ಭದ್ರಾವತಿಯಲ್ಲಿ ಹಲ್ಲೆಗೊಳಗಾದವನು, ಹಲ್ಲೆ ಮಾಡಿದವ ಇಬ್ಬರೂ ಸ್ನೇಹಿತರು: ಕಾಂಗ್ರೆಸ್ ಶಾಸಕ

ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಬಿಜೆಪಿ ಕೋಮು ಬಣ್ಣ ಬಳಿಯುತ್ತಿದೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ವರ್ ಆರೋಪಿಸಿದ್ದಾರೆ. ಯುವಕ ಸುನೀಲ್ ಮತ್ತು ಆರೋಪಿ ಮುಬಾರಕ್ ಇಬ್ಬರೂ ಸ್ನೇಹಿತರು ಎಂದು ಹೇಳಿದ್ದಾರೆ. 
ಬಿಕೆ ಸಂಗಮೇಶ್ವರ್
ಬಿಕೆ ಸಂಗಮೇಶ್ವರ್

ಭದ್ರಾವತಿ(ಕರ್ನಾಟಕ): ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಬಿಜೆಪಿ ಕೋಮು ಬಣ್ಣ ಬಳಿಯುತ್ತಿದೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ವರ್ ಆರೋಪಿಸಿದ್ದಾರೆ. ಯುವಕ ಸುನೀಲ್ ಮತ್ತು ಆರೋಪಿ ಮುಬಾರಕ್ ಇಬ್ಬರೂ ಸ್ನೇಹಿತರು ಎಂದು ಹೇಳಿದ್ದಾರೆ. 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂಜಾಟದ ವಿಚಾರವಾಗಿ ಸುನೀಲ್ ಮೇಲೆ ಮುಬಾರಕ್ ಹಲ್ಲೆ ನಡೆಸಿದ್ದಾನೆ. ಸುನೀಲ್ ಮೂಗಿಗೆ ಸಣ್ಣಪುಟ್ಟ ಗಾಯವಾಗಿದ್ದು ಬಿಟ್ಟರೆ ಯಾವುದೇ ಗಂಭೀರ ಗಾಯವಾಗಿಲ್ಲ. ಆದರೆ, ಭದ್ರಾವತಿಯಲ್ಲಿ ಶಾಂತಿ ಕದಡಲು ಬಿಜೆಪಿ ಮತ್ತು ಬಜರಂಗದಳ ಕೋಮು ಬಣ್ಣ ಬಳಿಯುತ್ತಿದೆ. ಆದರೆ, ಇಲ್ಲಿ ಎಲ್ಲಾ ಧರ್ಮದವರು ಶಾಂತಿಯುತವಾಗಿ ವಾಸಿಸುತ್ತಿರುವುದರಿಂದ ಇಂತಹ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯದ ಅಭಿವೃದ್ಧಿಯಲ್ಲಿ ವಿಫಲವಾಗಿರುವ ಬಿಜೆಪಿಯವರು ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಬಜರಂಗದಳ ನಾಯಕರು ಸುನಿಲ್ ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು. ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಅವರು ಸುನೀಲ್ ಅವರನ್ನು ಮೆಕ್‌ಗನ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ ಎಂದರು. 

 ಭದ್ರಾವತಿಯಲ್ಲಿ ನಡೆದ ಘಟನೆ ಕೋಮುವಾದ ಎಂದು ದೇವರ ಮುಂದೆ ಸಾಕ್ಷಿ ಹೇಳುವಂತೆ ಈಶ್ವರಪ್ಪಗೆ ಸಂಗಮೇಶ್ವರ್ ಸವಾಲು ಹಾಕಿದ್ದಾರೆ. ಹಲವಾರು ಟಿವಿ ಚಾನೆಲ್‌ಗಳು ಕೂಡ ಭದ್ರಾವತಿ ಘಟನೆಯನ್ನು ಅನಗತ್ಯವಾಗಿ ಪ್ರಚಾರ ಮಾಡುತ್ತಿವೆ. ಬಿಜೆಪಿ ನಾಯಕರು ಕೋಮುವಾದಿ ರಾಜಕಾರಣ ಮಾಡುವ ಬದಲು ರಾಜ್ಯದ ಅಭಿವೃದ್ಧಿ ಮಾಡುವ ಮೂಲಕ ಜನರ ಹೃದಯ ಗೆಲ್ಲುವಂತೆ ಸೂಚಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com