ಕೊಡಗು: ಮನುಷ್ಯ- ವನ್ಯಜೀವಿಗಳ ಸಂಘರ್ಷ ತಡೆಗೆ ಅರಣ್ಯ ಇಲಾಖೆಯಿಂದ ಹಲವು ಯೋಜನೆಗಳು
ಕೋವಿಡ್-19 ಸಾಂಕ್ರಾಮಿಕ ಕೊಡಗಿನಾದ್ಯಂತ ಅರಣ್ಯ ಇಲಾಖೆಯ ನಿರ್ವಹಣೆ ಕಾಮಗಾರಿಗಳು ಹಾಗೂ ಹೊಸ ಕಾಮಗಾರಿಗಳಿಗೆ ಹಿನ್ನೆಡೆ ಉಂಟು ಮಾಡಿತ್ತು. ಪರಿಣಾಮ ಈ ಪ್ರದೇಶದಲ್ಲಿ ಮಾನವ-ವನ್ಯ ಜೀವಿಗಳ ಸಂಘರ್ಷ ಹೆಚ್ಚುತ್ತಿದೆ.
Published: 01st December 2022 10:53 PM | Last Updated: 02nd December 2022 03:31 AM | A+A A-

ಕಾಡಾನೆ (ಸಂಗ್ರಹ ಚಿತ್ರ)
ಕೊಡಗು: ಕೋವಿಡ್-19 ಸಾಂಕ್ರಾಮಿಕ ಕೊಡಗಿನಾದ್ಯಂತ ಅರಣ್ಯ ಇಲಾಖೆಯ ನಿರ್ವಹಣೆ ಕಾಮಗಾರಿಗಳು ಹಾಗೂ ಹೊಸ ಕಾಮಗಾರಿಗಳಿಗೆ ಹಿನ್ನೆಡೆ ಉಂಟು ಮಾಡಿತ್ತು. ಪರಿಣಾಮ ಈ ಪ್ರದೇಶದಲ್ಲಿ ಮಾನವ-ವನ್ಯ ಜೀವಿಗಳ ಸಂಘರ್ಷ ಹೆಚ್ಚುತ್ತಿದೆ.
ಈ ಭಾಗದಲ್ಲಿ ಇರುವ ಕಾಡಾನೆ ದಾಳಿಗಳ ಜೊತೆಗೆ ಹುಲಿಯ ಕಾಟದಿಂದ ಹಲವು ಮನುಷ್ಯರಷ್ಟೇ ಅಲ್ಲದೇ, ಹಲವು ಹಸುಗಳು ಜೀವ ಕಳೆದುಕೊಂಡಿದ್ದಾವೆ. ಪರಿಣಾಮ ಈಗ ಅರಣ್ಯ ಇಲಾಖೆ ಮನುಷ್ಯ- ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಘರ್ಷಗಳಿರುವ ಪ್ರದೇಶದಲ್ಲಿ ಸ್ಥಿರ ಕಣ್ಗಾವಲು ತಂಡಗಳ ನಿಯೋಜನೆ ಮಾಡುವುದು ಮನುಷ್ಯ-ಕಾಡಾನೆ ನಡುವಿನ ಸಂಘರ್ಷ ತಡೆಗೆ ವಾರ್ಷಿಕ 30-40 ಕೋಟಿ ರೂಪಾಯಿ ಬಜೆಟ್ ಮೀಸಲಿಡಲಾಗುತ್ತದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ!
ಈ ವರ್ಷ ಅರಣ್ಯ ಇಲಾಖೆಗೆ ಈ ವರ್ಷ ನಾಗರಹೊಳೆಯ ವ್ಯಾಪ್ತಿಯಲ್ಲಿ 22 ಕಿ.ಮೀ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್, ಮಡಿಕೇರಿ ವ್ಯಾಪ್ತಿಯಲ್ಲಿ 20 ಕಿ.ಮೀ ವ್ಯಾಪ್ತಿಯಲ್ಲಿ ಬ್ಯಾರಿಕೇಡ್, ಮಡಿಕೇರಿ ವನ್ಯಜೀವಿ ವ್ಯಾಪ್ತಿಯಲ್ಲಿ 2ಕೀ.ಮೀ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುಮೋದನೆ ಸಿಕ್ಕಿದೆ.
2023-24 ರಲ್ಲಿ ಸೋಲಾರ್ ಬೇಲಿಗಳನ್ನು ಅಳವಡಿಸುವುದು ಪ್ರಮುಖ ಆದ್ಯತೆಯಾಗಿರಲಿದ್ದು, ಸುಧಾರಿತ ಡಬಲ್ ಟೆಂಟಕಲ್ ಸೌರ ಬೇಲಿಗಳು ನಾಗರಹೊಳೆ ಅರಣ್ಯದ 25 ಕಿ.ಮೀ ವ್ಯಾಪ್ತಿಯಾದ್ಯಂತ ಅಳವಡಿಸಲಾಗುತ್ತದೆ. ಇದರ ಜೊತೆಗೆ ಹಲವು ನಿಷ್ಕ್ರಿಯ ಸೌರ ಬೇಲಿಗಳನ್ನು ದುರಸ್ತಿ ಮಾಡಲಾಗುತ್ತದೆ.
ಸಂಘರ್ಷ ತಗ್ಗಿಸುವ ಯೋಜನೆಗಳ ಹೊರತಾಗಿ ಇಲಾಖೆ, ಸಂಘರ್ಷ ಪ್ರದೇಶಗಳಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್ ಗಳನ್ನು ನೀಡಲಿದೆ.