ಬೆಂಗಳೂರು: ಔಷಧೀಯ ಸಸ್ಯಗಳ ಬೀಜಗಳನ್ನೊಳಗೊಂಡ 10 ಸಾವಿರ ಗಣೇಶ ಮೂರ್ತಿ ವಿತರಣೆ!

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಭಾನುವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಔಷಧೀಯ ಸಸ್ಯಗಳ ಬೀಜಗಳನ್ನು ಒಳಗೊಂಡಿರುವ 10,000 ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಭಾನುವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಔಷಧೀಯ ಸಸ್ಯಗಳ ಬೀಜಗಳನ್ನು ಒಳಗೊಂಡಿರುವ 10,000 ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಿದೆ.

ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಈ ಕಾರ್ಯಕ್ರಮವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರುವ ಗುರಿಯನ್ನು ಹೊಂದಿದೆ.

ಶ್ರೀ ವಿದ್ಯಾರಣ್ಯ ಯುವಕ ಸಂಘದ  ಆಯೋಜಿಸಲಾದ ಈ ಕಾರ್ಯಕ್ರಮವು ಪರಿಸರ ಸ್ನೇಹಿ ಗಣೇಶ ಚತುರ್ಥಿಯ ಆಚರಣೆಯನ್ನು ಉತ್ತೇಜಿಸುತ್ತದೆ. ಹಬ್ಬವನ್ನು ಆಚರಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮೈಸೂರು ರಾಜವಂಶಸ್ಥರಾದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾರ್ವಜನಿಕರಿಗೆ ಮತ್ತು ಸಂಸ್ಥೆಗಳಿಗೆ ಮನೆ ಹಾಗೂ ಇತರ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ವಿಗ್ರಹಗಳನ್ನು ವಿತರಿಸಿದರು, ಮೊದಲು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂತರ ಬಕೆಟ್ ಮತ್ತು ಮಡಕೆಗಳಲ್ಲಿ ಮುಳುಗಿಸಬೇಕು, ಇದರಿಂದ ಮಣ್ಣಿನ  ಗಣಪ ಔಷಧೀಯ ಸಸ್ಯಗಳಾಗಿ ಪರಿವರ್ತನೆಯಾಗಲಿದೆ.

ಸಾರ್ವಜನಿಕರು ಮತ್ತು ಸಂಘಟಕರು ಯಾವುದೇ ರಾಸಾಯನಿಕಗಳನ್ನು ಹೊಂದಿರದ ಪರಿಸರ ಸ್ನೇಹಿ ವಿಗ್ರಹಗಳನ್ನು ಖರೀದಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆಗಳನ್ನು ನೀಡಿದೆ. ಅಲ್ಲದೆ, ಕೆರೆಗಳಲ್ಲಿ ವಿಗ್ರಹಗಳನ್ನು ಮುಳುಗಿಸುವ ಮುನ್ನ ಕಾಗದದ ಬಟ್ಟಲುಗಳನ್ನು ಬಳಸಿ ಪ್ರಸಾದ ವಿತರಿಸಬೇಕು  ಹೂಮಾಲೆ ತೆಗೆಯಬೇಕು. ಸಾರ್ವಜನಿಕರು ಮೂರ್ತಿಗಳನ್ನು ಅಲಂಕರಿಸಲು ಪ್ಲಾಸ್ಟಿಕ್ ಬದಲಿಗೆ ನೈಸರ್ಗಿಕ ಹೂವುಗಳನ್ನು ಬಳಸಲು ಸೂಚಿಸಲಾಗಿದೆ.

ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ವಿತರಿಸಲು ಕೆಎಸ್‌ಪಿಸಿಬಿ ನಿರ್ಧರಿಸಿದ್ದು, ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಲು ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದೆ.


ಗಣೇಶ ಚತುರ್ಥಿ ಆಚರಣೆಗೆ ಪೊಲೀಸರ ಸೂಚನೆಗಳು

* ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದು ಕಾನೂನುಬಾಹಿರ.
* ಯಾವುದೇ ಸೂಕ್ಷ್ಮ ಪ್ರದೇಶದಲ್ಲಿ ಅಥವಾ ವಿವಾದಾತ್ಮಕ ಸ್ಥಳದಲ್ಲಿ ಯಾವುದೇ ವಿಗ್ರಹಗಳನ್ನು ಸ್ಥಾಪಿಸಬಾರದು
* ಯಾವುದೇ ಅಹಿತಕರ ಘಟನೆಗೆ ಸಂಘಟಕರೇ ಹೊಣೆ.
* ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೊದಲು ಸಂಘಟಕರು ಬಿಬಿಎಂಪಿ ಅನುಮತಿ ಪಡೆಯಬೇಕು ಮತ್ತು ಸಂಚಾರಕ್ಕೆ ತೊಂದರೆಯಾಗಬಾರದು
* ಸಂಘಟಕರು ನಿಗದಿತ ಸಮಯ ಮೀರಿ ಮೈಕ್ ಮತ್ತು ಧ್ವನಿವರ್ಧಕಗಳನ್ನು ಬಳಸಬಾರದು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com