ತಂತ್ರಜ್ಞಾನದಲ್ಲಿನ ಪ್ರಗತಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ: ಡಾ. ವಿ.ಕೆ.ಆತ್ರೆ

ತಂತ್ರಜ್ಞಾನದಲ್ಲಿನ ಅಭಿವೃದ್ಧಿಯು ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರಣವಾಗಲಿದ್ದು, ಇದರಿಂದ ಭಾರತ ಇಂದು ಉತ್ಪನ್ನಗಳನ್ನು ರಫ್ತು ಮಾಡುವಷ್ಟು ಸ್ವಾವಲಂಬನೆ ಸಾಧಿಸಿದೆ ಎಂದು ವಿಜ್ಞಾನಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮುಖ್ಯಸ್ಥ ಡಾ ವಿ ಕೆ ಆತ್ರೆ ಅವರು ಗುರುವಾರ ಹೇಳಿದರು.
ಎಎಂ 3ಡಿ ಏರೋ-2022’ ವಿಚಾರ ಸಂಕಿರಣ ಮತ್ತು ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿರುವ ಡಿಆರ್‌ಡಿಒ ಮಾಜಿ ಮುಖ್ಯಸ್ಥ ಡಾ ವಿ ಕೆ ಆತ್ರೆ
ಎಎಂ 3ಡಿ ಏರೋ-2022’ ವಿಚಾರ ಸಂಕಿರಣ ಮತ್ತು ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿರುವ ಡಿಆರ್‌ಡಿಒ ಮಾಜಿ ಮುಖ್ಯಸ್ಥ ಡಾ ವಿ ಕೆ ಆತ್ರೆ

ಬೆಂಗಳೂರು: ತಂತ್ರಜ್ಞಾನದಲ್ಲಿನ ಅಭಿವೃದ್ಧಿಯು ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರಣವಾಗಲಿದ್ದು, ಇದರಿಂದ ಭಾರತ ಇಂದು ಉತ್ಪನ್ನಗಳನ್ನು ರಫ್ತು ಮಾಡುವಷ್ಟು ಸ್ವಾವಲಂಬನೆ ಸಾಧಿಸಿದೆ ಎಂದು ವಿಜ್ಞಾನಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮುಖ್ಯಸ್ಥ ಡಾ ವಿ ಕೆ ಆತ್ರೆ ಅವರು ಗುರುವಾರ ಹೇಳಿದರು.

ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ, ಅಮೆರಿಕನ್ ಸೊಸೈಟಿ ಆಫ್ ಮೆಕಾನಿಕಲ್ ಎಂಜಿನಿಯರ್ಸ್‌ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಎಎಸ್‍ಎಂಜಿ ಇಂಡಿಯಾ ಎಎಂ 3ಡಿ ಏರೋ-2022’ ವಿಚಾರ ಸಂಕಿರಣ ಮತ್ತು ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

“ತಾಂತ್ರಿಕತೆ ಬೆಳವಣಿಗೆಗಳ ಕಾರಣದಿಂದಾಗಿ ದೊಡ್ಡ ಅವಕಾಶಗಳು ಲಭ್ಯವಾಗುತ್ತಿವೆ. ತಂತ್ರಜ್ಞಾನ ಮುಂದುವರಿದಂತೆ ಉದ್ಯೋಗ ಸೃಷ್ಟಿಗೆ ಅವಕಾಶಗಳು ಹೆಚ್ಚುತ್ತಿವೆ ಎಂದು ಹೇಳಿದರು.

ತಂತ್ರಜ್ಞಾನ ಬೆಳೆದಂತೆ ಹೂಡಿಕೆ, ಉದ್ಯೋಗವಕಾಶಗಳು ಹೆಚ್ಚಾಗಿವೆ. ಇದರಿಂದ ಮೇಕ್ ಇನ್ ಇಂಡಿಯಾ ಸಾಧ್ಯವಾಗಿದೆ. ಬಹುತೇಕ ಉತ್ಪಾದನೆಗಳು ಭಾರತದಲ್ಲೇ ಸಿದ್ಧವಾಗುತ್ತಿವೆ. ಇದರಿಂದ ಸ್ವದೇಶಿ ನಿರ್ಮಿತ ಎಲ್‍ಸಿಎಚ್ ರೂಪಿಸಿದ್ದೇವೆ. ‘ಸಂಶೋಧನೆಗಳು ಕಾಗದಗಳಲ್ಲೇ ಉಳಿಯಬಾರದು. ಕಾರ್ಯರೂಪಕ್ಕೆ ಬಂದಾಗ ಹೊಸ ಆವಿಷ್ಕಾರ ಸಾಧ್ಯ. ವಿದ್ಯಾರ್ಥಿಗಳು ವೈಮಾನಿಕ ಕ್ಷೇತ್ರದ ಕಡೆಗೂ ಆಲೋಚಿಸಬೇಕು’ ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿಕೊಂಡು ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಗುಣಮಟ್ಟ, ಕ್ರೀಯಾಶೀಲತೆ ಕಾರ್ಯಕ್ಷಮತೆ ಸಾಧಿಸುವಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಯುವ ಜನರ ಪ್ರತಿಭೆ ಗುರುತಿಸಿ ನಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಪ್ರತಿಭಾ ಪಲಾಯನ ತಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com