ರೈತರಿಗೆ ಹೊಸ ಭರವಸೆ ನೀಡಿದ ಸರ್ಕಾರ; ಮಂಡ್ಯ ಮೈಷುಗರ್ ಕಾರ್ಖಾನೆ ಪುನಾರಂಭ

ಸಕ್ಕರೆ ನಾಡು ಮಂಡ್ಯದ ಹೆಸರಿಗೆ ಅನ್ವರ್ಥ ನಾಮದಂತಿದ್ದ‌ ಮೈಷುಗರ್ ಕಾರ್ಖಾನೆ ಕೊನೆಗೂ ಪುನರಾರಂಭವಾಗಿದ್ದು, ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಹಾಗೂ ಸಂಸದೆ ಸುಮಲತಾ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡುವುದರ ಮೂಲಕ ಕಾರ್ಖಾನೆಗೆ ಮತ್ತೆ ಚಾಲನೆ ನೀಡಿದರು.
ಬಾಯ್ಲರ್ ಗೆ ಅಗ್ನಿ ಸ್ಪರ್ಶ ಮಾಡಿದ ಸಚಿವರು
ಬಾಯ್ಲರ್ ಗೆ ಅಗ್ನಿ ಸ್ಪರ್ಶ ಮಾಡಿದ ಸಚಿವರು

ಮಂಡ್ಯ: ಸಕ್ಕರೆ ನಾಡು ಮಂಡ್ಯದ ಹೆಸರಿಗೆ ಅನ್ವರ್ಥ ನಾಮದಂತಿದ್ದ‌ ಮೈಷುಗರ್ ಕಾರ್ಖಾನೆ ಕೊನೆಗೂ ಪುನರಾರಂಭವಾಗಿದ್ದು, ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಹಾಗೂ ಸಂಸದೆ ಸುಮಲತಾ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡುವುದರ ಮೂಲಕ ಕಾರ್ಖಾನೆಗೆ ಮತ್ತೆ ಚಾಲನೆ ನೀಡಿದರು.

ಕಳೆದ 4 ವರ್ಷಗಳಿಂದ ಸ್ಥಗಿತವಾಗಿದ್ದ ಕಾರ್ಖಾನೆ ಇಂದು ಮತ್ತೆ ಆರಂಭಗೊಂಡಿದ್ದು, ಮಂಡ್ಯ ರೈತರ ಮೊಗದಲ್ಲಿ ಸಂತಸ ಮತ್ತು ಕಬ್ಬು ಬೆಳಗಾರರಲ್ಲಿ ಹೊಸ ಭರವಸೆಯ ಆಶಾಕಿರಣ ಮೂಡಲು ಕಾರಣವಾಗಿದೆ. ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಹಾಗೂ ಸಂಸದೆ ಸುಮಲತಾ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡುವುದರ ಮೂಲಕ ಕಾರ್ಖಾನೆಗೆ ಮತ್ತೆ ಚಾಲನೆ ನೀಡಿದರು.

ಕಳೆದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿದ್ದ ಮಂಡ್ಯದ ಮೈಷುಗರ್ ಕಾರ್ಖಾನೆ ಆರಂಭಕ್ಕೆ ರೈತರು ಒತ್ತಾಯ ಮಾಡಿ ಪ್ರತಿಭಟನೆಯನ್ನು ಮಾಡಿದ್ದರು. ಈ ಹಿಂದಿನ ಸರ್ಕಾರದಲ್ಲಿ ಅದು ಸಾಧ್ಯವಾಗಿರಲಿಲ್ಲ. ಈಗ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅನುದಾನ ನೀಡಿದ್ದರಿಂದ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಮತ್ತೆ ಆರಂಭವಾಗಿದೆ. ಕಾರ್ಖಾನೆ ನಾಲ್ಕು ವರ್ಷಗಳ ಬಳಿಕ ಪುನರಾರಂಭಗೊಳುತ್ತಿದ್ದು, ಕಾರ್ಖಾನೆಯನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿತ್ತು‌. ಕಾರ್ಖಾನೆಯಲ್ಲಿ ಅಧಿಕಾರಿಗಳು ಸೇರಿ ಜಿಲ್ಲೆಯ ಶಾಸಕರು ಮತ್ತು ಸಚಿವರು ಹೋಮ ಹವನದ ಪೂಜಾ ಕೈಂಕರ್ಯ ನಡೆಸಿದರು. ಬಳಿಕ ಕಾರ್ಖಾನೆಯಲ್ಲಿ ಬಾಯ್ಲರ್‌ಗೆ ಅಗ್ನಿ ಸ್ವರ್ಶ ಮಾಡುವ ಮೂಲಕ ಮರುಚಾಲನೆ ನೀಡಿದರು. 

