಥಳಿಸಿದ್ದಕ್ಕಾಗಿ ಅವರ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಾಗಿದೆ.
ಕಳ್ಳನೋರ್ವ ತನ್ನ ಇಬ್ಬರು ಸಹಚರರೊಟ್ಟಿಗೆ ಮನೆಯೊಂದಕ್ಕೆ ಮಂಗಳವಾರ ಬೆಳ್ಳಂಬೆಳಿಗ್ಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದರು. ಶಬ್ದ ಕೇಳಿದ ಬಳಿಕ ಮೂವರು ವ್ಯಕ್ತಿಗಳು ಓರ್ವನನ್ನು ಹಿಡಿದರು ಆದರೆ ಇಬ್ಬರು ತಪ್ಪಿಸಿಕೊಂಡಿದ್ದರು.
ಕಳ್ಳನನ್ನು ಹಿಡಿದ ಬಳಿಕ ಪೊಲೀಸರಿಗೆ ಕರೆ ಮಾಡುವ ಬದಲು, ಆತನನ್ನು ಸತತ 3 ಗಂಟೆಗಳ ಕಾಲ ಕೂಡಿ ಹಾಕಿ ಥಳಿಸಿದ್ದರು. ಪೊಲೀಸರು ಮೊದಲು ಕಳ್ಳನ ವಿರುದ್ಧ ಪ್ರಕರಣ ದಾಖಲಿಸಿದ್ದು, ಬಳಿಕ ಆತನನ್ನು ಥಳಿಸಿದ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಾಜಿ ಸಚಿವ ಎಂಬಿ ಪಾಟೀಲರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನ: 35 ವರ್ಷದ ಆರೋಪಿ ಅಂದರ್
ಥಳಿತಕ್ಕೊಳಗಾದ ಕಳ್ಳ ಮುನಿವೆಂಕಟೇಶನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಷಿಕೇಶ್, ಅಬಿನಾಶ್, ರಾಜು ಯಾದವ್ ಎಂಬ ಮೂವರು ವ್ಯಕ್ತಿಗಳ ವಿರುದ್ಧ ಕಳ್ಳನಿಗೆ ಥಳಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿ 30,000 ರೂಪಾಯಿ ಹಾಗೂ ಒಂದು ಮೊಬೈಲ್ ಫೋನ್ ನ್ನು ದೋಚಿದ್ದ. ಕಳ್ಳನನ್ನು ಹಿಡಿದ ವ್ಯಕ್ತಿಗಳ ಧೈರ್ಯವನ್ನು ಮೆಚ್ಚುತ್ತೇವೆ ಆದರೆ ಕಾನೂನನ್ನು ಅವರ ಕೈಗೆ ತೆಗೆದುಕೊಳ್ಳಬಾರದಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.