ಹಣದುಬ್ಬರ: ತೊಗರಿ ಬೇಳೆ, ಉದ್ದಿನ ಬೇಳೆ ಸೇರಿ ಅಕ್ಕಿ- ಬೇಳೆಕಾಳುಗಳ ಬೆಲೆ ಗಗನಕ್ಕೆ

ಎರಡು ವರ್ಷ ಕೋವಿಡ್ ಬಾಧೆಯಿಂದ ನಲುಗಿ ಕಳೆದ 6 ತಿಂಗಳಿನಿಂದ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಾಗ ಈಗ ಸಾಮಾನ್ಯ ಜನತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿಹೋಗುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎರಡು ವರ್ಷ ಕೋವಿಡ್ ಬಾಧೆಯಿಂದ ನಲುಗಿ ಕಳೆದ 6 ತಿಂಗಳಿನಿಂದ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಾಗ ಈಗ ಸಾಮಾನ್ಯ ಜನತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿಹೋಗುತ್ತಿದ್ದಾರೆ.

ಹಣದುಬ್ಬರದ ನಡುವೆ ಜನರು ನಿತ್ಯ ಬಳಸುವ ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆಕಾಳುಗಳ ಬೆಲೆ ಗಗನಕ್ಕೇರಿದೆ. ತೊಗರಿಬೇಳೆ ಬೆಲೆ ಪ್ರತಿ ಕಿಲೋಗೆ 15ರಿಂದ 20 ರೂಪಾಯಿ ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ತೊಗರಿಬೇಳೆ ಕೆಜಿಗೆ 150ರಿಂದ 170 ರೂಪಾಯಿಗೆ ಮಾರಾಟವಾಗುತ್ತಿದ್ದರೆ ಅದರಲ್ಲಿ ಶೇಕಡಾ 5ರಷ್ಟು ಜಿಎಸ್ ಟಿಯಾಗಿದೆ. ಜಿಎಸ್ ಟಿಯಿಲ್ಲದೆ ಕೆಜಿಗೆ 135ರಿಂದ 145 ರೂಪಾಯಿಗಳಿದೆ.

ಸಗಟು ಮಾರುಕಟ್ಟೆಯಲ್ಲಿ ತೊಗರಿ ಬೇಳೆಗೆ ಕೆಜಿಗೆ 120 ರೂಪಾಯಿಗಳಿವೆ. ಈ ಬೆಲೆ ಏರಿಕೆಯು ಕಳೆದ ಮೂರು ವಾರಗಳಿಂದ ಏರಿಕೆಯಲ್ಲಿದೆ. ಜಿಎಸ್ಟಿ ಹೆಚ್ಚಳದ ನಂತರ ಮಿತಿಗೊಳಿಸಲಾಗಿದೆ. ಉದ್ದಿನ ಬೇಳೆ ಆಮದು ಮಾಡಿಕೊಂಡಾಗಿನಿಂದ ಅದರ ಬೆಲೆ ಗಗನಕ್ಕೇರುತ್ತಿದೆ. ಚಿಲ್ಲರೆ ಮಾರಾಟದಲ್ಲಿ ಪ್ರತಿ ಕೆಜಿಗೆ ಸುಮಾರು 160 ರೂಪಾಯಿಗಳಿವೆ. ಸಗಟು ಮಾರಾಟದಲ್ಲಿ ಕೆಜಿಗೆ ಸುಮಾರು 130 ರೂಪಾಯಿಗಳಿದ್ದು ಕಳೆದ ಮೂರು ವಾರಗಳಲ್ಲಿ ಇದೇ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಇದರ ಜೊತೆಗೆ ಜನರ ಅಗತ್ಯ ಬಳಕೆಯ ವಿದ್ಯುತ್ ದರಗಳು ಹೆಚ್ಚಿವೆ. ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾಸಿಕ ಬಿಲ್‌ಗಳು ತಿಂಗಳಿಗೆ ಸರಾಸರಿ 200 ರೂಪಾಯಿಗಳಷ್ಟು ಹೆಚ್ಚಾಗಿದೆ. ರಾಜ್ಯದ ಜನರ ಪ್ರಮುಖ ಆಹಾರವಾಗಿರುವ ಅಕ್ಕಿಯ ಬೆಲೆಯು ವಿವಿಧ ಕಾರಣಗಳಿಂದ ಸುಮಾರು 8-10 ಪ್ರತಿಶತದಷ್ಟು ಹೆಚ್ಚಾಗಿದೆ, ಪ್ಯಾಕ್ಡ್ ರೈಸ್ ಮೇಲೆ ಶೇಕಡಾ 5 ರಷ್ಟು ಜಿಎಸ್ಟಿ, ವಾಣಿಜ್ಯ ಬಳಕೆ ಕೇಂದ್ರಗಳಲ್ಲಿ ಬೇಯಿಸಿದ ಅಕ್ಕಿ ಬೆಲೆ ಶೇಕಡಾ 8-10 ರಷ್ಟು ಹೆಚ್ಚಾಗಿದೆ.

