ಮಾಜಿ ಟ್ರಸ್ಟಿ ವಿರುದ್ಧ ಕ್ರಮಕ್ಕೆ ಆಗ್ರಹ; ಎಂಸಿ ಮೋದಿ ಕಣ್ಣಿನ ಆಸ್ಪತ್ರೆ ಸಿಬ್ಬಂದಿಗಳಿಂದ ಮುಷ್ಕರ!

ರಾಜಾಜಿನಗರದ ಎಂಸಿ ಮೋದಿ ಕಣ್ಣಿನ ಆಸ್ಪತ್ರೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ರೋಗಿಗಳು ಪರದಾಡುವಂತಾಗಿದೆ. 
ಎಂಸಿ ಮೋದಿ ಕಣ್ಣಿನ ಆಸ್ಪತ್ರೆ (ಸಂಗ್ರಹ ಚಿತ್ರ)
ಎಂಸಿ ಮೋದಿ ಕಣ್ಣಿನ ಆಸ್ಪತ್ರೆ (ಸಂಗ್ರಹ ಚಿತ್ರ)

ಬೆಂಗಳೂರು: ರಾಜಾಜಿನಗರದ ಎಂಸಿ ಮೋದಿ ಕಣ್ಣಿನ ಆಸ್ಪತ್ರೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ರೋಗಿಗಳು ಪರದಾಡುವಂತಾಗಿದೆ. 

ಶನಿವಾರ ಆಸ್ಪತ್ರೆಗೆ ನುಗ್ಗಿ ದಾಖಲಾತಿ ಹಾಗೂ ಹಣವನ್ನು ತೆಗೆದುಕೊಂಡು ಹೋಗಿ ಗೇಟ್‌ಗಳಿಗೆ ಬೀಗ ಹಾಕಿ ಕೆಲಸ ಮಾಡದಂತೆ ಮಾಡಿದ ಮಾಜಿ ಟ್ರಸ್ಟಿ ಸುಭಾಷ್ ಮೋದಿ, ಅವರ ಪುತ್ರ ಮಲ್ಲಿಕಾರ್ಜುನ್ ಮತ್ತು ಸೊಸೆ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ. ಸುಭಾಷ್ ಮೋದಿ ಆಸ್ಪತ್ರೆ ಸಂಸ್ಥಾಪಕ ಎಂಸಿ ಮೋದಿ ಅವರ ಸಂಬಂಧಿ ಎನ್ನಲಾಗಿದೆ.

ಸಿಬ್ಬಂದಿಗಳು ನಡೆಸುತ್ತಿರುವ ಈ ಪ್ರತಿಭಟನೆಯಲ್ಲಿ 74 ಸಿಬ್ಬಂದಿ ಇದ್ದಾರೆ. 2014 ರಲ್ಲಿ ಸಂಸ್ಥಾಪಕರ ಪುತ್ರ ಅಮರನಾಥ್ ಮೋದಿ ಅವರ ನಿಧನದ ನಂತರ ಟ್ರಸ್ಟ್ ನಡೆಸುತ್ತಿದ್ದ ಕೆಲವು ನೌಕರರು, ಅವರ ಸೋದರಸಂಬಂಧಿ ಸುಭಾಷ್ ಮೋದಿ ಅವರನ್ನು ಟ್ರಸ್ಟ್‌ನಿಂದ ತೆಗೆದುಹಾಕಲಾಗಿದೆ ಮತ್ತು ಯಾವುದೇ ಪಾತ್ರವಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಆಸ್ಪತ್ರೆ ವ್ಯವಹಾರವಲ್ಲ ಬದಲಿಗೆ ಆಸ್ತಿಯಲ್ಲಿ ಆಸಕ್ತಿ ಹೊಂದಿದ್ದಾರೆಂದು ಎಂದು ಆರೋಪಿಸಿದ್ದಾರೆ. 

