ಬೆಂಗಳೂರು: ನಿವೃತ್ತ ಶಿಕ್ಷಕಿಯ ಸಿಮ್ ಕದ್ದು 3.45 ಲಕ್ಷ ರು. ಹಣ ಎಗರಿಸಿದ್ದ ಚಾಲಕ ಆರೆಸ್ಟ್
ನಿವೃತ್ತ ಶಿಕ್ಷಕಿಯೊಬ್ಬರ ಸಿಮ್‌ಕಾರ್ಡ್ ಕದ್ದು, ಅದರ ಮೂಲಕ ಬ್ಯಾಂಕ್ ಖಾತೆ ವಹಿವಾಟು ನಡೆಸಿ 3.45 ಲಕ್ಷ ರು ಹಣ ಡ್ರಾ ಮಾಡಿಕೊಂಡು ವಂಚಿಸಿದ್ದ ಆರೋಪದಡಿ ಜಿ.ಬಿ. ಪ್ರಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Published: 09th August 2022 09:52 AM | Last Updated: 09th August 2022 01:43 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಿವೃತ್ತ ಶಿಕ್ಷಕಿಯೊಬ್ಬರ ಸಿಮ್‌ಕಾರ್ಡ್ ಕದ್ದು, ಅದರ ಮೂಲಕ ಬ್ಯಾಂಕ್ ಖಾತೆ ವಹಿವಾಟು ನಡೆಸಿ 3.45 ಲಕ್ಷ ರು ಹಣ ಡ್ರಾ ಮಾಡಿಕೊಂಡು ವಂಚಿಸಿದ್ದ ಆರೋಪದಡಿ ಜಿ.ಬಿ. ಪ್ರಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ದುದ್ದ ಹೋಬಳಿಯ ಗುನ್ನ ನಾಯಕನಹಳ್ಳಿ ನಿವಾಸಿ ಪ್ರಕಾಶ್, ಬಂಧಿತ ಆರೋಪಿ, ನಿವೃತ್ತ ಶಿಕ್ಷಕಿ ತಮ್ಮ ಕಾರು ಚಾಲನೆಗಾಗಿ ಪ್ರಕಾಶ್ ನನ್ನು ನೇಮಿಸಿಕೊಂಡಿದ್ದರು. ಆಕೆ ಬೆಳಗಿನ ಉಪಹಾರ ಸೇವಿಸಲು ಕಾರಿನಲ್ಲಿ ಮೊಬೈಲ್ ಬಿಟ್ಟು ರೆಸ್ಟೋರೆಂಟ್ ಗೆ ತೆರಳಿದ್ದರು. ಈ ವೇಳೆ ಆಕೆಯ ಮೊಬೈಲ್ ನಲ್ಲಿದ್ದ ಸಿಮ್ ಕದ್ದು ಬೇರೊಂದು ಡ್ಯೂಪ್ಲಿಕೇಟ್ ಸಿಮ್ ಹಾಕಿದ್ದ.
‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಖಾತೆ ಹೊಂದಿರುವ ದೂರುದಾರರು, ಖಾತೆಗೆ ತಮ್ಮ ಮೊಬೈಲ್ ಸಂಖ್ಯೆ ಜೋಡಿಸಿದ್ದರು. ಅದೇ ಸಂಖ್ಯೆ ಮೂಲಕ ಹಣದ ವಹಿವಾಟು ನಡೆಸುತ್ತಿದ್ದರು. ಇದನ್ನು ತಿಳಿದಿದ್ದ ಆರೋಪಿ, ಸಂಚು ರೂಪಿಸಿ ಖಾತೆಯಿಂದ ಹಣ ದೋಚಿದ್ದ’
‘ಕದ್ದ ಸಿಮ್ ಕಾರ್ಡ್ ಬೇರೊಂದು ಮೊಬೈಲ್‌ಗೆ ಹಾಕಿದ್ದ ಆರೋಪಿ, ದೂರುದಾರರ ಖಾತೆ ವ್ಯವಹಾರ ನಡೆಸಿದ್ದ. ಒನ್ ಟೈಂ ಪಾಸ್‌ವರ್ಡ್ (ಒಟಿಪಿ) ಸಹ ಅದೇ ಮೊಬೈಲ್‌ಗೆ ಬಂದಿದ್ದು. ಅದನ್ನು ದಾಖಲಿಸಿ 3.45 ಲಕ್ಷ ರು. ಡ್ರಾ ಮಾಡಿಕೊಂಡಿದ್ದ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಬಾಬ್ ರುಚಿಯಾಗಿಲ್ಲ ಎಂದು ಪತ್ನಿಗೆ ಚಾಕು ಇರಿದು ನೇಣು ಬಿಗಿದುಕೊಂಡ 'ಪತಿ ಮಹಾಶಯ'
ದ್ವಿಚಕ್ರ ವಾಹನ ಖರೀದಿ: ‘ವಂಚನೆಯಿಂದ ಬಂದ ಹಣದಲ್ಲೇ ಆರೋಪಿ, ದ್ವಿಚಕ್ರ ವಾಹನ ಖರೀದಿಸಿದ್ದ. 1.30 ಲಕ್ಷ ತನ್ನ ಖಾತೆಯಲ್ಲೇ ಇಟ್ಟುಕೊಂಡಿದ್ದ. ಆರೋಪಿಯನ್ನು ಬಂಧಿಸುತ್ತಿದ್ದಂತೆ ದ್ವಿಚಕ್ರ ವಾಹನ, ಬೈಕ್ ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ. ಖಾತೆ ವಹಿವಾಟು ಸ್ಥಗಿತಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ಆಕೆ ತನ್ನ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಮಾಡಿಸಿದ ನಂತರ ಹಣ ಡ್ರಾ ಆಗಿರುವ ಬಗ್ಗೆ ಮೆಸೇಜ್ ಬಂದಿದ್ದವು.
ನನ್ನ ತಾಯಿ ಯಾವುದೇ ಯುಪಿಐ ಖಾತೆಗಳನ್ನು ಹೊಂದಿಲ್ಲ ಅಥವಾ ಯಾವುದೇ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಂಡಿದ್ದಾರೆ ಎಂದು ಸಂತ್ರಸ್ತೆಯ ಮಗ ಹರೀಶ್ ಎಸ್ ಇಟಗಿ ಹೇಳಿದ್ದಾರೆ. ಆ್ಯಪ್ ಒಂದರ ಮೂಲಕ ಚಾಲಕನನ್ನು ನೇಮಿಸಿಕೊಳ್ಳಲಾಗಿತ್ತು.