ಚುನಾವಣೆ ವೇಳೆ ಮಾತು ಕೊಟ್ಟಂತೆ ಕಾರ್ಖಾನೆ ಆರಂಭಿಸಿದ್ದೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಸಚಿವದ್ವಯರು ಹೇಳಿದರು. ಇನ್ನು, ಹಲವು ಹೋರಾಟಗಳ ಬಳಿಕ ತಡವಾಗಿಯಾದರೂ ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭವಾಗಿದ್ದಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಸಂತಸ ವ್ಯಕ್ತಪಡಿಸಿದರು. ರೈತರು ಕೂಡ ತಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಖುಷಿ ಹಂಚಿಕೊಂಡರು.

ರೈತರಲ್ಲಿ ಭರವಸೆಯ ಆಶಾಕಿರಣ ಮೂಡಿಸಿದ ಸರ್ಕಾರದ ನಡೆ
ಇನ್ನು ಈ ಹಿಂದೆ ಬಜೆಟ್ ನಲ್ಲಿ ಆಶ್ವಾಸನೆ ನೀಡಿದಂತೆ ರಾಜ್ಯ ಸರ್ಕಾರ ಕಾರ್ಖಾನೆಗೆ ಚಾಲನೆ ನೀಡಿದೆ. ಶೀಘ್ರದಲ್ಲೇ ಇಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಕೂಡ ಆರಂಭವಾಗಲಿದೆ. ಕಾರ್ಖಾನೆ ಆಡಳಿತ ಮಂಡಳಿಗೆ ಎಲ್ಲ ರೀತಿಯ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಇದು ಬಿಜೆಪಿಗೆ ರಾಜಕೀಯ ಮೈಲೇಜ್ ಮತ್ತು ಜೆಡಿಎಸ್-ಕಾಂಗ್ರೆಸ್ ಭದ್ರಕೋಟೆಯಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಿಸಲು ಬಲವನ್ನು ನೀಡುತ್ತದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರಂಭಿಸಿ ಆರ್ಥಿಕ ಚಟುವಟಿಕೆಗೆ ಕೊಡುಗೆ ನೀಡಿದ ಮೈಶುಗರ್ ಕಾರ್ಖಾನೆ ರೋಗಗ್ರಸ್ತವಾಗಿದ್ದು, ಐದು ವರ್ಷಗಳ ಹಿಂದೆ ಕಬ್ಬು ಅರೆಯುವುದನ್ನು ನಿಲ್ಲಿಸಲಾಗಿತ್ತು. ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಯೋಜನೆ ನಡೆಯುತ್ತಿರುವಾಗಲೇ ರೈತ ಸಂಘದ ಮುಖಂಡರು ಹಾಗೂ ರೈತರು ತೀವ್ರವಾಗಿ ಧರಣಿ ನಡೆಸಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಜೆಡಿಎಸ್ ಪಾದಯಾತ್ರೆ ಕೈಗೊಂಡಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕರ್ತರನ್ನು ಕರೆದು 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲಿದೆ ಎಂದು ಭರವಸೆ ನೀಡಿದರು.

ಕೆಆರ್ ಪೇಟೆಯಲ್ಲಿ ಗೆಲುವು ಸಾಧಿಸುವ ಮೂಲಕ ಪಟ್ಟದಲ್ಲಿ ಖಾತೆ ತೆರೆದಿರುವ ಬಿಜೆಪಿ ಇಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಉತ್ಸುಕವಾಗಿದೆ. ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಯೋಜನೆ ಇಲ್ಲ ಎಂದು ಸರ್ಕಾರ ಘೋಷಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಖಾನೆ ಕಾರ್ಯಾರಂಭಕ್ಕೆ 50 ಕೋಟಿ ರೂ. ಕಾರ್ಖಾನೆ ಮತ್ತು ರೈತರಿಗೆ ಲಾಭದಾಯಕವಾಗಿರುವ ಎಥೆನಾಲ್ ಉತ್ಪಾದನೆ ಮತ್ತು ಕಬ್ಬನ್ನು ಅರೆಯಲು ಹೊಸ ಬಾಯ್ಲರ್ ಮತ್ತು ಇತರ ಯಂತ್ರಗಳಿಗೆ ಸರ್ಕಾರ ಈಗಾಗಲೇ 20 ಕೋಟಿ ರೂ ಮೀಸಲಿಟ್ಟಿದೆ.

ಇದೇ ವೇಳೆ, ಮಂಡ್ಯ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ಮೈ ಶುಗರ್ ಪುನರುಜ್ಜೀವನವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಮತ್ತು ಕಬ್ಬು ಅರೆಯುವಿಕೆ ಪ್ರಾರಂಭಿಸಲಾಗುವುದು. ಮದ್ದೂರು ನೀರಾವರಿ ಕಾಲುವೆ ಆಧುನೀಕರಣಕ್ಕೆ 500 ಕೋಟಿ ಮಂಜೂರು ಮಾಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com