ದುಬೈ ನಿಂದ ವಾಪಸ್ಸಾಗಲು ನಿರಾಕರಿಸಿದ ಪತ್ನಿ; ಮಕ್ಕಳಿಗೂ ವಿಷ ಉಣಿಸಿ ವ್ಯಕ್ತಿ ತಾನೂ ಆತ್ಮಹತ್ಯೆಗೆ ಶರಣು!
ದುಬೈ ನಿಂದ ಭಾರತಕ್ಕೆ ವಾಪಸ್ಸಾಗಲು ಪತ್ನಿ ಒಪ್ಪದ ಹಿನ್ನೆಲೆಯಲ್ಲಿ ಬೇಸರಗೊಂಡ ವ್ಯಕ್ತಿಯೋರ್ವ ತನ್ನ 3 ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಪೂರ್ ಹೌಸ್ ಕಾಲೋನಿಯಲ್ಲಿ ನಡೆದಿದೆ.
Published: 20th August 2022 02:35 AM | Last Updated: 20th August 2022 01:52 PM | A+A A-

ಆತ್ಮಹತ್ಯೆ
ತುಮಕೂರು: ದುಬೈ ನಿಂದ ಭಾರತಕ್ಕೆ ವಾಪಸ್ಸಾಗಲು ಪತ್ನಿ ಒಪ್ಪದ ಹಿನ್ನೆಲೆಯಲ್ಲಿ ಬೇಸರಗೊಂಡ ವ್ಯಕ್ತಿಯೋರ್ವ ತನ್ನ 3 ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಪೂರ್ ಹೌಸ್ ಕಾಲೋನಿಯಲ್ಲಿ ನಡೆದಿದೆ.
ಓರ್ವ ಹೆಣ್ಣು ಮಗಳು ಸೇರಿದಾಂತೆ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಮೃತ ಸಮೀ ಉಲ್ಲಾ (35) ಕಾರ್ಮಿಕನಾಗಿದ್ದು, ಆತನ ಪತ್ನಿ ಸಾಯಿರಾ ಬಾನು ದುಬೈ ನಲ್ಲಿ ನಾಲ್ಕು ವರ್ಷಗಳಿಂದ ಮನೆಕೆಲಸದ ವೃತ್ತಿ ಮಾಡುತ್ತಿದ್ದರು. ಸಾಯಿರಾ ಬಾನುಗೆ ವಾಪಸ್ಸಾಗುವಂತೆ ಸಮೀ ಉಲ್ಲಾ ಮಾಡುತ್ತಿದ್ದ ನಿರಂತರ ಮನವಿಗಳನ್ನು ಆಕೆ ತಿರಸ್ಕರಿಸುತ್ತಿದ್ದಳು. ಆದರೆ ಮಕ್ಕಳ ಮನವಿಯನ್ನೂ ಆಕೆ ತಿರಸ್ಕರಿಸಿದಾಗ ವ್ಯಕ್ತಿ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಿಲಕ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.