ಕೆಸಿಇಟಿ ರಿಪೀಟರ್ಸ್ ವಿವಾದ: ಶೇ.75 ಸಿಇಟಿ ಅಂಕ, ಶೇ.25 ರಷ್ಟು ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ಸಲಹೆ
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಪುನರಾವರ್ತಿತರ (ರಿಪೀಟರ್ಸ್) ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದೆ.
Published: 19th August 2022 12:13 AM | Last Updated: 19th August 2022 02:41 PM | A+A A-

ಕರ್ನಾಟಕ ಹೈಕೋರ್ಟ್
ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಪುನರಾವರ್ತಿತರ (ರಿಪೀಟರ್ಸ್) ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದೆ.
ಪುನರಾವರ್ತಿತರಿಗೆ ಶೇ.75 ಸಿಇಟಿ ಅಂಕ, ಶೇ.25 ರಷ್ಟು ಪಿಯುಸಿ ಅಂಕ ಪರಿಗಣಿಸುವ ಸಾಧ್ಯತೆಯನ್ನು ಪರಿಶೀಲಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ.
ಆಕ್ಷೇಪಗಳ ಕುರಿತು ಬಂದಿರುವ ಹೇಳಿಕೆಗಳನ್ನು ಗಮನಿಸಿ ನಂತರ ಸೂಕ್ತ ವಾದ ಮಂಡಿಸಲು ಅನುವು ಮಾಡಿಕೊಡುವುದಕ್ಕಾಗಿ ಪ್ರಕರಣ ವಿಚಾರಣೆಯನ್ನು ಆ.22 ಕ್ಕೆ ಮುಂದೂಡಲ್ಪಟ್ಟಿದೆ. ಅರ್ಜಿ ಸಲ್ಲಿಸಿದ್ದ ಐವರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿಯ ವಕೀಲರಾಗಿರುವ ಶತಬಿಶ್ ಶಿವಣ್ಣ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕಳೆದ ರಾತ್ರಿ ರಾಜ್ಯ ಸರ್ಕಾರ ಆಕ್ಷೇಪಣಾ ಪತ್ರವನ್ನು ನಮಗೆ ಹೊರಡಿಸಿತ್ತು, ಇದನ್ನೇ ಕೋರ್ಟ್ ನಲ್ಲಿ ನಮಗೆ ನೀಡಲಾಯಿತು.
ಆಕ್ಷೇಪಣಾ ಪತ್ರವನ್ನು ಪರಿಶೀಲನೆ ನಡೆಸಲು ಹಿರಿಯ ವಕೀಲರಾದ ಡಿಆರ್ ರವಿಶಂಕರ್ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು.
ಪುನರಾವರ್ತಿತರಿಗೆ ಶೇ.75 ಸಿಇಟಿ ಅಂಕ, ಶೇ.25 ರಷ್ಟು ಪಿಯುಸಿ ಅಂಕ ಪರಿಗಣಿಸಲು ಈ ಮೂಲಕ ಹೊಸಬರಿಗೆ ಹಾಗೂ ಪುನರಾವರ್ತಿತರ ನಡುವೆ ಸಮತೋಲನವಾಗುವ ಕ್ರಮ ಇದಾಗಿದ್ದು, ಇದು ಸಲಹೆಯಷ್ಟೇ, ಅಂತಿಮ ಆದೇಶವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳಿಗೆ ಈ ಮಧ್ಯಮಾರ್ಗ ಒಪ್ಪಿಗೆಯಾಗದೇ ಇದ್ದಲ್ಲಿ ನಾವು ಆಕ್ಷೇಪಣೆ ಸಲ್ಲಿಸುತ್ತೇವೆ ಎಂದು ವಕೀಲರು ಹೇಳಿದ್ದು, ಇಂದು ಮತ್ತೆ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.