ಬೆಂಗಳೂರು: ರಸ್ತೆಯ ಕಳಪೆ ಕಾಮಗಾರಿಗೆ ದಂಡ ಕಟ್ಟಿದ್ದ ಗುತ್ತಿಗೆದಾರನಿಗೆ ಮತ್ತೆ 99 ಕೋಟಿ ರೂ. ಮೌಲ್ಯದ ಗುತ್ತಿಗೆ!

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜೂನ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡುವುದಕ್ಕೆ ಮೊದಲು ಮಾಡಿದ ಕಳಪೆ ರಸ್ತೆ ಕಾಮಗಾರಿಯ ಧೂಳು ಇನ್ನೂ ಮಾಸುವ ಮುನ್ನವೇ ಅದರ ಕಾಮಗಾರಿಯ ಗುತ್ತಿಗೆ ಪಡೆದಿದ್ದ ರಮೇಶ್ ಎಸ್ ಗೆ ಮತ್ತೊಂದು ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕಾಮಗಾರಿ ಸಿಕ್ಕಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜೂನ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡುವುದಕ್ಕೆ ಮೊದಲು ಮಾಡಿದ ಕಳಪೆ ರಸ್ತೆ ಕಾಮಗಾರಿಯ ಧೂಳು ಇನ್ನೂ ಮಾಸುವ ಮುನ್ನವೇ ಅದರ ಕಾಮಗಾರಿಯ ಗುತ್ತಿಗೆ ಪಡೆದಿದ್ದ ರಮೇಶ್ ಎಸ್ ಗೆ ಮತ್ತೊಂದು ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕಾಮಗಾರಿ ಸಿಕ್ಕಿದೆ. ಕೆಂಗೇರಿ ಮತ್ತು ಕೊಮ್ಮಘಟ್ಟದಲ್ಲಿ ಕಳಪೆ ಕಾಮಗಾರಿಗಾಗಿ 3 ಲಕ್ಷ ರೂಪಾಯಿ ದಂಡ ಕಟ್ಟಿದ್ದ ರಮೇಶ್, ಇದೀಗ ಬಿಡಿಎ ವಿಶ್ವೇಶ್ವರಯ್ಯ ಲೇಔಟ್‌ನ ಹಲವು ಕೋಟಿಗಳ ಅಭಿವೃದ್ಧಿ ಕಾಮಗಾರಿಯನ್ನು ನಿರ್ವಹಿಸುತ್ತಿರುವುದು ಅಚ್ಚರಿಯಾದರೂ ಸತ್ಯ.

ಆರ್‌ಟಿಐ ಕಾರ್ಯಕರ್ತ ಸುದರ್ಶನ್ ಎಸ್ ಮತ್ತು ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಅವರ ಪ್ರಕಾರ, ಅದೇ ಗುತ್ತಿಗೆದಾರ ರಮೇಶ್ ಅವರು ವಿಶ್ವೇಶ್ವರಯ್ಯ ಲೇಔಟ್ ಬ್ಲಾಕ್ 1, 2, 3, 4, 5 ಮತ್ತು 7 ರಲ್ಲಿ (ಬಿಡಿಎ) ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ.

ಕೊಮ್ಮಘಟ್ಟದಲ್ಲಿ ಕಳಪೆ ಕಾಮಗಾರಿ ನಡೆಸಿ ಪಾಲಿಕೆ ಗೌರವಕ್ಕೆ ಧಕ್ಕೆ ತಂದಿದ್ದಕ್ಕೆ ದಂಡ ಪಾವತಿಸಿದ ಗುತ್ತಿಗೆದಾರರು ಬ್ಲಾಕ್ 1ರಿಂದ 9ರವರೆಗೆ ಚರಂಡಿ, ಮೋರಿ ಅಭಿವೃದ್ಧಿ, ಫುಟ್ ಪಾತ್ ಹಾಗೂ ಇತರೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ನಾನು ಆಗಸ್ಟ್‌ನಲ್ಲಿ ಯೋಜನೆಗಳ ವಿವರಗಳನ್ನು ಕೋರಿ RTI ಪ್ರಶ್ನೆಯನ್ನು ಸಲ್ಲಿಸಿದೆ, ಆದರೆ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದರು, ಆದ್ದರಿಂದ ಸೆಪ್ಟೆಂಬರ್‌ನಲ್ಲಿ ನಾನು 'ಮೊದಲ ಮೇಲ್ಮನವಿ'ಗೆ ಹೋಗಿದ್ದೆ. ಇಲ್ಲಿಯೂ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಸುದರ್ಶನ್ ಆರೋಪಿಸುತ್ತಾರೆ. 

ವಿವಿಧ ಪ್ಯಾಕೇಜ್‌ಗಳ ಅಡಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, 99 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎನ್ನುತ್ತಾರೆ. 

ಇದೇ ಗುತ್ತಿಗೆದಾರ ಬಿಡಿಎಗೆ ಕಾಮಗಾರಿ ನಿರ್ವಹಿಸುತ್ತಿರುವ ಬಗ್ಗೆ ಬಿಡಿಎ ಎಂಜಿನಿಯರ್ ಸದಸ್ಯ ಎಚ್.ಡಿ.ಶಾಂತರಾಜಣ್ಣ ಕೂಡ ಖಚಿತಪಡಿಸಿದ್ದಾರೆ. ನಮ್ಮ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕಳಪೆ ಕೆಲಸವನ್ನು ಕಂಡಿಲ್ಲ. ಆಗಸ್ಟ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು, ನಮ್ಮ ಎಂಜಿನಿಯರ್‌ಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಬಡಾವಣೆಗೆ ಮೂಲ ಸೌಕರ್ಯಗಳ ಅಗತ್ಯವಿದೆ. ಒಂದೊಮ್ಮೆ ಅಭಿವೃದ್ಧಿ ಪಡಿಸಿದರೆ ಅಧಿಕಾರ ವ್ಯಾಪ್ತಿಯನ್ನು ಬಿಬಿಎಂಪಿಗೆ ಹಸ್ತಾಂತರಿಸುತ್ತೇವೆ ಎಂದು ಶಾಂತರಾಜಣ್ಣ ಹೇಳಿದರು.

ಇದೇ ವೇಳೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್, ಕಳಪೆ ಕಾಮಗಾರಿಗಾಗಿ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದ್ದು, ಅದನ್ನು ಮಾತ್ರ ಸರಿಪಡಿಸಬೇಕಿದೆ. ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ ಆದರೆ ದಂಡವನ್ನು ಪಾವತಿಸಲು ಮಾತ್ರ ಕೇಳಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com