ರೂಪಾಯಿ ಬೆಲೆ ಕುಸಿತದಿಂದ ವಸ್ತುಗಳ ಆಮದು ಮೇಲೆ ಪರಿಣಾಮ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಹೆಚ್ಚಾಗಿದ್ದು, ಇದು ತೊಗರಿ ಬೇಳೆ ಮತ್ತು ಖಾದ್ಯ ತೈಲಗಳಂತಹ ಆಹಾರ ಪದಾರ್ಥಗಳು ಸೇರಿದಂತೆ ಎಲ್ಲಾ ಸರಕುಗಳ ಸಾಗಣೆಯ ಮೇಲೆ ಪರಿಣಾಮ ಬೀರುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಆಮದು ಮಾಡಿಕೊಂಡಿರುವ ಉದ್ದಿನ ಬೇಳೆ ಬೆಲೆ ದುಬಾರಿಯಾಗಿದೆ. ಪೂರೈಕೆ ಕಡೆಯಿಂದ ಆರಂಭವಾದ ಹಣದುಬ್ಬರ ಬೇಡಿಕೆಯ ಭಾಗಕ್ಕೂ ವ್ಯಾಪಿಸಿದೆ ಎಂದು ರಾಷ್ಟ್ರೀಯ ಹಣಕಾಸು ಆಯೋಗದ ಮಾಜಿ ಸದಸ್ಯ ಅರ್ಥಶಾಸ್ತ್ರಜ್ಞ ಪ್ರೊ. ಗೋವಿಂದ್ ರಾವ್ ಹೇಳಿದ್ದಾರೆ.

ನಾವು ರಷ್ಯಾದಿಂದ ಖರೀದಿಸುತ್ತಿರುವ ತೈಲ ಅಗ್ಗವಾಗಿದೆ. ಆದರೆ ಅದನ್ನು ಗ್ರಾಹಕರಿಗೆ ರವಾನಿಸುವುದಿಲ್ಲ. ಇಂಧನ ಬೆಲೆಗಳು ಅಧಿಕವಾಗಿದ್ದರೆ ಸಾರಿಗೆ ವೆಚ್ಚವು ಒಟ್ಟಾರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಸಾರಿಗೆ ವೆಚ್ಚ ಹೆಚ್ಚಳವಾದರೆ ಪ್ರಧಾನ ಆಹಾರ ಪದಾರ್ಥಗಳಾದ ತೊಗರಿಬೇಳೆ, ಉದ್ದಿನ ಬೇಳೆ ಇತ್ಯಾದಿಗಳು ಹಣದುಬ್ಬರಕ್ಕೆ ಸಾಕ್ಷಿಯಾಗುತ್ತವೆ. ಇದರೊಂದಿಗೆ ರೂಪಾಯಿ ಎದುರು ಡಾಲರ್ ಮೌಲ್ಯ ಹೆಚ್ಚಳವಾದಾಗ  ಆಮದು ವೆಚ್ಚ ಹೆಚ್ಚಳವಾಗಿ ಭಾರತದಲ್ಲಿ ಎಲ್ಲದಕ್ಕೂ ಸಮಸ್ಯೆಯಾಗುತ್ತದೆ ಎಂದು ಆರ್ಥಿಕತಜ್ಞ ಪ್ರೊ.ಶಂಕರಾರ್ಶನ್ ಬಸು ಹೇಳುತ್ತಾರೆ.

ಎಪಿಎಂಸಿಯ ಆಹಾರಧಾನ್ಯ ವ್ಯಾಪಾರಿ ರಮೇಶ ಲಾಹೋಟಿ ಅವರಲ್ಲಿ ತೊಗರಿ ಬೇಳೆ ಮತ್ತು ಆಹಾರ ಧಾನ್ಯಗಳ ಬೆಲೆ ಹೆಚ್ಚಳದ ಬಗ್ಗೆ ಕೇಳಿದಾಗ, ಮಾರುಕಟ್ಟೆ ಶಕ್ತಿಗಳು ಮತ್ತು ವಿವಿಧ ಕಾರಣಗಳು ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತವೆ. ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಿದ್ದರೂ, ಇದನ್ನು ಎದುರಿಸಲು ಸರ್ಕಾರವು ಕೆಲವು ಪರಿಹಾರ ಕ್ರಮಗಳನ್ನು ಅವಲಂಬಿಸಬೇಕಾಗಿದೆ, ವಿಫಲವಾದರೆ ಜನರು ತೊಂದರೆ ಅನುಭವಿಸುತ್ತಾರೆ ಎಂದರು.

ಬೆಲೆ ಏರಿಕೆ ಒಂದು ದಿನಕ್ಕೆ ಚರ್ಚಿಸಿ ಮುಗಿಯುವ ವಿಷಯವಲ್ಲ ಎಂದು ಎಪಿಎಂಸಿ ಬೆಂಗಳೂರಿನ ವ್ಯಾಪಾರಿ ನಿತುಲ್ ಜೆ ಶಾ ಹೇಳುತ್ತಾರೆ. ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಅನೇಕ ಬೆಳೆದ ಬೆಳೆಗಳಿಗೆ ಮಳೆಯಿಂದ ಹಾನಿಯಾಗಿದೆ. ಹೆಚ್ಚಿನ ಮಳೆಯಿಂದಾಗಿ ಬೆಳೆದಿರುವ ಬೆಳೆಗಳ ಕೆಲವು ಭಾಗಗಳು ಹಾನಿಗೊಳಗಾಗಿವೆ. ಇದರಿಂದ ಮುಂದಿನ ಒಂದು ತಿಂಗಳಲ್ಲಿ ವಸ್ತುಗಳ ಬೆಲೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com