ಜೆಇಇ ಮುಖ್ಯ ಪರೀಕ್ಷೆ: ರಾಜ್ಯದ ಸಾತ್ವಿಕ್ ಗೆ ನೂರಕ್ಕೆ ನೂರು ಅಂಕ!

ಜಂಟಿ ಪ್ರವೇಶ ಪರೀಕ್ಷೆ(JEE)ಯ ಮುಖ್ಯ ಪರೀಕ್ಷೆ-2022ರಲ್ಲಿ ರ್ಯಾಂಕ್ ಪಟ್ಟಿಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ಮೊದಲ ಸ್ಥಾನ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ 23 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ ನಾರಾಯಣ ಓಲಿಂಪಿಯಾಡ್ ಶಾಲೆಯ ಬೊಯ ಹರೇನ್ ಸಾತ್ವಿಕ್ ಅವರಿಗೆ ಮೊದಲ ಸ್ಥಾನ ಸಿಕ್ಕಿದೆ. 
ಪೋಷಕರೊಂದಿಗೆ ಸಾತ್ವಿಕ್
ಪೋಷಕರೊಂದಿಗೆ ಸಾತ್ವಿಕ್

ಬೆಂಗಳೂರು: ಜಂಟಿ ಪ್ರವೇಶ ಪರೀಕ್ಷೆ(JEE)ಯ ಮುಖ್ಯ ಪರೀಕ್ಷೆ-2022ರಲ್ಲಿ ರ್ಯಾಂಕ್ ಪಟ್ಟಿಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ಮೊದಲ ಸ್ಥಾನ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ 23 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ ನಾರಾಯಣ ಓಲಿಂಪಿಯಾಡ್ ಶಾಲೆಯ ಬೊಯ ಹರೇನ್ ಸಾತ್ವಿಕ್ ಅವರಿಗೆ ಮೊದಲ ಸ್ಥಾನ ಸಿಕ್ಕಿದೆ. 

ನಿನ್ನೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಜೆಇಇ ಮುಖ್ಯ ಪರೀಕ್ಷೆ-2022ರ ಪೇಪರ್ -1 ನ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಬಾರಿ ದೇಶಾದ್ಯಂತ 8,72, 432 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಬೊಯ ಹರೇನ್ ಸಾತ್ವಿಕ್ ಶೇಕಡಾ 100ರಷ್ಟು ಫಲಿತಾಂಶ ಗಳಿಸಿ ಅಖಿಲ ಭಾರತ ಮಟ್ಟದಲ್ಲಿ ನಂಬರ್ 1 ರ್ಯಾಂಕ್ ಗಳಿಸಿದ್ದಾರೆ. ದೇಶದಲ್ಲಿ ಶೇಕಡಾ 100 ರ್ಯಾಂಕ್ ಗಳಿಸಿದ 23 ವಿದ್ಯಾರ್ಥಿಗಳಲ್ಲಿ ಕರ್ನಾಟಕದಿಂದ ಸಾತ್ವಿಕ್ ಮಾತ್ರ ಸ್ಥಾನ ಪಡೆದಿದ್ದಾರೆ.

ಸಾತ್ವಿಕ್ ಪರೀಕ್ಷೆಗೆ ತಯಾರಿ ನಡೆಸಿದ್ದು ಹೇಗೆ?: ನಂಬರ್ 1 ರ್ಯಾಂಕ್ ಪಡೆಯಲು ತಾವು ನಡೆಸಿದ ಅಧ್ಯಯನವನ್ನು ಸಾತ್ವಿಕ್ ಹೀಗೆ ಹೇಳಿಕೊಳ್ಳುತ್ತಾರೆ. ಮುಖ್ಯ ಪರೀಕ್ಷೆಗೆ ಮುನ್ನ ನಾನು ಅಣಕು ಪರೀಕ್ಷೆ(Mock test) ತೆಗೆದುಕೊಂಡೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಮೇಲೆ ಹೆಚ್ಚಿನ ಗಮನ ಹರಿಸಿದ್ದೆ ಎಂದರು.

ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆದು ಕಂಪ್ಯೂಟರ್ ಸೈನ್ಸ್ ನಲ್ಲಿ ಮುಂದಿನ ಪದವಿ ಗಳಿಸುವ ಕನಸು ಕಂಡಿರುವ ಸಾತ್ವಿಕ್ ಜೆಇಇ ಅಡ್ವಾನ್ಸ್ ಡ್ ಪರೀಕ್ಷೆ ಬರೆಯುವ ಯೋಚನೆಯಲ್ಲಿ ಕೂಡ ಇದ್ದಾರೆ. ಭೌತಶಾಸ್ತ್ರ, ಗಣಿತಶಾಸ್ತ್ರದಲ್ಲಿ 100ಕ್ಕೆ 100, ರಸಾಯನಶಾಸ್ತ್ರದಲ್ಲಿ ಶೇಕಡಾ 98.98 ಅಂಕ ಗಳಿಸಿದ್ದಾರೆ.

ದೇಶದಲ್ಲಿ 100 ಶೇಕಡಾ ಅಂಕ ಗಳಿಸಿದ ನಾಲ್ಕು OBC-NCL ವರ್ಗದ ವಿದ್ಯಾರ್ಥಿಗಳಲ್ಲಿ ಸಾಥ್ವಿಕ್ ಕೂಡ ಒಬ್ಬರು. ಈ ಮಧ್ಯೆ, ಎನ್ಟಿಎ ಹೊರಡಿಸಿದ ಅಂಕಿಅಂಶಗಳ ಪ್ರಕಾರ, ಪವಿತ್ರಾ ಗುಪ್ತಾ ಶೇಕಡಾ 99.94 ರೊಂದಿಗೆ ಕರ್ನಾಟಕದ ಮಹಿಳಾ ಟಾಪರ್ ಆಗಿದ್ದಾರೆ. ಕರ್ನಾಟಕದ ವಿದ್ಯಾರ್ಥಿ ತನ್ಮಯ್ ಗೆಜಪತಿ ಅವರು ಪರಿಶಿಷ್ಟ ಪಂಗಡದ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಟಾಪರ್ ಆಗಿದ್ದು, ಶೇಕಡಾ 99.94 ಅಂಕ ಗಳಿಸಿದ್ದಾರೆ.

ಇಬ್ಬರು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಟಾಪರ್‌ಗಳಾದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅಪೂರ್ವ್ ಟಂಡನ್ ಮತ್ತು ನಾರಾಯಣ ಇ-ಟೆಕ್ನೋ ಸ್ಕೂಲ್‌ನ ಶಿಶಿರ್ ಆರ್‌ಕೆ ಅವರು ಅಗ್ರ 100 ರ್ಯಾಂಕಿಂಗ್‌ನಲ್ಲಿದ್ದಾರೆ, ಶಿಶಿರ್ ಅಖಿಲ ಭಾರತ ಮಟ್ಟದಲ್ಲಿ 56 ಮತ್ತು ಅಪೂರ್ವ್ 71ನೇ ರ್ಯಾಂಕ್ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com