ಮಂಗಳೂರು ವಿಮಾನ ನಿಲ್ದಾಣ: ಇಬ್ಬರು ವ್ಯಕ್ತಿಗಳ ಚಾಟ್ ನಿಂದ ವಿಮಾನ ಟೇಕ್ ಆಫ್ ಗೆ ತಡೆ! 

ಓರ್ವ ಪುರುಷ ಹಾಗೂ ಮಹಿಳೆ ಇಬ್ಬರ ನಡುವಿನ ವಾಟ್ಸ್ ಆಪ್ ಚಾಟ್ ನ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದ ವಿಮಾನವನ್ನು ತಡೆಯಲಾಯಿತು.
ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು: ಓರ್ವ ಪುರುಷ ಹಾಗೂ ಮಹಿಳೆ ಇಬ್ಬರ ನಡುವಿನ ವಾಟ್ಸ್ ಆಪ್ ಚಾಟ್ ನ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದ ವಿಮಾನವನ್ನು ತಡೆಯಲಾಯಿತು. 

ಭಾನುವಾರ ಈ ಘಟನೆ ವರದಿಯಾಗಿದ್ದು, ಭದ್ರತೆಗೆ ಸಂಬಂಧಿಸಿದಂತೆ ಮಹಿಳೆಯೋರ್ವರು ವ್ಯಕ್ತಿಯೋರ್ವನಿಗೆ ವಾಟ್ಸ್ ಆಪ್ ಸಂದೇಶ ರವಾನೆ ಮಾಡಿದ್ದರು. ಇಬ್ಬರೂ ವಿಮಾನದ ಭದ್ರತೆಗೆ ಅಪಾಯ ಉಂಟು ಮಾಡುವ ವಿಷಯ ಮಾತನಾಡಿದ್ದನ್ನು ಗಮನಿಸಿದ ಸಹ ಪ್ರಯಾಣಿಕರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಭದ್ರತಾ ಅಧಿಕಾರಿಗಳು ವಿಮಾನ ಟೇಕ್ ಆಫ್ ಆಗುವುದನ್ನು ತಡೆದು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. 

ಪುರುಷ ಪ್ರಯಾಣಿಕ ಮುಂಬೈ ಗೆ ಪ್ರಯಾಣಿಸುತ್ತಿದ್ದರು ಹಾಗೂ ಮಹಿಳೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ವಿಮಾನ ಭದ್ರತಾ ಅಧಿಕಾರಿ ಕೂಡಲೇ ವಿಮಾನದ ಒಳಗೆ ಪ್ರವೇಶಿಸಿ, ಪ್ರಯಾಣಿಕರನ್ನು ಬೇರೆಡೆಗೆ ಸ್ಥಳಾಂತರಿಸಿ ಭದ್ರತಾ ವಿಷಯವನ್ನು ಪರಿಶೀಲನೆ ನಡೆಸಿದರು.
 
ವಿಮಾನವನ್ನು ಪ್ರತ್ಯೇಕವಾಗಿರಿಸಲಾಗಿ, ಇಬ್ಬರನ್ನೂ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಇಬ್ಬರೂ ತಮಾಷೆಗಾಗಿ ಈ ರೀತಿ ಮಾಡಿದ್ದು ಎಂದು ಹೇಳಿದ್ದಾರೆ. ಇಬ್ಬರೂ ವ್ಯಕ್ತಿಗಳು ಉತ್ತರ ಪ್ರದೇಶದ ಗೋರಖ್ ಪುರದ ಮೂಲದವರಾಗಿದ್ದಾರೆ. ಮಹಿಳೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದರೆ ಮತ್ತೋರ್ವ ವ್ಯಕ್ತಿ ಮುಂಬೈ ನಲ್ಲಿ ಕಂಪನಿಯೊಂದಕ್ಕೆ ಸೇರಲು ಸಿದ್ಧತೆ ನಡೆಸಿದ್ದ. ಇಬ್ಬರನ್ನೂ ಬಜ್ಪೆ ಪೊಲೀಸರ ವಶಕ್ಕೆ ಕಳಿಸಲಾಗಿದೆ. ಇದೇ ವಿಮಾನ 6 ಗಂಟೆಗಳ ಕಾಲ ವಿಳಂಬವಾಗಿ ಟೇಕ್ ಆಫ್ ಆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com