ಸುರಕ್ಷತೆ ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಿ: ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳಿಗೆ ನಗರ ಪೊಲೀಸ್ ಆಯುಕ್ತ ಎಚ್ಚರಿಕೆ

ಮೊಬೈಲ್ ಆ್ಯಪ್‌ ಆಧಾರಿತ ಸಾರಿಗೆ, ಸರಕು ಸಾಗಣೆ ಹಾಗೂ ಆಹಾರ ಪೂರೈಕೆ ಮಾಡುವ ಕಂಪನಿಗಳು ಗ್ರಾಹಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಶನಿವಾರ ಎಚ್ಚರಿಗೆ ನೀಡಿದ್ದಾರೆ.
ಸುರಕ್ಷತೆ ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಿ: ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳಿಗೆ ನಗರ ಪೊಲೀಸ್ ಆಯುಕ್ತ ಎಚ್ಚರಿಕೆ

ಬೆಂಗಳೂರು: ‘ಮೊಬೈಲ್ ಆ್ಯಪ್‌ ಆಧಾರಿತ ಸಾರಿಗೆ, ಸರಕು ಸಾಗಣೆ ಹಾಗೂ ಆಹಾರ ಪೂರೈಕೆ ಮಾಡುವ ಕಂಪನಿಗಳು ಗ್ರಾಹಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಶನಿವಾರ ಎಚ್ಚರಿಗೆ ನೀಡಿದ್ದಾರೆ.

ನಿನ್ನೆಯಷ್ಟೇ ಆಯುಕ್ತರು ಶನಿವಾರ ಇನ್‌ಫೆಂಟ್ರಿ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಓಲಾ, ಉಬರ್, ರಾಪಿಡೊ ಮತ್ತು ಇತರ ಟ್ಯಾಕ್ಸಿ ಮತ್ತು ರೆಸ್ಟೋರೆಂಟ್ ಅಗ್ರಿಗೇಟರ್‌ಗಳು ಮತ್ತು ಇತರ ಇ-ಕಾಮರ್ಸ್ ಕಂಪನಿಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳೊಂದಿಗೆ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಲು ಸಮನ್ವಯ ಸಭೆ ನಡೆಸಿದರು. ಸಭೆಯಲ್ಲಿ ವಿವಿಧ ಕಂಪನಿಗಳ ಸುಮಾರು 40 ಪ್ರತಿನಿಧಿಗಳು ಭಾಗವಹಿಸಿದ್ದರು.

ಚಾಲಕರು, ಡೆಲಿವರಿ ಏಜೆಂಟ್‌ಗಳು ಮತ್ತು ಇತರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಮೊದಲು ಅವರ ಪೂರ್ವಾಪರವನ್ನು ಪರಿಶೀಲಿಸುವಂತೆ ರೆಡ್ಡಿ ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳಿಗೆ ಸಲಹೆ ನೀಡಿದರು ಮತ್ತು ಸುರಕ್ಷತಾ ಕ್ರಮಗಳಲ್ಲಿ ಯಾವುದೇ ಲೋಪ ಕಂಡುಬಂದರೆ ಮತ್ತು ಗ್ರಾಹಕರು ಸಮಸ್ಯೆಗಳನ್ನು ಎದುರಿಸಿದರೆ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಕಂಪನಿಗಳು ಏಜೆನ್ಸಿಗಳಲ್ಲಿ ಕೆಲಸ ಮಾಡುವ ನೌಕರರ ಕ್ರಿಮಿನಲ್ ಹಿನ್ನೆಲೆಯನ್ನು ಅವರ ಗುರುತಿನ ಬಗ್ಗೆ ಕನಿಷ್ಠ ಎರಡು ದಾಖಲಾತಿಗಳನ್ನು ಹಾಗೂ ಅವರು ಉಪಯೋಗಿಸುವ ವಾಹನಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ ನಂತರವೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದರು.

ಮನೆಗಳಿಗೆ ಗೃಹೋಪಯೋಗಿ ವಸ್ತುಗಳು ಆಹಾರ ಊಟ ಸರಬರಾಜು ಮಾಡುವ ಕಂಪನಿಗಳ ಡಿಲಿವರಿ ಬಾಯ್ ಗಳಿಂದ ಲೈಂಗಿಕ ಕಿರುಕುಳ ಡ್ರಗ್ಸ್ ಸೇರಿ ನಿಷೇಧಿತ ವಸ್ತುಗಳ ಸಾಗಾಣೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳು ನಡೆಯುವುದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತ (ಸಂಚಾರ) ಎಂಎ ಸಲೀಂ ಮತ್ತು ಇತರ ಹಿರಿಯ ಐಪಿಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಸುರಕ್ಷತಾ ಮಂತ್ರ...

