ಚಿಕ್ಕಬಳ್ಳಾಪುರ: ಜಗಳದ ನಡುವೆ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ; ಅನಾಥವಾದ 4 ವರ್ಷದ ಮಗು!
ದಂಪತಿಯ ಜಗಳ ವಿಕೋಪಕ್ಕೆ ತಿರುಗಿ ಗಂಡ ತನ್ನ ಪತ್ನಿಯನ್ನೇ ಲಾರಿ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.
Published: 03rd December 2022 08:48 PM | Last Updated: 03rd December 2022 08:48 PM | A+A A-

ಪ್ರತ್ಯಕ್ಷ ದೃಶ್ಯ
ಚಿಕ್ಕಬಳ್ಳಾಪುರ: ದಂಪತಿಯ ಜಗಳ ವಿಕೋಪಕ್ಕೆ ತಿರುಗಿ ಗಂಡ ತನ್ನ ಪತ್ನಿಯನ್ನೇ ಲಾರಿ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ 40 ವರ್ಷದ ಸುಮೈರಾ ಸುಲ್ತಾನ್ ಹಾಗೂ ಮುನಿಕೃಷ್ಣ ಇಬ್ಬರು ತಮ್ಮ ತಮ್ಮ ಸಂಸಾರವನ್ನು ಬಿಟ್ಟು ಬೇರೆಯಾಗಿ ಮದುವೆಯಾಗಿ ಬಾಳು ನಡೆಸುತ್ತಿದ್ದರು. ದಂಪತಿಗೆ 4 ವರ್ಷದ ಬಾಬಾಜಾನ್ ಎನ್ನುವ ಮಗುವಿದೆ.
ಇಂದು ನಗರದ ಗ್ರಂಥಾಲಯ ಮುಂದೆ ನಡು ರಸ್ತೆಯಲ್ಲಿ ದಂಪತಿ ಜಗಳ ಮಾಡಿಕೊಂಡಿದ್ದರು. ಇನ್ನು ರಸ್ತೆಯಲ್ಲಿ ಲಾರಿಯೊಂದು ಬರುತ್ತಿರುವುದನ್ನು ನೋಡಿದ ಮುನಿಕೃಷ್ಣ ಸುಮೈರಾ ಸುಲ್ತಾನ್‌ಳನ್ನು ಲಾರಿ ಕೆಳಗೆ ತಳ್ಳಿದ್ದಾನೆ. ಇದರಿಂದ ಸುಮೈರಾ ಸುಲ್ತಾನ್ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾಳೆ.
ಇದನ್ನೂ ಓದಿ: ರಾಯಚೂರು: ಸ್ನೇಹಿತ, ಆತನ ಸಹಚರನಿಂದ ಅಪ್ರಾಪ್ತೆಗೆ ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ಕಿರುಕುಳ!
ಸುದ್ದಿ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು ಆರೋಪಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ. ಮುನಿಕೃಷ್ಣ ಮತ್ತು ಸುಮೈರಾ 8 ವರ್ಷಗಳ ಹಿಂದೆ ತಮ್ಮ ತಮ್ಮ ಸಂಸಾರ ಬಿಟ್ಟು ಚಿಂತಾಮಣಿ ನಗರದದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿದ್ದಾರೆ.