ಬೆಳಗಾವಿಯ ಐಟಿಬಿಪಿ ಕ್ಯಾಂಪ್‌ನಿಂದ ಎರಡು ಎಕೆ-47 ರೈಫಲ್ ಕಳವು
ಆಘಾತಕಾರಿ ಘಟನೆಯೊಂದರಲ್ಲಿ, ಬೆಳಗಾವಿಯ ಹಾಲಭಾವಿ ಗ್ರಾಮದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತರಬೇತಿ ಕ್ಯಾಂಪಸ್‌ನಿಂದ ಎರಡು ಎಕೆ -47 ರೈಫಲ್‌ಗಳನ್ನು ಕಳವು ಮಾಡಿರುವುದು ಪತ್ತೆಯಾಗಿದೆ.
Published: 19th August 2022 08:24 PM | Last Updated: 19th August 2022 08:24 PM | A+A A-

ಎಕೆ-47 ಸಾಂದರ್ಭಿಕ ಚಿತ್ರ
ಬೆಳಗಾವಿ: ಆಘಾತಕಾರಿ ಘಟನೆಯೊಂದರಲ್ಲಿ, ಬೆಳಗಾವಿಯ ಹಾಲಭಾವಿ ಗ್ರಾಮದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತರಬೇತಿ ಕ್ಯಾಂಪಸ್‌ನಿಂದ ಎರಡು ಎಕೆ -47 ರೈಫಲ್‌ಗಳನ್ನು ಕಳವು ಮಾಡಿರುವುದು ಪತ್ತೆಯಾಗಿದೆ.
ಬೆಳಗಾವಿ ಪೊಲೀಸರಿಗೆ ಐಟಿಬಿಪಿ ಸಲ್ಲಿಸಿರುವ ದೂರಿನ ಪ್ರಕಾರ, ಈಗ ನಡೆಯುತ್ತಿರುವ 48ನೇ ಇಂಡಕ್ಷನ್ ಪೂರ್ವ ತರಬೇತಿಯಲ್ಲಿ (ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಿಯೋಜನೆಗಾಗಿ) ಎರಡು ಎಕೆ-47 ರೈಫಲ್‌ಗಳನ್ನು ಮದುರೈ ಐಟಿಬಿಪಿಯ ರಾಜೇಶ್ ಕುಮಾರ್ ಮತ್ತು ಸಂದೀಪ್ ಮೀನಾ ಅವರಿಗೆ ನೀಡಲಾಗಿತ್ತು. 120 ಪುರುಷರ ಬ್ಯಾರಕ್‌ನ 3ನೇ ಮಹಡಿಯಿಂದ ಈ ರೈಫಲ್‌ಗಳನ್ನು ಕಳವು ಮಾಡಲಾಗಿದೆ. ಬಹುಶಃ ಆಗಸ್ಟ್ 16-17ರ ಮಧ್ಯರಾತ್ರಿ ಈ ಕಳ್ಳತನ ನಡೆದಿದೆ ಎಂದು ಹೇಳಿದೆ.
ಇದನ್ನು ಓದಿ: ಹಲವು ಸಮಸ್ಯೆಗಳ ನಡುವೆಯೂ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ರಾಷ್ಟ್ರೀಯ ಪ್ರಶಸ್ತಿ
ಪ್ರತ್ಯಕ್ಷದರ್ಶಿಗಳಾಗಿರುವ ರಾಜೇಶ್ ಕುಮಾರ್ ಮತ್ತು ಸಂದೀಪ್ ಮೀನಾ ಅವರ ರೂಮ್‌ಮೇಟ್‌ಗಳಾದ ಮನೀಷ್ ಪುನೇತಾ ಮತ್ತು ಮೊಹಮ್ಮದ್ ಅಸ್ಲಾಂ ಅವರು ಆಗಸ್ಟ್ 17 ರಂದು ಎರಡು ಬಂದೂಕುಗಳನ್ನು ನೋಡಿದ್ದಾರೆ. ಐಟಿಬಿಪಿ, ದೂರಿನಲ್ಲಿ, ಎಲ್ಲಾ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ರಾಜೇಶ್ ಕುಮಾರ್, ಸಂದೀಪ್ ಮೀನಾ, ಮನೀಶ್ ಪುನೇತಾ ಮತ್ತು ಮೊಹಮ್ಮದ್ ಅಸ್ಲಾಂ ಅವರು ಐಟಿಬಿಪಿ ಕ್ಯಾಂಪಸ್ ಆವರಣದಲ್ಲಿ ಶಸ್ತ್ರಾಸ್ತ್ರಗಳ ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಿದ್ದರು, ಆದರೆ ಅವುಗಳನ್ನು ಪತ್ತೆಹಚ್ಚಲು ವಿಫಲರಾಗಿದ್ದಾರೆ.
ಈ ಕುರಿತು ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಉಪ ಪೊಲೀಸ್ ಆಯುಕ್ತೆ(ಅಪರಾಧ ಮತ್ತು ಸಂಚಾರ) ಪಿ ವಿ ಸ್ನೇಹಾ ಅವರು ತನಿಖೆಯ ಸಮಯದಲ್ಲಿ ವಿಶೇಷ ತಂಡವನ್ನು ಮುನ್ನಡೆಸಲಿದ್ದಾರೆ.