ಹೆಚ್ಚಿನ ಶ್ರಮವಹಿಸಿ ಗಾಯಗೊಂಡಿದ್ದ ನಾಗರ ಹಾವನ್ನು ರಕ್ಷಿಸಿದ ಕೊಡಗಿನ ಸ್ಥಳೀಯ ಉರಗ ರಕ್ಷಕ

ಕೊಡಗಿನ ಕುಶಾಲನಗರ ತಾಲೂಕಿನ ಹಾರಂಗಿ ವ್ಯಾಪ್ತಿಯ ಮೀನುಗಾರಿಕಾ ರಸ್ತೆಯಲ್ಲಿ ಸಿಲುಕಿ ಗಾಯಗೊಂಡಿದ್ದ ನಾಗರ ಹಾವನ್ನು ಪರಿಣಿತ ಸಂರಕ್ಷಣಾಧಿಕಾರಿ ಹಾಗೂ ಉರಗ ರಕ್ಷಕರ ಪ್ರಯತ್ನದಿಂದ ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ.
ಉರಗ ರಕ್ಷಕ ಅಬ್ದುಲ್ ಗಫಾರ್
ಉರಗ ರಕ್ಷಕ ಅಬ್ದುಲ್ ಗಫಾರ್

ಮಡಿಕೇರಿ: ಕೊಡಗಿನ ಕುಶಾಲನಗರ ತಾಲೂಕಿನ ಹಾರಂಗಿ ವ್ಯಾಪ್ತಿಯ ಮೀನುಗಾರಿಕಾ ರಸ್ತೆಯಲ್ಲಿ ಸಿಲುಕಿ ಗಾಯಗೊಂಡಿದ್ದ ನಾಗರ ಹಾವನ್ನು ಪರಿಣಿತ ಸಂರಕ್ಷಣಾಧಿಕಾರಿ ಹಾಗೂ ಉರಗ ರಕ್ಷಕರ ಪ್ರಯತ್ನದಿಂದ ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ.

ಸುಮಾರು ಒಂದು ತಿಂಗಳ ಹಿಂದೆ ಹಾರಂಗಿ ನಿವಾಸಿ ಮೆಹಬೂಬ್ ಹಾರಂಗಿ ಹಿನ್ನೀರಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅವರು ಮೀನು ಹಿಡಿಯುವ ರಾಡ್‌ಗೆ ಕಪ್ಪೆಯನ್ನು ಕಟ್ಟಿದ್ದರು. ಆದರೆ ಆ ದಿನದಂದು ಏನು ಸಿಗದೆ ಮನೆಗೆ ಮರಳಿದರು. ಕಪ್ಪೆಯನ್ನು ಕಟ್ಟಿದ್ದ ರಾಡ್ ಅನ್ನು ತಮ್ಮ ಮನೆಯ ಹೊರಗೆ ಇಟ್ಟಿದ್ದರು. ದುರದೃಷ್ಟವಶಾತ್, ಮನೆಯ ಪಕ್ಕದಲ್ಲಿ ಸುತ್ತಾಡುತ್ತಿದ್ದ ನಾಗರಹಾವು ಕಪ್ಪೆಯನ್ನು ತಿನ್ನುವ ಆತುರದಲ್ಲಿ ರಾಡ್ ಗೆ ಸಿಲುಕಿಕೊಂಡು ನೇತಾಡುತ್ತಿತ್ತು. ಗಾಯಗೊಂಡು ನೋವಿನಿಂದ ಒದ್ದಾಡುತ್ತಿದ್ದ ಹಾವನ್ನು ಕಂಡ ಮೆಹಬೂಬ್ ತಕ್ಷಣ ಸ್ಥಳೀಯ ಹಾವು ರಕ್ಷಕ ಎಂಎ ಅಬ್ದುಲ್ ಗಫಾರ್ ಅವರಿಗೆ ಕರೆ ಮಾಡಿದರು.

ಘಟನಾ ಸ್ಥಳಕ್ಕೆ ಬಂದ ಅಬ್ದುಲ್ ಗಫಾರ್ ರಾಡ್ ಗೆ ಸಿಲುಕಿದ್ದ ಹಾವನ್ನು ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿದರು ಆದರೆ ಕೊಕ್ಕೆ ನಾಗರಹಾವಿನೊಳಗೆ ಆಳವಾಗಿ ಸಿಲುಕಿಕೊಂಡಿತ್ತು. ಹೀಗಾಗಿ ನಾನು ವಿಧಾನಗಳನ್ನು ಬಳಸಿದರೂ ಎಲ್ಲವೂ ವಿಫಲವಾಗಿತ್ತು. ಕೊನೆಗೆ ಜಿಲ್ಲೆಯ ಹಲವಾರು ಪಶುವೈದ್ಯರನ್ನು ಸಂಪರ್ಕಿಸಿದರು. ಆದರೆ ಅವರು ಕ್ಷೇತ್ರದಲ್ಲಿನ ಸೌಲಭ್ಯಗಳು ಮತ್ತು ಪರಿಣಿತಿಯ ಕೊರತೆಯಿಂದಾಗಿ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ಅಬ್ದುಲ್ ವಿವರಿಸಿದರು. ನಂತರ ಅವರು ಸ್ನೇಕ್ ಶ್ಯಾಮ್ ಅವರ ಮಗ ಸೂರ್ಯ ಕೀರ್ತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕಿಸಿ ಅವರ ಸಂಖ್ಯೆಯನ್ನು ಸಂಗ್ರಹಿಸಿದರು.

ನಂತರ ಅಬ್ದುಲ್ ನಾಗರಹಾವನ್ನು ರಂದ್ರವಿದ್ದ ಪ್ಲಾಸ್ಟಿಕ್ ಕಂಟೈನರ್‌ಗೆ ಸ್ಥಳಾಂತರಿಸಿದರು. ನಂತರ ಅವರು ಐರಾವತ ಬಸ್‌ನಲ್ಲಿ ನಾಗರಹಾವನ್ನು ಮೈಸೂರಿಗೆ ಕೊಂಡೊಯ್ಯದರು. ಅಲ್ಲಿ ಸಂರಕ್ಷಣಾಧಿಕಾರಿ ಸೂರ್ಯ ಕೀರ್ತಿ ಅವರು ಡಾ.ಅಭಿಲಾಷ್ ಅವರನ್ನು ಸಂಪರ್ಕಿಸಿ ಹಾವಿನ ಒಳಗಿದ್ದ ಮೀನುಗಾರಿಕೆ ಕೊಕ್ಕೆಯನ್ನು ವೈಜ್ಞಾನಿಕವಾಗಿ ಹೊರತೆಗೆದರು.

ನಂತರ ಸೂರ್ಯ ಕೀರ್ತಿ ನಾಗರ ಹಾವಿನೊಂದಿಗೆ ಮಡಿಕೇರಿಗೆ ಆಗಮಿಸಿದ್ದು ಇದೀಗ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅದಕ್ಕೆ ಪುನರ್ವಸತಿ ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com