ಆಸ್ಪತ್ರೆ ಪ್ರವೇಶಿಸದಂತೆ ನ್ಯಾಯಾಲಯದ ಆದೇಶದ ಹೊರತಾಗಿಯೂ ಅವರು ಅಕ್ರಮವಾಗಿ ಆಸ್ಪತ್ರೆ ಪ್ರವೇಶಿಸಿದ್ದಾರೆ ಎಂದು ಹಿರಿಯ ಸಿಬ್ಬಂದಿಗಳು ಹೇಳಿದ್ದಾರೆ. ಸುಭಾಷ್ ಮೋದಿ ಅವರು ಆಸ್ಪತ್ರೆಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂಬ ದೂರುಗಳ ನಂತರ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2017 ರಲ್ಲಿ ಆಡಳಿತದ ನಿಯಂತ್ರಣವನ್ನು ತಹಶೀಲ್ದಾರ್‌ಗೆ ವಹಿಸುವಂತೆ ಆದೇಶಿಸಿತ್ತು. ಆದರೆ ಡಿಸೆಂಬರ್ 2 ರಂದು, ಸುಭಾಷ್ ಮೋದಿ ಅವರು ತಮ್ಮ ಮಗ ಮಲ್ಲಿಕಾರ್ಜುನ್, ಸೊಸೆ ಪ್ರಿಯದರ್ಶಿನಿ ಅವರೊಂದಿಗೆ ಸಂಜೆ 6.30 ಕ್ಕೆ ಆಸ್ಪತ್ರೆಗೆ ನುಗ್ಗಿ ಹಣ ಮತ್ತು ದಾಖಲೆಗಳನ್ನು ತೆಗೆದುಕೊಂಡು ಹೋದರು ಮತ್ತು ಕೆಲವು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು, ಆದ್ದರಿಂದ ನಾನು ಪೊಲೀಸ್ ದೂರು ನೀಡಿದ್ದೇನೆ" ಎಂದು ಲೀಲಾದೇವಿ ಪ್ರಸಾದ್ ಹೇಳಿದ್ದಾರೆ.

"ತನ್ನ ವಿರುದ್ಧ ಇದ್ದ ನಾಲ್ವರು ಸಿಬ್ಬಂದಿ ವಿರುದ್ಧ ಆದೇಶವನ್ನು ಪಡೆದಿದ್ದೇನೆ ಎಂದು ಹೇಳಿಕೊಂಡು ಅವರು ಒಳಗೆ ಪ್ರವೇಶಿಸಿದರು ಮತ್ತು ಆಸ್ಪತ್ರೆಯಿಂದ ಹೊರಗೆ ಹೋಗುವಂತೆ ಹೇಳಿ ಆವರಣಕ್ಕೆ ಬೀಗ ಹಾಕಿದರು. ಸಿಬ್ಬಂದಿ ಈತನ ವರ್ತನೆಯನ್ನು ಸಹಿಸಲಾಗದೆ, ದಾಖಲೆ, ಹಣ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಮಹಾಲಕ್ಷ್ಮಿಪುರಂ ಪೊಲೀಸರು ತಿಳಿಸಿದ್ದಾರೆ.

ಮುಂದಿನ ವಾರ ಬಿಎಸ್‌ಸಿ ನರ್ಸಿಂಗ್‌ ಪರೀಕ್ಷೆಗಳು ನಡೆಯಲಿದ್ದು, ಗೇಟ್‌ಗೆ ಬೀಗ ಹಾಕಿರುವುದರಿಂದ ಹಾಲ್‌ ಟಿಕೆಟ್‌ಗಳು ಆಸ್ಪತ್ರೆಯೊಳಗೆ ಸಿಕ್ಕಿಹಾಕಿಕೊಂಡಿರುವುದರಿಂದ ಆತಂಕಗೊಂಡಿರುವುದಾಗಿ ನರ್ಸಿಂಗ್ ವಿದ್ಯಾರ್ಥಿನಿ ಆಶಾ ತಿಳಿಸಿದ್ದಾರೆ. ಪೊಲೀಸರು ಬೀಗ ಒಡೆದು ತೆರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com