ಮಧ್ಯಾಹ್ನದ ಬಿಸಿಯೂಟಕ್ಕೆ ಪೌಷ್ಟಿಕಾಂಶ: ಅಕ್ಷಯ ಪಾತ್ರಾ ಫೌಂಡೇಶನ್‌ ಜೊತೆಗಿನ ಒಪ್ಪಂದಕ್ಕೆ ಐಐಎಂಆರ್ ಸಹಿ

ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ಜೋಳ, ಸಜ್ಜೆ ಮತ್ತು ರಾಗಿಯನ್ನು ರಾಜ್ಯ ಹಾಗೂ ದೇಶದಾದ್ಯಂತ ಪರಿಚಯಿಸಲಾಗುವುದು. ಪೋಷಣ್ ಅಭಿಯಾನದ ಭಾಗವಾಗಿ ಮಕ್ಕಳ ಊಟದಲ್ಲಿ ಪೌಷ್ಟಿಕಾಂಶವನ್ನು ಸೇರಿಸಲು ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR), ಅಕ್ಷಯ ಪಾತ್ರಾ ಫೌಂಡೇಶನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ಜೋಳ, ಸಜ್ಜೆ ಮತ್ತು ರಾಗಿಯನ್ನು ರಾಜ್ಯ ಹಾಗೂ ದೇಶದಾದ್ಯಂತ ಪರಿಚಯಿಸಲಾಗುವುದು. ಪೋಷಣ್ ಅಭಿಯಾನದ ಭಾಗವಾಗಿ ಮಕ್ಕಳ ಊಟದಲ್ಲಿ ಪೌಷ್ಟಿಕಾಂಶವನ್ನು ಸೇರಿಸಲು ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR), ಅಕ್ಷಯ ಪಾತ್ರಾ ಫೌಂಡೇಶನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ ಮೂರು ತಿಂಗಳಲ್ಲಿ ಹೊಸ ಮೆನುವನ್ನು ಪರಿಚಯಿಸಲಿದೆ ಎನ್ನಲಾಗಿದೆ.

ಈ ಬದಲಾವಣೆಯನ್ನು ಹಂತಹಂತವಾಗಿ ಜಾರಿಗೆ ತರಲಾಗುವುದು. ಬೆಂಗಳೂರು ಮತ್ತು ಹೈದರಾಬಾದ್‌ನ ಕೆಲವು ಶಾಲೆಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲಾಗುವುದು. ಪ್ರತಿಕ್ರಿಯೆಯ ಆಧಾರದ ಮೇಲೆ, ಪರಿಷ್ಕರಣೆಗಳನ್ನು ಮಾಡಲಾಗುತ್ತದೆ ಮತ್ತು ಅವುಗಳನ್ನು ಎಲ್ಲಾ ಶಾಲೆಗಳಲ್ಲಿ ಪರಿಚಯಿಸಲಾಗುತ್ತದೆ. ಆರಂಭದಲ್ಲಿ, ವಾರಕ್ಕೊಮ್ಮೆ ಆಹಾರವನ್ನು ಬದಲಾಯಿಸಲಾಗುತ್ತದೆ ಎಂದು ನ್ಯೂಟ್ರಿಹಬ್‌ನ ಸಿಇಒ ಮತ್ತು ಐಸಿಎ-ಐಐಎಂಆರ್‌ನ ಪ್ರಧಾನ ವಿಜ್ಞಾನಿ ಬಿ ದಯಾಕರ್ ರಾವ್ ಹೇಳಿದ್ದಾರೆ.

ಮಕ್ಕಳಿಗೆ ಇವುಗಳ ರುಚಿ ಸಿಗುವಂತೆ ಸಂಯೋಜನೆಯಲ್ಲಿ ಇವುಗಳನ್ನು ಪರಿಚಯಿಸಲಾಗುವುದು. ಗೋಧಿ ಮತ್ತು ಅಕ್ಕಿಯೊಂದಿಗೆ ಬಹು ಧಾನ್ಯದ ಸಂಯೋಜನೆಯನ್ನು ಸಹ ನೀಡಲಾಗುವುದು. ಆರಂಭದಲ್ಲಿ ರಾಗಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದರು.

ಅಕ್ಷಯ ಪಾತ್ರ ಫೌಂಡೇಶನ್‌ನ ಮುಖ್ಯ ಸಂವಹನ ಮತ್ತು ಸುಸ್ಥಿರತೆ ಅಧಿಕಾರಿ ಅನಂತ್ ಅರೋರಾ ಮಾತನಾಡಿ, ಇದರೊಂದಿಗೆ ಮಕ್ಕಳಿಗೆ ಪ್ರೋಟೀನ್, ಕ್ಯಾಲೋರಿಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಮೂಲವನ್ನು ಹೆಚ್ಚಿಸಲಾಗುವುದು ಮತ್ತು ನಿಯಮಿತವಾಗಿ ಅವರಿಂದ ಪ್ರತಿಕ್ರಿಯೆಯನ್ನು ಕೇಳಲಾಗುತ್ತದೆ. 2023 ರಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಿಲೆಟ್ಸ್ ವರ್ಷಕ್ಕೆ ಮುಂಚಿತವಾಗಿಯೇ ಈ ಉಪಕ್ರಮವನ್ನು ಶಾಲೆಗಳಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com