ಕೊಳಚೆ ನೀರಿನಿಂದ ಕೆ.ಆರ್.ಮಾರುಕಟ್ಟೆ ದುರ್ನಾತ: 3 ವರ್ಷಗಳು ಕಳೆದರೂ ಬಗೆಹರಿಯದ ಸಮಸ್ಯೆ!
ರಾಶಿ ಬಿದ್ದ ತರಕಾರಿ ಕಸ, ಕೊಳಚೆ ನೀರಿನಿಂದ ಕೆ.ಆರ್.ಮಾರುಕಟ್ಟೆಯ ಹಲವು ಪ್ರದೇಶಗಳು ದುರ್ನಾತ ಹೊಡೆಯುತ್ತಿದ್ದರೂ, ಸಮಸ್ಯೆ ಪರಿಹಸದೆ ಬಿಡಬ್ಲ್ಯೂಎಸ್ಎಸ್'ಬಿ ಮತ್ತು ಬಿಬಿಎಂಪಿ ಪರಸ್ಪರ ದೂಷಿಸುವುದರತ್ತ ಕಾರ್ಯನಿರತವಾಗಿದೆ.
Published: 03rd December 2022 10:21 AM | Last Updated: 03rd December 2022 12:16 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಶಿ ಬಿದ್ದ ತರಕಾರಿ ಕಸ, ಕೊಳಚೆ ನೀರಿನಿಂದ ಕೆ.ಆರ್.ಮಾರುಕಟ್ಟೆಯ ಹಲವು ಪ್ರದೇಶಗಳು ದುರ್ನಾತ ಹೊಡೆಯುತ್ತಿದ್ದರೂ, ಸಮಸ್ಯೆ ಪರಿಹಸದೆ ಬಿಡಬ್ಲ್ಯೂಎಸ್ಎಸ್'ಬಿ ಮತ್ತು ಬಿಬಿಎಂಪಿ ಪರಸ್ಪರ ದೂಷಿಸುವುದರತ್ತ ಕಾರ್ಯನಿರತವಾಗಿದೆ.
ಕರ್ನಾಟಕ ಹಾರ್ಡ್‌ವೇರ್ ಮತ್ತು ಅಲೈಡ್ ಮರ್ಚೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಇ ರಾಹುಲ್ ಗೋಯಲ್ ಮಾತನಾಡಿ, ಸಿಟಿ ಮಾರ್ಕೆಟ್‌ನಿಂದ ಟೌನ್ ಹಾಲ್‌ಗೆ ಸಂಪರ್ಕಿಸುವ ಎಸ್‌ಜೆಪಿ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರು ಉಕ್ಕಿ ಹರಿಯುತ್ತಿದೆ. ಕೊಳಚೆ ನೀರು ಉಕ್ಕಿ ಹರಿಯುತ್ತಿರುವುದರಿಂದ ವಾಹನಗಳನ್ನು ನಿಲುಗಡೆ ಮಾಡಲು ಸಾಧ್ಯವಾಗದ ಕಾರಣ ಈ ಭಾಗಕ್ಕೆ ಗ್ರಾಹಕರು ಬರುತ್ತಿಲ್ಲ. ಸಮಸ್ಯೆ ಬಗೆಹರಿಸಲು ಕಚೇರಿಯಿಂದ ಕಚೇರಿಗೆ ತಿರುಗಾಡುತ್ತಲೇ ಇದ್ದೇವೆ. ಆದರೆ, ಸಂಬಂಧ ಅಧಿಕಾರಿಗಳು ಮಾತ್ರ ಈ ಬಗ್ಗೆ ಕಿವಿಗೊಡುತ್ತಿಲ್ಲ ಎಂದು ಹೇಳಿದ್ದಾರೆ.