  • ಟ್ಯಾಕ್ಸಿ ಬುಕ್ ಮಾಡಿರುವ ಗ್ರಾಹಕರು, ಪ್ರಯಾಣ ಪ್ರಾರಂಭಿಸಿದ ಬಳಿಕ ನಿಗದಿತ ಸ್ಥಳಕ್ಕೆ ನಿರ್ದಿಷ್ಟ ಸಮಯಕ್ಕೆ ತಲುಪಿದ್ದಾರೆಯೇ / ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು.
  • ಗ್ರಾಹಕರು ಬುಕ್ ಮಾಡಿದ ಸ್ವತ್ತುಗಳು ನಿಗದಿತ ಸಮಯಕ್ಕೆ ಅವರ ಸ್ಥಳಕ್ಕೆ ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತಾಂತ್ರಿಕ ಸೌಲಭ್ಯಗಳ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ.
  • ಸಂಸ್ಥೆಯ ಸಾಪ್ಟ್‌ವೇರ್ ಅಪ್ಲಿಕೇಷನ್ ಗಳಲ್ಲಿ ಹಾಗೂ ವಾಹನಗಳಲ್ಲಿ ಸೆಫ್ಟಿ ಸ್ಟಿಕರ್ 112 ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು.
  • ಸಂಸ್ಥೆಯ ಸಮವಸ್ತ್ರಗಳು ದುರುಪಯೋಗವಾಗದಂತೆ, ನೌಕರರು ಕೆಲಸ ಬಿಟ್ಟಾಗ ಅವರಿಗೆ ನೀಡಲಾಗಿದ್ದ ಸಂಸ್ಥೆಯ ಗುರುತಿನ ಪತ್ರ ಇನ್ನಿತರ ವಸ್ತುಗಳನ್ನು ವಾಪಸ್ಸು ಪಡೆಯುವುದು ಕಡ್ಡಾಯ.
  • ಡಂಝೋ, ಪೋರ್ಟರ್, ಫ್ಲಿಪ್ ಕಾರ್ಟ್ ಮುಂತಾದ ಡೆಲಿವರಿ ಪ್ಲಾಟ್‌ಫಾರಂ ಗಳಲ್ಲಿ ನಿಷೇದಿತ ವಸ್ತುಗಳನ್ನು ಸರಬರಾಜು ಮಾಡದಂತೆ ಎಚ್ಚರವಹಿಸುವುದು.
  • ಗ್ರಾಹಕರು ಬುಕ್ ಮಾಡಿರುವ ವಸ್ತುಗಳನ್ನು ಬುಕಿಂಗ್ ಮಾಡಿರುವ ಸ್ಥಳಗಳಲ್ಲಿ ಮಾತ್ರವೇ ಡೆಲಿವರಿ ಮಾಡತಕ್ಕದ್ದು. ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ವಸ್ತುಗಳನ್ನು ನೀಡದಂತೆ ತಿಳುವಳಿಕೆ ನೀಡುವುದು.
  • ಡೆಲಿವರಿ ವಾಹನಗಳ ಸವಾರರು ಬಹುತೇಕ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅವರ ಸುರಕ್ಷತೆ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಠಿಯಿಂದ ಸಂಚಾರ ನಿಯಮಗಳ ಪಾಲನೆ ಮಾಡುವಂತೆ ತಮ್ಮ ತಮ್ಮ ಸಂಸ್ಥೆಯ ನೌಕರರಿಗೆ ಜಾಗೃತಿ ಉಂಟು ಮಾಡಲು ಅಗತ್ಯವಿದ್ದಲ್ಲಿ ಉಚ್ಚಿತವಾಗಿ ಸಂಚಾರ ಪೊಲೀಸ್ ವತಿಯಿಂದ ತರಬೇತಿ ಕಾರ್ಯಾಗಾರಗಳನ್ನು ನಡೆಸಲು ಸೂಚನೆ ನೀಡಿದರು.
  • ಪ್ರತಿಯೊಂದು ಸಂಸ್ಥೆಗಳಿಂದ ತುರ್ತು ಮಾಹಿತಿ ವಿನಿಮಯಕ್ಕಾಗಿ 24*7 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವುದು.
  • ತುರ್ತು ಸಂದರ್ಭಗಳಲ್ಲಿ ಗ್ರಾಹಕರು ತಮ್ಮ ಸಮಸ್ಯೆಗಳ ಬಗ್ಗೆ ನೋಡಲ್ ಅಧಿಕಾರಿಯವರಿಗೆ ಕರೆ ಮಾಡಿ ತಿಳಿಸಿದಾಗ, ಅಂತಹ ದೂರುಗಳನ್ನು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ, ಅಗತ್ಯ ಕ್ರಮ ಕೈಗೊಳ್ಳಲು ಸಹಕರಿಸುವುದು.
  • ಸಾರ್ವಜನಿಕರ / ಗ್ರಾಹಕರ ಸಂಪರ್ಕಕ್ಕೆ ಬರುವ ನೌಕಕರಿಗೆ ನಿರಂತರವಾಗಿ ಸಂವೇದನ ಶೀಲತೆ ಬಗ್ಗೆ ತರಭೇತಿ ಕಾರ್ಯಾಗಾರಗಳನ್ನು ನಡೆಸುವುದು. ಡೆಲಿವರಿ ನೀಡಲು ಹೋಗುವ ನೌಕರರು ಕೆಲವೊಂದು ಸಂದರ್ಭಗಳಲ್ಲಿ ಸುಲಿಗೆ, ಹಲ್ಲೆಗೆ ಒಳಗಾಗಿರುವ ಪ್ರಕರಣಗಳು ವರದಿಯಾಗಿದ್ದು, ಅಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾದ ಕಾನೂನು ಕ್ರಮಗಳನ್ನು ಜರುಗಿಸಿ, ಸಂಸ್ಥೆಯ ನೌಕರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com