ಕೂದಲೆಳೆ ಅಂತರದಲ್ಲಿ ನಾಗರಹಾವು ಕಡಿತದಿಂದ ಮಗು ಎಸ್ಕೇಪ್, ತಾಯಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ
ಮನೆಯ ಮುಂದೆಯೇ ನಾಗರಹಾವಿನ ಕಡಿತದಿಂದ ತನ್ನ ಮಗುವನ್ನು ತಾಯಿಯೊಬ್ಬಳು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Published: 14th August 2022 06:14 PM | Last Updated: 14th August 2022 06:14 PM | A+A A-

ಹಾವಿನಿಂದ ಮಗು ರಕ್ಷಿಸಿದ ತಾಯಿ
ಮಂಡ್ಯ: ಮನೆಯ ಮುಂದೆಯೇ ನಾಗರಹಾವಿನ ಕಡಿತದಿಂದ ತನ್ನ ಮಗುವನ್ನು ತಾಯಿಯೊಬ್ಬಳು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು..ಮಂಡ್ಯದಲ್ಲಿ ಈ ಘಟನೆ ನಡೆದಿದ್ದು, ಮಗುವೊಂದು ನಾಗರಹಾವು (Cobra) ಕಡಿತದಿಂದ ಜಸ್ಟ್ ಮಿಸ್ ಆಗಿದೆ. ತಾಯಿಯೂ (Mother) ಕ್ಷಣಾರ್ಧದಲ್ಲಿ ತನ್ನ ಮಗುವನ್ನು (Son) ಹಾವಿನಿಂದ ರಕ್ಷಣೆ ಮಾಡಿದ್ದಾಳೆ. ಇಲ್ಲದಿದ್ದರೆ ಆ ಆವು ಮಗುವನ್ನು ಕಚ್ಚಿ ಬಿಡುತ್ತಿತ್ತು. ತಾಯಿ ಮಗುವನ್ನು ರಕ್ಷಿಸುತ್ತಿರುವ ವಿಡಿಯೋ (Video) ಎಲ್ಲೆಡೆ ವೈರಲ್ (Viral) ಆಗಿದೆ.
Mother saves her child from #cobra bite @ Chamundeshwari Layout @ #Maddur Taluk @ #Mandya District @santwana99@Cloudnirad@ramupatil_TNIE@XpressBengaluru@NewIndianXpress@KannadaPrabha pic.twitter.com/ccQWL2m7uK
— Lakshmikantha B K (@KANTH_TNIE) August 14, 2022
CCTVಯಲ್ಲಿ ಸೆರೆಯಾಯ್ತು ಎದೆ ಝಲ್ ಎನಿಸುವ ದೃಶ್ಯ
ಬಾಲಕನೊಬ್ಬ ಮನೆಯಿಂದ ಹೊರಗೆ ಹೋಗೋಕೆ ರೆಡಿಯಾಗಿರುತ್ತಾನೆ. ಹಿಂದೆಯೇ ಅವನ ತಾಯಿ ಇರುತ್ತಾಳೆ. ಮಗು ಒಂದು ಹೆಜ್ಜೆಯನ್ನು ಮೆಟ್ಟಿಲಿನಿಂದ ಕೆಳಗೆ ಇಡುತ್ತಾನೆ. ಇನ್ನೇನು ಹಾವಿನ ಮೇಲೆ ಕಾಲಿಡಬೇಕಿತ್ತು, ಅಷ್ಟರಲ್ಲಿ ನಾಗರಹಾವು ಹಿಂದಕ್ಕೆ ಸರಿಯುತ್ತೆ. ಮಗುವಿನತ್ತ ತನ್ನ ತಲೆಯೆತ್ತಿ ಬುಸ್‍ಗುಟ್ಟುತ್ತಾ ಬರುತ್ತೆ. ಅಷ್ಟರಲ್ಲಿ ತಾಯಿ ಓಡಿ ಬಂದು ಮಗುವನ್ನು ಎತ್ತಿಕೊಂಡು, ಹಾವು ಕಚ್ಚುವುದನ್ನು ತಪ್ಪಿಸುತ್ತಾಳೆ. ಅಲ್ಲದೆ ಹಾವಿನಿಂದ ಮಗುವನ್ನು ದೂರಕೆ ಕರೆದೊಯ್ಯುತ್ತಾರೆ.
ಇದನ್ನೂ ಓದಿ: ಹೊಳೆನರಸಿಪುರ: ವಿಚ್ಛೇದನದ ವಿಷಯವಾಗಿ ಕೋರ್ಟ್ ಆವರಣದಲ್ಲೇ ಪತ್ನಿಯ ಹತ್ಯೆ ಮಾಡಿದ ವ್ಯಕ್ತಿ
ಸುಮಾರು 11 ಸೆಕೆಂಡ್ ಗಳ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಂಡ್ಯದ ಮದ್ದೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಕೂದಲೆಳೆ ಅಂತರದಲ್ಲಿ ಮಗುವನ್ನು ಹಾವಿನ ಕಡಿತದಿಂದ ರಕ್ಷಿಸಿದ ತಾಯಿಯ ಧೈರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.