ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಜನಪದೋತ್ಸವ ಉದ್ಘಾಟನೆ

ಮೈಸೂರಿನ ರಂಗಾಯಣದ ವನರಂಗದಲ್ಲಿ ಭಾರತೀಯತೆ-ಬಹುರೂಪಿ ರಾಷ್ಟ್ರೀಯ ರಂಗೋತ್ಸವ 2022ರ ಅಂಗವಾಗಿ ಆಯೋಜಿಸಿದ್ದ ಜನಪದೋತ್ಸವವನ್ನು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಅವರು ಉದ್ಘಾಟನೆ ಮಾಡಿದರು.
ಮೈಸೂರಿನಲ್ಲಿ ಗುರುವಾರ ನಡೆದ ಜನಪದೋತ್ಸವದಲ್ಲಿ ಯಕ್ಷಗಾನ ಕಲಾವಿದರ ಕಲಾ ಪ್ರದರ್ಶನ.
ಮೈಸೂರಿನಲ್ಲಿ ಗುರುವಾರ ನಡೆದ ಜನಪದೋತ್ಸವದಲ್ಲಿ ಯಕ್ಷಗಾನ ಕಲಾವಿದರ ಕಲಾ ಪ್ರದರ್ಶನ.

ಮೈಸೂರು: ಮೈಸೂರಿನ ರಂಗಾಯಣದ ವನರಂಗದಲ್ಲಿ ಭಾರತೀಯತೆ-ಬಹುರೂಪಿ ರಾಷ್ಟ್ರೀಯ ರಂಗೋತ್ಸವ 2022ರ ಅಂಗವಾಗಿ ಆಯೋಜಿಸಿದ್ದ ಜನಪದೋತ್ಸವವನ್ನು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಅವರು ಉದ್ಘಾಟನೆ ಮಾಡಿದರು.

ಬಹುರೂಪಿಯ ಮೊದಲ ದಿನ ಮಹಾದೇವ ಮತ್ತು ತಂಡದವರಿಂದ ಕಂಸಾಳೆ, ಕೆರೆಮನೆ ಶಿವಾನಂದ ಹೆಗಡೆ ಅವರಿಂದ ‘ಪಂಚವಟಿ’ ಯಕ್ಷಗಾನ ಹಾಗೂ ಇಡಗುಂಜಿ ಮೇಳವೂ ನಡೆಯಿತು.

ಇದಕ್ಕೂ ಮುನ್ನ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರಿಯಪ್ಪ ಅವರು, ಭಾರತೀಯತೆ ವಿಶಷಯದ ಮೇಲೆ ಗುರುವಾರದಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಆರಂಭವಾಗಿದ್ದು, ಡಿ.9ರಿಂದ ಭಾರತೀಯತೆ-ಬಹುರೂಪಿ ಚಲನಚಿತ್ರೋತ್ಸವ, ಕಲಾ ಶಿಬಿರ, ಜಾನಪದ ಶಿಬಿರ ರಾಷ್ಟ್ರೀಯ ವಿಚಾರ ಸಂಕಿರಣ, ಪುಸ್ತಕ ಮೇಳ, ಕಲಾಕೃತಿಗಳ ಪ್ರದರ್ಶನ, ಅನ್ನ ಸಂತರ್ಪಣೆ ಮತ್ತು ಕಲಕುಶಲ ಮಳಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ವರ್ಷ ಭೂಮಿಗೀತ, ಕಲಾಮಂದಿರ, ವನರಂಗ, ಬಿ.ವಿ.ಕರಣ ರಂಗಚಾವಡಿ, ಸಂಪತ್ ರಂಗಮಂದಿರದಲ್ಲಿ ಕನ್ನಡದ 12 ನಾಟಕಗಳು, ತುಳು ನಾಟಕ ಸೇರಿದಂತೆ ಏಳು ಭಾಷೆಯ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com