ಶ್ರೀ ಕೃಷ್ಣ ಜನ್ಮಾಷ್ಟಮಿ ಸಾಂದರ್ಭಿಕ ಚಿತ್ರ
ಶ್ರೀ ಕೃಷ್ಣ ಜನ್ಮಾಷ್ಟಮಿ ಸಾಂದರ್ಭಿಕ ಚಿತ್ರ

ನಾಡಿನೆಲ್ಲೆಡೆ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ; ಜನತೆಗೆ ಗಣ್ಯರ ಶುಭಾಶಯ

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಶ್ರಾವಣ ಮಾಸದ ಅಷ್ಟಮಿಯ ಶುಭ ದಿನದಿಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡಿದ್ದು ಬಂದಿದ್ದು, ನಾಡಿನ ಜನರು ಸಡಗರ ಸಂಭ್ರಮದಿಂದ ಶ್ರೀ ಕೃಷ್ಣನ ಸ್ಮರಣೆ ಮಾಡುತ್ತಿದ್ದಾರೆ.

ಬೆಂಗಳೂರು: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಶ್ರಾವಣ ಮಾಸದ ಅಷ್ಟಮಿಯ ಶುಭ ದಿನದಿಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡಿದ್ದು ಬಂದಿದ್ದು, ನಾಡಿನ ಜನರು ಸಡಗರ ಸಂಭ್ರಮದಿಂದ ಶ್ರೀ ಕೃಷ್ಣನ ಸ್ಮರಣೆ ಮಾಡುತ್ತಿದ್ದಾರೆ.

ಈ ಹಬ್ಬವನ್ನು ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀ ಜಯಂತಿ ಎಂದು ಕರೆಯಲಾಗುತ್ತದೆ. ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಜನ್ಮ ದಿನವನ್ನು ಇದು ಸೂಚಿಸುತ್ತದೆ.  ಎಲ್ಲೆಡೆ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ನಾಡಿನ ಜನತಗೆ ಶುಭ ಕೋರಿದ್ದಾರೆ. ಸಕಲ ಮಾನವ ಸಂಕುಲವನ್ನು ಉದ್ಧರಿಸಲೆಂದು ಶ್ರೀ ಕೃಷ್ಣ ಭೂಮಿಯ ಮೇಲೆ ಜನ್ಮ ತಾಳಿದ ಶುಭದಿನವಾದ ಇಂದು ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧೆಭಕ್ತಿಯಿಂದ ಆಚರಿಸೋಣ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕನನ್ನು ಪೂಜಿಸಿ ಪಾವನರಾಗೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com