ವಕ್ಫ್ ಆಸ್ತಿ ಹಗರಣದ ಅಪರಾಧಿಗಳನ್ನು ರಕ್ಷಿಸಲು ಸಿಎಂ ಯತ್ನ: ಅನ್ವರ್ ಮಾಣಿಪ್ಪಾಡಿ
ಬಿಜೆಪಿ ಜಂಟಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಅವರು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ವಕ್ಫ್ ಆಸ್ತಿ ಹಗರಣದ ಅಪರಾಧಿಗಳನ್ನು ರಕ್ಷಿಸಲು ಸಿಎಂ ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Published: 02nd December 2022 08:43 PM | Last Updated: 03rd December 2022 06:13 PM | A+A A-

ಅನ್ವರ್ ಮಾಣಿಪ್ಪಾಡಿ
ಮಂಗಳೂರು: ಬಿಜೆಪಿ ಜಂಟಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಅವರು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ವಕ್ಫ್ ಆಸ್ತಿ ಹಗರಣದ ಅಪರಾಧಿಗಳನ್ನು ರಕ್ಷಿಸಲು ಸಿಎಂ ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅನ್ವರ್ ಮಾಣಿಪ್ಪಾಡಿ, "ಕೊಳ್ಳೆ ಹೊಡೆದಿದ್ದಾರೆ ಎನ್ನಲಾದ 2200 ಕೋಟಿ ರೂಪಾಯಿ ಆಸ್ತಿಗೆ ಸಂಬಂಧಿಸಿದ ಹೋರಾಟದಲ್ಲಿ ವಕ್ಫ್ ಮಂಡಳಿಯನ್ನು ಬೆಂಬಲಿಸುವುದಾಗಿ ಇತ್ತಿಚೆಗಷ್ಟೇ ಸಿಎಂ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದು, ಸರ್ಕಾರಕ್ಕೆ ಹಗರಣದ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶ, ಲೋಕಾಯುಕ್ತ ವರದಿ ಬಗ್ಗೆ ಸಿಎಂ ಗೆ ಅರಿವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಾರಂಭಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ
ವಕ್ಫ್ ಹಗರಣದಲ್ಲಿ ನಡೆದಿರುವುದು 2,30,000 ಕೋಟಿ ರೂಪಾಯಿ ಮೊತ್ತದ ಹಗರಣವಾಗಿದ್ದು, ಇದರ ಬದಲಾಗಿ ಸಿಎಂ, 2,200 ಕೋಟಿ ಹಗರಣವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ನೀವು ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧರಾಗಿರಬೇಕು ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.
ಇಬ್ಬರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ತನಿಖೆಯ ವರದಿ ನಿಜವಲ್ಲ ಎನ್ನುವುದಾದರೆ, ನೀವು ವರದಿಯನ್ನು ಬಹಿರಂಗಗೊಳಿಸಿದವರಿಗೆ ಗಲ್ಲು ಶಿಕ್ಷೆ ನೀಡುವುದೂ ಸಾಧ್ಯವಿದೆ. 2,30,000 ಕೋಟಿ ರೂಪಾಯಿ ಮೊತ್ತದ ವಕ್ಫ್ ಆಸ್ತಿಗಳನ್ನು ತೆಗೆದುಕೊಳ್ಳುವುದು ವಕ್ಫ್ ಬೋರ್ಡ್ ಕೆಲಸವಲ್ಲ. ಈ ಹಗರಣದಲ್ಲಿ ತೊಡಗದಂತೆ ನೀವು ವಕ್ಫ್ ಮಂಡಳಿಗೆ ಎಚ್ಚರಿಕೆ ನೀಡಬಹುದು ಎಂದು ಮಾಣಿಪ್ಪಾಡಿ ಸಿಎಂ ಗೆ ಹೇಳಿದ್ದಾರೆ.