ಸಿಂಗೇನ ಅಗ್ರಹಾರಕ್ಕೆ ಕಲಾಸಿಪಾಳ್ಯ ಮಾರುಕಟ್ಟೆ ವರ್ಗಾವಣೆ; ನಷ್ಟದ ಭಯದಲ್ಲಿರುವ ಸಗಟು ವ್ಯಾಪಾರಿಗಳು

'ಕಲಾಸಿಪಾಳ್ಯ ಮಾರುಕಟ್ಟೆಯನ್ನು ಹೊಸೂರು ರಸ್ತೆಯಲ್ಲಿರುವ ಸಿಂಗೇನ ಅಗ್ರಹಾರಕ್ಕೆ ವರ್ಗಾವಣೆ ಮಾಡುವುದರ ವಿರುದ್ಧ ಅಭಿಪ್ರಾಯ ಹೊಂದಿದ್ದು, ಸಾಗಣೆ ವೆಚ್ಚ ಹೆಚ್ಚಳ, ವ್ಯಾಪಾರದಲ್ಲಿ ನಷ್ಟ ಅನುಭವಿಸಬೇಕಾದ ಆತಂಕ ಹೊಂದಿದ್ದಾರೆ.
ಕಲಾಸಿಪಾಳ್ಯ ಮಾರ್ಕೆಟ್ (ಸಂಗ್ರಹ ಚಿತ್ರ)
ಕಲಾಸಿಪಾಳ್ಯ ಮಾರ್ಕೆಟ್ (ಸಂಗ್ರಹ ಚಿತ್ರ)

ಬೆಂಗಳೂರು: 'ಕಲಾಸಿಪಾಳ್ಯ ಮಾರುಕಟ್ಟೆಯನ್ನು ಹೊಸೂರು ರಸ್ತೆಯಲ್ಲಿರುವ ಸಿಂಗೇನ ಅಗ್ರಹಾರಕ್ಕೆ ವರ್ಗಾವಣೆ ಮಾಡುವುದರ ವಿರುದ್ಧ ಅಭಿಪ್ರಾಯ ಹೊಂದಿದ್ದು, ಸಾಗಣೆ ವೆಚ್ಚ ಹೆಚ್ಚಳ, ವ್ಯಾಪಾರದಲ್ಲಿ ನಷ್ಟ ಅನುಭವಿಸಬೇಕಾದ ಆತಂಕ ಹೊಂದಿದ್ದಾರೆ.

ಮಾರ್ಕೆಟ್ ನ್ನು ವರ್ಗಾವಣೆ ಮಾಡುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈಸ್ ಇಲ್ಯಾಜ್, ಕಲಾಸಿಪಾಳ್ಯ ಮಾರುಕಟ್ಟೆ ಜನರಿಗೆ ಆಗಮಿಸುವುದಕ್ಕೆ ಸುಲಭವಾಗಿರುವ ಕೇಂದ್ರ ಪ್ರದೇಶದಲ್ಲಿದೆ. ಹತ್ತಿರದಲ್ಲಿ ಬಸ್ ನಿಲ್ದಾಣ ಇರುವುದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡುವುದಕ್ಕೆ ಸುಲಭವಾಗಿರಲಿದೆ, ಮಾರ್ಕೆಟ್ ವರ್ಗಾವಣೆಯಾಗದೇ ಇದ್ದಲ್ಲಿ ಅದರಿಂದ ಸಣ್ಣ ವ್ಯಾಪಾರ ಮಾಡುವ ಮಾಲಿಕರಿಗೆ ಒಳಿತಾಗಲಿದೆ.

ಸಿಂಗೇನ ಅಗ್ರಹಾರದ 48 ಎಕರೆ ಭೂಮಿಯಲ್ಲಿ ಹೊಸ ತರಕಾರಿ ಮಾರುಕಟ್ಟೆ ಶೀಘ್ರವೇ ಬರಲಿದ್ದು, 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಶೇಷ ಮಾರುಕಟ್ಟೆ (ಹಣ್ಣು, ತರಕಾರಿ, ಹೂವು) ಗಾಗಿ ಇರುವ ವಿಶೇಷ ಕಾರ್ಯದರ್ಶಿ ಡಾ. ವಿ ರಾಜಣ್ಣ ಮಾತನಾಡಿ ಇನ್ನು 3-4 ತಿಂಗಳಲ್ಲಿ ಕಲಾಸಿಪಾಳ್ಯದ ಮಾರುಕಟ್ಟೆ ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದರೂ ಹಣ್ಣು ಹಾಗೂ ತರಕಾರಿಗಳ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್ ವಿ ಗೋಪಿ ಪ್ರತಿಕ್ರಿಯೆ ನೀಡಿದ್ದು, ಮಾರುಕಟ್ಟೆ ಸ್ಥಳಾಂತರಗೊಳಿಸುವುದರಿಂದ ಉಪಯೋಗವಾಗಲಿದೆ. ಹೆಚ್ಚಿನ ಜಾಗ ಸಿಗಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಸಾಗಣೆ ಸಮಸ್ಯೆಯನ್ನೂ ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com