ಹುಟ್ಟಿನಿಂದಲೇ ಥಲಸ್ಸೀಮಿಯಾ ಖಾಯಿಲೆಯಿಂದ ಬಳಲುತ್ತಿರುವ ಬಾಲಕನಿಗೆ ಬೇಕಿದೆ ನೆರವಿನ ಹಸ್ತ

ಬಲಭೀಮರಾಯ ಎಚ್ ಗೋನಾಲ್ ಹಾಗೂ ಮಹಾನಂದ ದಂಪತಿಯ 11 ವರ್ಷದ ಪುತ್ರ ಶಶಾಂಕ್ ಹುಟ್ಟಿನಿಂದಲೇ ಥಲಸ್ಸೀಮಿಯಾ (ರಕ್ತಹೀನತೆ) ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗಾಗಿ ಪೋಷಕರು ಈಗಾಗಲೇ 25 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.
ಶಶಾಂಕ್
ಶಶಾಂಕ್

ಬೆಂಗಳೂರು: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ಬಲಭೀಮರಾಯ ಎಚ್ ಗೋನಾಲ್ ಹಾಗೂ ಮಹಾನಂದ ದಂಪತಿಯ 11 ವರ್ಷದ ಪುತ್ರ ಶಶಾಂಕ್ ಹುಟ್ಟಿನಿಂದಲೇ ಥಲಸ್ಸೀಮಿಯಾ (ರಕ್ತಹೀನತೆ) ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗಾಗಿ ಪೋಷಕರು ಈಗಾಗಲೇ 25 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.

ಮಧ್ಯಮ ವರ್ಗದ ಬಲಭೀಮರಾಯ ಅವರು ಖಾಸಗಿ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು, ಮಗನ ಚಿಕಿತ್ಸೆಗಾಗಿ ಸಾಕಷ್ಟು ಹಣ ವೆಚ್ಚ ಮಾಡುತ್ತಲೇ ಬಂದಿದ್ದಾರೆ. ಈಗ ಮಗನನ್ನು ಬದುಕಿಸಿಕೊಳ್ಳಲು Bone moarrow transplant ಮಾಡಬೇಕು ಎಂದು ವೈದ್ಯರು ಹೇಳಿದ್ದು, ಇದಕ್ಕಾಗಿ ಬೆಂಗಳೂರಿನ ಸಂಪಂಗಿರಾಮನಗರದಲ್ಲಿರುವ ಎಚ್ ಸಿಜಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಆದರೆ ಈ ಚಿಕಿತ್ಸೆಗೆ ಸುಮಾರು 50 ಲಕ್ಷ ರೂಪಾಯಿ ಹಣದ ಅವಶ್ಯಕತೆ ಇದ್ದು, ಶಶಾಂಕ್ ಬದುಕನ್ನು ಹಸನು ಮಾಡಲು ಮಾನವೀಯ ಹೃದಯಗಳು ನೆರವಿನ ಹಸ್ತ ಚಾಚಬೇಕು ಎಂದು ಕುಟಂಬ ಮನವಿ ಮಾಡಿದೆ.

ಶಶಾಂಕ್ ನೋಡಲು ಲವಲವಿಕೆಯಿಂದ ಇದ್ದರೂ ತಿಂಗಳಿಗೊಮ್ಮೆ ಈತನಿಗೆ ರಕ್ತ ಕೊಡಿಸಲೇಬೇಕಾಗುತ್ತದೆ. ಹೀಗಾಗಿ ಪೋಷಕರು ಈ ಬಾಲಕನಿಗೆ ಕಳೆದ 11 ವರ್ಷಗಳಿಂದ ಪ್ರತಿ ತಿಂಗಳು ರಕ್ತ ಹಾಕಿಸಿದ್ದಾರೆ. ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟಂಬ ನೆರವಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ನೆರವು ಸಿಕ್ಕಿಲ್ಲ. 

ಬಿಳಿ ರಕ್ತ ಕಣಗಳು ಉತ್ಪತ್ತಿಯಾಗದೆ ಇರುವುದೇ ಥಲಸ್ಸೀಮಿಯಾ ಖಾಯಿಲೆಯಾಗಿದ್ದು, ಮನುಷ್ಯನ ದೇಹದಲ್ಲಿ ಬಿಳಿ ರಕ್ತಕಣಗಳು ಉತ್ಪತ್ತಿಯಾಗದಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಈ ದಂಪತಿಯ ಏಕೈಕ ಪುತ್ರನಿಗೆ ಸಹಾಯ ಮಾಡುವವರು ಶಶಾಂಕ್ ಅವರ ತಂದೆ ಬಲಭೀಮರಾಯ ಎಚ್ ಗೋನಾಲ್ ಅವರ ಹೆಸರಿನಲ್ಲಿರುವ ಎಸ್ ಬಿಐ ಖಾತೆ ನಂಬರ್ 62028058211ಕ್ಕೆ ಅಥವಾ 9986526002 ಮೊಬೈಲ್ ಸಂಖ್ಯೆಗೆ ಪೋನ್ ಪೇ ಅಥವಾ ಗೂಗಲ್ ಪೇ ಮೂಲಕ ಸಹಾಯ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com