ಬೆಂಗಳೂರು: ಬೈಕ್ ನಲ್ಲಿ ಬಂದ ದರೋಡೆಕೋರರಿಂದ ಟೆಕ್ಕಿ ದರೋಡೆ
ಬೈಕ್ ನಲ್ಲಿ ಬಂದ ಇಬ್ಬರು ದರೋಡೆಕೋರರು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಮೊಬೈಲ್ ಫೋನ್ ದೋಚಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
Published: 09th August 2022 12:43 AM | Last Updated: 09th August 2022 12:43 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೈಕ್ ನಲ್ಲಿ ಬಂದ ಇಬ್ಬರು ದರೋಡೆಕೋರರು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಮೊಬೈಲ್ ಫೋನ್ ದೋಚಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ದುಬಾರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಸಾಫ್ಟ್ ವೇರ್ ಎಂಜಿನಿಯರ್ ಫೋನ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿಗಳು ಕತ್ತಲಲ್ಲಿ ಅವರ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಜಯಕೃಷ್ಣ ಚೈತನ್ಯ ದರೋಡೆಗೆ ಒಳಗಾದವರು. ಇವರು ಬಂಡೆಪಾಳ್ಯದ ಅಪಾರ್ಟ್‌ಮೆಂಟ್ ವೊಂದರಲ್ಲಿ ವಾಸವಾಗಿದ್ದಾರೆ. ಬಂಡೆಪಾಳ್ಯದ ಟೆನಿಸ್ ಕೋರ್ಟ್ ಬಳಿ ರಾತ್ರಿ 11.45ರ ಸುಮಾರಿಗೆ ದರೋಡೆ ಮಾಡಲಾಗಿದೆ. ಮೊಬೈಲ್ ಬೆಲೆ ಸುಮಾರು 36,000 ರೂಪಾಯಿ ಎಂದು ಹೇಳಲಾಗಿದೆ. ಬಂಡೆಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.