ರಾಹುಲ್ ಗಾಂಧಿಗೆ ಆರ್ಎಸ್ಎಸ್ ಕುರಿತು ಸಂಪೂರ್ಣ ಮಾಹಿತಿ ಇಲ್ಲ: ಸಿಎಂ ಬೊಮ್ಮಾಯಿ
ರಾಹುಲ್ ಗಾಂಧಿಯವರಿಗೆ ಆರ್ಎಸ್ಎಸ್ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಇಲ್ಲಿ ಕೂಡ ಮಹಿಳೆಯರ ದುರ್ಗಾ ಸೇನೆ ಇದೆ. ನಾವು ಭಾರತ್ ಮಾತಾಕಿ ಜೈ ಅಂತೀವಿ. ಭಾರತ ಮಾತೆಯೇ ನಮ್ಮ ತಾಯಿ, ತಾಯಿ ಅಂದ್ರೆ ಕೂಡ ಹೆಣ್ಣೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
Published: 05th December 2022 08:43 AM | Last Updated: 05th December 2022 02:48 PM | A+A A-

ಸಿಎಂ ಬೊಮ್ಮಾಯಿ
ಹಾವೇರಿ: ರಾಹುಲ್ ಗಾಂಧಿಯವರಿಗೆ ಆರ್ಎಸ್ಎಸ್ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಇಲ್ಲಿ ಕೂಡ ಮಹಿಳೆಯರ ದುರ್ಗಾ ಸೇನೆ ಇದೆ. ನಾವು ಭಾರತ್ ಮಾತಾಕಿ ಜೈ ಅಂತೀವಿ. ಭಾರತ ಮಾತೆಯೇ ನಮ್ಮ ತಾಯಿ, ತಾಯಿ ಅಂದ್ರೆ ಕೂಡ ಹೆಣ್ಣೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಹಿಳಾ ಕಾರ್ಯಕರ್ತರಿಲ್ಲ, ಕೇವಲ ಜೈ ಶ್ರೀ ರಾಮ್ ಎನ್ನುತ್ತಾರೆ. ಅವರಿಗೆ ಸೀತಾರಾಮ ಬೇಕಾಗಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಆರ್ ಎಸ್ ಎಸ್ ಬಗ್ಗೆ ರಾಹುಲ್ ಗಾಂಧಿಗೆ ಸಂಪೂರ್ಣ ಮಾಹಿತಿ ಇಲ್ಲ, ಆರ್ ಎಸ್ ಎಸ್ ನಲ್ಲಿ ಮಹಿಳಾ ವಿಭಾಗ, ದುರ್ಗಾ ಸೇನೆ ಇದೆ. ನಾವು ಯಾವುದೇ ಕಾರ್ಯಕ್ರಮವನ್ನು ಭಾರತ್ ಮಾತಾ ಕಿ ಜೈ ಘೋಷಣೆಗಳೊಂದಿಗೆ ಪ್ರಾರಂಭಿಸುತ್ತೇವೆ. ಭಾರತ ಮಾತೆಯೇ ನಮ್ಮ ತಾಯಿ. ತಾಯಿ ಎಂದರೂ ಕೂಡ ಅವರೂ ಹೆಣ್ಣೇ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೆಚ್ಚುಗೆಯಿಂದ ವೈಯಕ್ತಿಕ ದಾಳಿಗೆ: ಮಾಧ್ಯಮಗಳು ತಮ್ಮ ವಿಷಯದಲ್ಲಿ ಬದಲಾಗಿದ್ದು ಹೇಗೆ?: ರಾಹುಲ್ ಗಾಂಧಿಗೆ ಹೇಳೋಕೆ ಇರೋದು ಇದು...
ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ. ಇಂದು ನನ್ನ ಕ್ಷೇತ್ರದವರು ಮಾತ್ರವಲ್ಲದೇ ಬೆಳಗಾವಿ, ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಜನರಿಂದ ಅಹವಾಲು ಸ್ವೀಕರಿಸಿದ್ದೇನೆ. ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.
ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿ ಮಣಿವಣ್ಣನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಇಒ ಉಪಸ್ಥಿತರಿದ್ದರು.