ಫುಟ್ ಪಾತ್ ಕೆಳಗಿರುವ ಚರಂಡಿಗಳಲ್ಲಿ ಹಲವು ವರ್ಷಗಳಿಂದ ಹೂಳು ತೆಗೆದಿಲ್ಲ. ಇದರಿಂದ ಸ್ಥಳದಲ್ಲಿ ದುರ್ನಾತ ಹೊಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೆ.ಆರ್.ಮಾರುಕಟ್ಟೆಯಲ್ಲಿ ಮಾದಕವಸ್ತು ಮಾರುತ್ತಿದ್ದ ಆರೋಪಿ ಬಂಧನ
ರಸ್ತೆಯ ತುಂಬೆಲ್ಲಾ ಚರಂಡಿ ನೀರು ತುಂಬಿ ಹರಿಯುತ್ತಿದ್ದು, ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುತ್ತಿವೆ, ಬಸ್‌ಗಳು ಕೊಳಚೆ ನೀರನ್ನು ದಾರಿಹೋಕರ ಮೇಲೆ ಎರಚುತ್ತಿವೆ. ''ಕೊಳಚೆ ನೀರಿನಿಂದಾಗಿ ರಸ್ತೆಯನ್ನು ಸ್ವಚ್ಛಗೊಳಿಸಲು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ. ಯಾಂತ್ರೀಕೃತವಾಗಿ ಕಸಗುಡಿಸಲು ಬಹಳ ದಿನಗಳಿಂದ ಮನವಿ ಮಾಡುತ್ತಾ ಬಂದಿದ್ದೇವೆ. ರಸ್ತೆಯಲ್ಲಿ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಿದೆ. ಅಲ್ಲದೆ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕ ಶೌಚಾಲಯಗಳ ಕೊರತೆಯೂ ಇದೆ ಎಂದು ಸಂಘದ ಅಧ್ಯಕ್ಷ ವಿಕ್ರಮ್ ಅಗರ್ವಾಲ್ ಹೇಳಿದ್ದಾರೆ.
ಧರ್ಮರಾಯಸ್ವಾಮಿ ದೇವಸ್ಥಾನದ ವಾರ್ಡ್‌ನ ಅಭಿವೃದ್ಧಿ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಿಬಿಎಂಪಿ ಸಹಾಯಕ ಎಂಜಿನಿಯರ್ ಸತ್ಯ ಎನ್‌ಕೆ ಮಾತನಾಡಿ, “ಬಿಡಬ್ಲ್ಯುಎಸ್‌ಎಸ್‌ಬಿ ದೊಡ್ಡ ಒಳಚರಂಡಿ ಪೈಪ್‌ಗಳನ್ನು ಹಾಕಬೇಕು. ಸಣ್ಣ ಪೈಪ್‌ಗಳಿಂದಾಗಿ ಸಮಸ್ಯೆ ಹೆಚ್ಚಾಗಿದೆ ಎಂದಿದ್ದಾರೆ.
ಪೊಲೀಸರು ಮತ್ತು ಬಿಬಿಎಂಪಿಯಿಂದ ಸಮಸ್ಯೆ ಎದುರಿಸುತ್ತಿದ್ದೆವು. ಇದೀಗ ಪೊಲೀಸರು ಹಾಗೂ ಬಿಬಿಎಂಪಿ ಎರಡರಿಂದಲೂ ಅನುಮತಿ ಪಡೆದಿದ್ದೇವೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯಿಂದ ಎಸ್‌ಜೆಪಿ ರಸ್ತೆಯಲ್ಲಿರುವ ಕಲ್ಕತ್ತಾ ಟ್ರೇಡರ್ಸ್‌ವರೆಗಿನ ರಸ್ತೆಯುದ್ದಕ್ಕೂ 300 ಮೀಟರ್'ಗಳ ಪೈಪ್‌ಗಳನ್ನು ಹಾಕಲಾಗುತ್ತಿದೆ. ಮೂರು ವಾರಗಳ ಕಾಲ ಕಾಮಗಾರಿ ನಡೆಯಲಿದ್ದು, ಚರಂಡಿ ನೀರು ಮತ್ತು ತ್ಯಾಜ್ಯ ನೀರು ಹರಿಯುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಬಿಡಬ್ಲ್ಯುಎಸ್‌ಎಸ್‌ಬಿ ದಕ್ಷಿಣ ವಿಭಾಗದ ಮುಖ್ಯ ಎಂಜಿನಿಯರ್ ಎಸ್‌ವಿ ವೆಂಕಟೇಶ್ ತಿಳಿಸಿದ್ದಾರೆ.