ಡಿಸೆಂಬರ್ 9 ರಿಂದ ಮಂಗಳೂರು-ಮುಂಬೈ ನಡುವೆ ಸಂಚರಿಸಲಿವೆ ವಿಶೇಷ ರೈಲುಗಳು

ಕೇಂದ್ರ ರೈಲ್ವೆಯ ಸಮನ್ವಯದೊಂದಿಗೆ ಕೊಂಕಣ ರೈಲ್ವೆಯು ಮುಂಬೈ ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲಿದ್ದು, ಚಳಿಗಾಲದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಭಾನುವಾರ ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಂಗಳೂರು: ಕೇಂದ್ರ ರೈಲ್ವೆಯ ಸಮನ್ವಯದೊಂದಿಗೆ ಕೊಂಕಣ ರೈಲ್ವೆಯು ಮುಂಬೈ ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲಿದ್ದು, ಚಳಿಗಾಲದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಭಾನುವಾರ ಅಧಿಕೃತ ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 01453 ಲೋಕಮಾನ್ಯ ತಿಲಕ್ (ಟಿ)-ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ಡಿಸೆಂಬರ್ 9 ರಿಂದ ಜನವರಿ 6 ರವರೆಗೆ ಪ್ರತಿ ಶುಕ್ರವಾರ ಲೋಕಮಾನ್ಯ ತಿಲಕ್‌ ನಿಲ್ದಾಣದಿಂದ ರಾತ್ರಿ 10.15 ಕ್ಕೆ ಹೊರಡಲಿದೆ. ರೈಲು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ.

ರೈಲು ಸಂಖ್ಯೆ 01454 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಸಾಪ್ತಾಹಿಕ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಡಿಸೆಂಬರ್ 10 ರಿಂದ ಜನವರಿ 7 ರವರೆಗೆ ಪ್ರತಿ ಶನಿವಾರ ಸಂಜೆ 6.45ಕ್ಕೆ ಹೊರಡಲಿದೆ. ರೈಲು ಮರುದಿನ ಮಧ್ಯಾಹ್ನ 2.25 ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣವನ್ನು ತಲುಪಲಿದೆ.

ಈ ರೈಲುಗಳು ಒನ್ ಟು ಟಯರ್ ಎಸಿ ಕೋಚ್, ಮೂರು 3 ಟಯರ್ ಎಸಿ ಮತ್ತು 8 ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com