ಕೊಪ್ಪಳ: ವಾರದಿಂದ ಪ್ರವಾಹ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ, ಕುರಿಗಳ ರಕ್ಷಣೆ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನದಿಗಳು ಉಕ್ಕಿ ಹರಿಯುತ್ತಿದ್ದು ಅತ್ತ ಕೊಪ್ಪಳದಲ್ಲಿ ಕುರಿ ಕಾಯಲು ಹೋಗಿ ಒಂದು ವಾರದಿಂದ ಪ್ರವಾಹಕ್ಕೆ ಸಿಲುಕಿದ್ದ ಕುರಿಗಾಹಿಗಳನ್ನು ಮತ್ತು ನೂರಾರು ಕುರಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಕುರಿಗಾಹಿಗಳ ರಕ್ಷಣೆ
ಕುರಿಗಾಹಿಗಳ ರಕ್ಷಣೆ

ಕೊಪ್ಪಳ: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನದಿಗಳು ಉಕ್ಕಿ ಹರಿಯುತ್ತಿದ್ದು ಅತ್ತ ಕೊಪ್ಪಳದಲ್ಲಿ ಕುರಿ ಕಾಯಲು ಹೋಗಿ ಒಂದು ವಾರದಿಂದ ಪ್ರವಾಹಕ್ಕೆ ಸಿಲುಕಿದ್ದ ಕುರಿಗಾಹಿಗಳನ್ನು ಮತ್ತು ನೂರಾರು ಕುರಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಬಳಿ ತುಂಗಭದ್ರಾ ನದಿಯ ಭೋರ್ಗರೆಯುವ ನೀರಿನಿಂದ ಆವೃತವಾದ ದ್ವೀಪದಲ್ಲಿ ಕುರಿಗಾಹಿ, ಆತನ ಮಗ ಮತ್ತು 100 ಕ್ಕೂ ಹೆಚ್ಚು ಕುರಿಗಳು ಒಂದು ವಾರದಿಂದ ಸಿಲುಕಿಕೊಂಡಿದ್ದವು. ಆಂಧ್ರಪ್ರದೇಶದ ವಿಜಯವಾಡದಿಂದ ಕರೆಸಿಕೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 16 ಸದಸ್ಯರ ತಂಡವು ಹನುಮಪ್ಪ ಮತ್ತು ಅವರ ಮಗ ಹನುಮೇಶನನ್ನು ದೋಣಿಗಳನ್ನು ಬಳಸಿ ಕಾರ್ಯಾಚರಣೆ ರಕ್ಷಿಸಿದ್ದಾರೆ.

ಆಗಸ್ಟ್ 4 ರಂದು ಮಲ್ಲಾಪುರ ಗ್ರಾಮದ ಕುರುಬರು ತಮ್ಮ ಕುರಿಗಳನ್ನು ಮೇಯಿಸಲು ದ್ವೀಪಕ್ಕೆ ತೆರಳಿದ್ದರು. ತುಂಗಭದ್ರಾ ಜಲಾಶಯದಿಂದ ಅಧಿಕಾರಿಗಳು 1.80 ಲಕ್ಷ ಕ್ಯೂಸೆಕ್‌ಗಳನ್ನು ಬಿಡುಗಡೆ ಮಾಡಿದ್ದರಿಂದ ನೀರು ವೇಗವಾಗಿ ಏರಿತು ಮತ್ತು ಸಂಜೆಯ ಹೊತ್ತಿಗೆ ವೇಗವಾಗಿ ಹರಿಯುವ ನದಿಯನ್ನು ದಾಟಲು ಕುರಿಗಾಹಿಗಳಿಗೆ ಸಾಧ್ಯವಾಗಲಿಲ್ಲ. ಇಬ್ಬರು ಕುರುಬರು ತಮ್ಮ ಮೊಬೈಲ್ ಫೋನ್‌ನಿಂದ ಅಧಿಕಾರಿಗಳಿಗೆ SOS ಕರೆ ಮಾಡಿ, ರಕ್ಷಣೆಗಾಗಿ ಮನವಿ ಮಾಡಿದರು.

ಜಿಲ್ಲಾಡಳಿತ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿತು. ಆದರೆ ಒಂದು ವಾರದಿಂದ ಸತತ ಪ್ರಯತ್ನ ಮಾಡಿದರೂ ರಕ್ಷಣಾ ಕಾರ್ಯಕರ್ತರು ತಾತ್ಕಾಲಿಕ ಆಶ್ರಯದಲ್ಲಿದ್ದ ಕುರುಬರನ್ನು ತಲುಪಲು ಸಾಧ್ಯವಾಗಲಿಲ್ಲ. ನಂತರ ಜಿಲ್ಲಾ ಅಧಿಕಾರಿಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅನ್ನು ಸಂಪರ್ಕಿಸಿದ್ದು, ಅವರು ಶುಕ್ರವಾರ ಕುರುಬರು ಮತ್ತು ಕುರಿಗಳನ್ನು ರಕ್ಷಿಸಿದ್ದಾರೆ ಎಂದು ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ ತಿಳಿಸಿದ್ದಾರೆ. 

ವಾಸ್ತವವಾಗಿ, ಜಿಲ್ಲಾಡಳಿತ ಮತ್ತು ತುಂಗಭದ್ರಾ ಯೋಜನೆ ಅಧಿಕಾರಿಗಳು ನದಿ ಜಲಾನಯನ ಪ್ರದೇಶದ ಜನರು ನದಿಗೆ ಹೋಗದಂತೆ ಅಥವಾ ಗಂಗಾವತಿ ತಾಲೂಕಿನ ಹತ್ತಿರದ ದ್ವೀಪಗಳಿಗೆ ಹೋಗದಂತೆ ಎಚ್ಚರಿಕೆ ನೀಡಿದ್ದರು. ಆದರೆ ಈ ಬಗ್ಗೆ ಮಾಹಿತಿ ಇಲ್ಲದ ಕುರಿಗಾರಿಗಳು ಕುರಿಗಳನ್ನು ಮೇಯಿಸಲು ದ್ವೀಪಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com