ಪಿಯು ವಿದ್ಯಾರ್ಥಿಗಳ ಅರ್ಜಿ: ಕೆಇಎಗೆ ಹೈಕೋರ್ಟ್ ನೋಟಿಸ್

ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಅಂತಿಮ ರ್ಯಾಂಕ್ ನಿರ್ಧರಿಸುವಾಗ ತಮ್ಮ ದ್ವಿತೀಯ ಪಿಯುಸಿಯ ಅಂಕಗಳನ್ನು ಪರಿಗಣಿಸದಿರುವುದನ್ನು ವಿರೋಧಿಸಿ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ..
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಅಂತಿಮ ರ್ಯಾಂಕ್ ನಿರ್ಧರಿಸುವಾಗ ತಮ್ಮ ದ್ವಿತೀಯ ಪಿಯುಸಿಯ ಅಂಕಗಳನ್ನು ಪರಿಗಣಿಸದಿರುವುದನ್ನು ವಿರೋಧಿಸಿ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ನೋಟಿಸ್ ಜಾರಿ ಮಾಡಿದೆ. 

ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರು ಕೆಇಎಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನುಸೋಮವಾರಕ್ಕೆ ಮುಂದೂಡಿದರು. ಈ ವರ್ಷ ಸುಮಾರು 24,000 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು ತಮ್ಮ ಪಿಯು ಅಂಕಗಳನ್ನು ಅಂತಿಮ ಸಿಇಟಿ ಅಂಕಕ್ಕೆ ಸೇರಿಸದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಅರ್ಜಿದಾರರಾದ ಈಶ್ವರ್ ಮತ್ತು ಇತರರು ತಮ್ಮ ವಕೀಲ ಶತಾಬಿಶ್ ಶಿವಣ್ಣ ಅವರ ಮೂಲಕ, ಅಂಕಗಳನ್ನು ಪರಿಗಣಿಸದಿರುವುದು ಸಿಇಟಿ-2006 ಪ್ರವೇಶ ನಿಯಮಗಳ ಉಲ್ಲಂಘನೆಯಾಗಿದ್ದು, ತಮ್ಮ ರ್ಯಾಂಕ್‌ಗಳಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ. ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಪ್ರತಿಪಾದಿಸಿದರು.

ಸಿಇಟಿ ರ್ಯಾಂಕ್ ಗಳಿಗೆ 2021ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪರಿಗಣಿಸುವಂತೆ ಕೆಇಎಗೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೂ ಸಿಇಟಿ ಕೌನ್ಸೆಲಿಂಗ್‌ಗೆ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com