ತೆರಿಗೆ ಹಣ ಬಳಸಿ ರಸ್ತೆ ಸರಿಪಡಿಸಿ: ಮಣಿಪಾಲದ ವಿದ್ಯಾರ್ಥಿನಿ ರಾಜ್ಯ ಸರ್ಕಾರಕ್ಕೆ  ಒತ್ತಾಯ

ಮಣಿಪಾಲದ ಕೋಮಲ್ ಜೆನಿಫರ್ ಡಿಸೋಜಾ ಅವರು ಶುಕ್ರವಾರ ತಮ್ಮ ಕಾರಿನಲ್ಲಿ ಕುಳಿತು ನೆರೆಹೊರೆಯ ರಸ್ತೆಗಳ ದುಸ್ಥಿತಿಯನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿ ಚಿತ್ರ
ಬೆಂಗಳೂರಿನ ರಸ್ತೆ ಗುಂಡಿ ಚಿತ್ರ

ಉಡುಪಿ: ಮಣಿಪಾಲದ ಕೋಮಲ್ ಜೆನಿಫರ್ ಡಿಸೋಜಾ ಅವರು ಶುಕ್ರವಾರ ತಮ್ಮ ಕಾರಿನಲ್ಲಿ ಕುಳಿತು ನೆರೆಹೊರೆಯ ರಸ್ತೆಗಳ ದುಸ್ಥಿತಿಯನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ಜನರಿಂದ ವಸೂಲಿ ಮಾಡುವ ತೆರಿಗೆ ಹಣವನ್ನು  ಮೂಲ ಸೌಕರ್ಯ ಕಲ್ಪಿಸಲು ಬಳಸುತ್ತಿಲ್ಲ ಎಂದು ಅವರು ದೂರಿದ್ದಾರೆ.  ಉಡುಪಿ ಶಾಸಕ ಕೆ.ರಘುಪತಿ ಭಟ್ ಮನೆಗೆ ತೆರಳಲು ಇದೇ ಮಾರ್ಗದಲ್ಲಿ ತೆರಳುತ್ತಿದ್ದರೂ ರಸ್ತೆ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ. 

ಹದಗೆಟ್ಟ ರಸ್ತೆಯ ಮೇಲೆ ವಾಹನ ಚಾಲಕ ಬಿದ್ದಿರುವುದನ್ನು ನೋಡಿದ ನಂತರ ಅವಳು ವೀಡಿಯೊ ಮಾಡಲು ನಿರ್ಧರಿಸಿದ್ದಾಳೆ. ಯಾರಾದರೂ ಕೆಟ್ಟ ರಸ್ತೆಗಳಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ ಬಿಲ್‌ ಯಾರು ಪಾವತಿಸುತ್ತಾರೆ? ನೀವು (ಜನಪ್ರತಿನಿಧಿಗಳು) ನಿಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಿಲ್ಲ, ಆದರೆ ನಮ್ಮ ತೆರಿಗೆ ಹಣವನ್ನು ಬಳಸಿಕೊಳ್ಳಿ ಮತ್ತು ರಸ್ತೆಗಳನ್ನು ಸರಿಪಡಿಸಿ  ಎಂದು ಕೋಮಲ್ ಒತ್ತಾಯಿಸಿದ್ದಾರೆ.

ಅಂಬಾಗಿಲು ಮತ್ತು ಮಣಿಪಾಲ ನಡುವಿನ 3.9 ಕಿ.ಮೀ ಉದ್ದದ ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿಯು ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿತ್ತು. ನಂತರ ಎಡಬಿಡದೆ ಸುರಿದ ಮಳೆಯಿಂದ ಟಾರಿಂಗ್ ಕಾಮಗಾರಿ ವಿಳಂಬವಾಯಿತು. ಅಗಲೀಕರಣ ಮತ್ತು ಡಾಂಬರೀಕರಣ ಕಾರ್ಯ ನಡೆಯುತ್ತಿದೆ ಎಂದು ಉಡುಪಿಯ ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಭಟ್ ಟಿಎನ್‌ಎಸ್‌ಇಗೆ ತಿಳಿಸಿದ್ದಾರೆ. ಕೇವಲ ಒಂದು ಪದರವನ್ನು ಹಾಕಲಾಗಿದೆ ಮತ್ತು ಮಧ್ಯದ ಕೆಲಸ ನಡೆಯುತ್ತಿದೆ. 23 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ವಿಸ್ತರಣೆಯಾಗಲಿದೆ ಎಂದು ಅವರು ಹೇಳಿದರು.

ದೋಷಪೂರಿತ ರಸ್ತೆಗಳನ್ನು ಸರಿಪಡಿಸುವವರೆಗೆ ಗುತ್ತಿಗೆದಾರರಿಗೆ ಹಣ ನೀಡುವುದಿಲ್ಲ, ರೈಲ್ವೆ ಸೇತುವೆಯವರೆಗಿನ ಮುಂದಿನ ಪದರವನ್ನು ಶೀಘ್ರದಲ್ಲೇ ಹಾಕಲಾಗುವುದು ಎಂದು ಅವರು ಹೇಳಿದರು. ಈ ಮಧ್ಯೆ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಉಡುಪಿ ಶಾಸಕ ರಘುಪತಿ ಭಟ್, ಅಂಬಾಗಿಲು ಮತ್ತು ಮಣಿಪಾಲ ನಡುವಿನ ಕಿರಿದಾದ ರಸ್ತೆಗಿಂತ ಇದು ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ರಸ್ತೆಯಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com