
ಸಾಂದರ್ಭಿಕ ಚಿತ್ರ
ಮಡಿಕೇರಿ: ತ್ರಿಕೋನ ಪ್ರೇಮ ಪ್ರಕರಣವೊಂದ ವ್ಯಕ್ತಿಯೋರ್ವ ಇಬ್ಬರಿಗೆ ಇರಿಯುವ ಮೂಲಕ ಅಂತ್ಯಗೊಂಡಿದೆ.
ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ, ನಿಸರ್ಗಧಾಮದಲ್ಲಿ ಈ ಘಟನೆ ವರದಿಯಾಗಿದೆ. ಆರೋಪಿ ವಿಜಯ್ ಕುಮಾರ್ (22) ಕೊಪ್ಪ ಗ್ರಾಮದ ನಿವಾಸಿಯಾಗಿದ್ದು ಕುಶಾಲನಗರದ ರೆಸ್ಟೊರೆಂಟ್ ನಲ್ಲಿ ವೇಯ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆತ ಮಾದಪಟ್ನದ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಪ್ರೇಮಿಸುತ್ತಿದ್ದ, ಇಬ್ಬರೂ ಪರಸ್ಪರ ಫೋನ್ ಮೂಲಕ ಮಾತನಾಡುತ್ತಿದ್ದರು, ಶನಿವಾರ ಬೆಳಿಗ್ಗೆ ಯುವತಿ ಆರೋಪಿ ವಿಜಯ್ ಕುಮಾರ್ ಗೆ ತಾನು ಕಾಲೇಜಿಗೆ ಹೋಗುವುದಾಗಿ ಹೇಳಿದ್ದಳು.
ಆದರೆ ಆಕೆ ಸುಲೆಕೋಟೆ ಗ್ರಾಮದ ಮತ್ತೋರ್ವ ಯುವಕನೊಂದಿಗೆ ನಿಸರ್ಗಧಾಮಕ್ಕೆ ಹೋಗಿದ್ದಳು, ತನ್ನ ಪ್ರೇಮಿ ಮತ್ತೋರ್ವ ಯುವಕನೊಂದಿಗೆ ನಿಸರ್ಗಧಾಮಕ್ಕೆ ತೆರಳಿರುವುದನ್ನು ತಿಳಿದ ವಿಜಯ್ ಕುಮಾರ್ ಸ್ಥಳಕ್ಕೆ ಆಗಮಿಸಿದ್ದ. ಈ ವೇಳೆ ಮೂವರ ನಡುವೆ ಜಗಳವಾಗಿದೆ. ವಾಗ್ವಾದ ತೀವ್ರ ಸ್ವರೂಪ ಪಡೆದು ತನ್ನ ಪ್ರೇಮಿ ಹಾಗೂ ಆಕೆಯ ಸ್ನೇಹಿತನಿಗೆ ವಿಜಯ್ ಕುಮಾರ್ ಇರಿದಿದ್ದಾನೆ.
ಇಬ್ಬರೂ ವಿದ್ಯಾರ್ಥಿಗಳನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ನಿಸರ್ಗಧಾಮ ಸಿಬ್ಬಂದಿ ಬಂಧಿಸಿ, ಕುಶಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ, ತನಿಖೆ ಮುಂದುವರೆದಿದೆ.