ಭಂಡಾರ್‌ಕರ್‌ ಓರಿಯಂಟಲ್ ಸಂಶೋಧನಾ ಸಂಸ್ಥೆಗೆ ಮೂರ್ತಿ ಟ್ರಸ್ಟ್ ನಿಂದ 7.5 ಕೋಟಿ ರೂ. ಅನುದಾನ ಘೋಷಣೆ

ಸಂಸ್ಕೃತ ಮತ್ತು ಪ್ರಾಕೃತ ಭಾಷೆಯಲ್ಲಿರುವ ಅಪರೂಪದ ಪುಸ್ತಕಗಳು, ಹಸ್ತಪ್ರತಿಗಳ ಸಂಶೋಧನೆಯನ್ನು ಸಂರಕ್ಷಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಂಡಾರ್‌ಕರ್‌ ಓರಿಯಂಟಲ್ ಸಂಶೋಧನಾ ಸಂಸ್ಥೆಗೆ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಕುಟುಂಬ ಸ್ಥಾಪಿಸಿರುವ ಮೂರ್ತಿ ಟ್ರಸ್ಟ್ ರೂ.7.5 ಕೋಟಿ ರೂ. ಅನುದಾನವನ್ನು ಘೋಷಿಸಿದೆ.
ಕಟ್ಟಡ ನಿರ್ಮಾಣಕ್ಕೆ ಸುಧಾ ಮೂರ್ತಿ ಅವರಿಂದ ಶಂಕುಸ್ಥಾಪನೆ ಚಿತ್ರ
ಕಟ್ಟಡ ನಿರ್ಮಾಣಕ್ಕೆ ಸುಧಾ ಮೂರ್ತಿ ಅವರಿಂದ ಶಂಕುಸ್ಥಾಪನೆ ಚಿತ್ರ

ಬೆಂಗಳೂರು: ಸಂಸ್ಕೃತ ಮತ್ತು ಪ್ರಾಕೃತ ಭಾಷೆಯಲ್ಲಿರುವ ಅಪರೂಪದ ಪುಸ್ತಕಗಳು, ಹಸ್ತಪ್ರತಿಗಳ ಸಂಶೋಧನೆಯನ್ನು ಸಂರಕ್ಷಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಂಡಾರ್‌ಕರ್‌ ಓರಿಯಂಟಲ್ ಸಂಶೋಧನಾ ಸಂಸ್ಥೆಗೆ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಕುಟುಂಬ ಸ್ಥಾಪಿಸಿರುವ ಮೂರ್ತಿ ಟ್ರಸ್ಟ್ ರೂ.7.5 ಕೋಟಿ ರೂ. ಅನುದಾನವನ್ನು ಘೋಷಿಸಿದೆ.

ಮೂರ್ತಿ ಸೆಂಟರ್ ಆಫ್ ಇಂಡಿಕ್ ಸ್ಟಡೀಸ್ ನಿರ್ಮಾಣಕ್ಕೂ ಈ ಅನುದಾನ ಒಳಗೊಂಡಿರುತ್ತದೆ. ಸುಧಾಮೂರ್ತಿ ಈ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದಾಗಿ ಮೂರ್ತಿ ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ. 

ಭಂಡಾರ್‌ಕರ್‌ ಓರಿಯಂಟಲ್ ಸಂಶೋಧನಾ ಸಂಸ್ಥೆ 105 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯಾಗಿದೆ. ಇದು ಭಾರತದ ಸಂಸ್ಕೃತಿ, ಪರಂಪರೆಯ ಪ್ರಮುಖ ಆಧಾರ ಸ್ತಂಭವಾಗಿದೆ. ಇದು ಹೆಚ್ಚಿನ ಸಂಶೋಧನಾ ಪ್ರಬಂಧಗಳು ಮತ್ತು ಪುಸ್ತಕಗಳನ್ನು ರಚಿಸಿದೆ. ಹೊಸ ಮತ್ತು ಆಧುನಿಕ ಕಟ್ಟಡದ ನಿರ್ಮಾಣದೊಂದಿಗೆ ಈ ಸಂಸ್ಥೆಯನ್ನು ಪ್ರೋತ್ಸಾಹಿಸಲು ಮೂರ್ತಿ ಟ್ರಸ್ಟ್ ನಿರ್ಧರಿಸಿರುವುದಾಗಿ ಸುಧಾ ಮೂರ್ತಿ ತಿಳಿಸಿದ್ದಾರೆ. 

ಪುಣೆಯಲ್ಲಿ 1917ರಲ್ಲಿ ಸ್ಥಾಪಿಸಲಾದ ಭಂಡಾರ್‌ಕರ್‌ ಓರಿಯಂಟಲ್ ಸಂಶೋಧನಾ ಸಂಸ್ಥೆ, ಸಂಸ್ಕೃತ, ಪ್ರಾಕೃತ ಸೇರಿದಂತೆ ಅನೇಕ ಭಾಷೆಗಳಲ್ಲಿರುವ ಸುಮಾರು 1,25,000 ಅಪರೂಪದ ಪುಸ್ತಕಗಳು ಮತ್ತು 28, 000 ಹಸ್ತಪ್ರತಿಗಳನ್ನು ಹೊಂದಿರುವ ದೊಡ್ಡಸಂಸ್ಥೆಯಾಗಿದೆ. ದೇಶದ ಸಂಸ್ಕೃತಿ, ವಿಜ್ಞಾನ ಸಂರಕ್ಷಣೆಯಲ್ಲಿ ಮೂರ್ತಿ ಟ್ರಸ್ಟ್ ತೊಡಗಿಸಿಕೊಂಡಿದೆ. ಸುಧಾಮೂರ್ತಿ ಮತ್ತು ರೋಹನ್ ಮೂರ್ತಿ ಈ ಟ್ರಸ್ಟ್ ನ ಮುಖ್ಯಸ್ಥರಾಗಿದ್ದಾರೆ. 

ಮುಂದೆ ನಿರ್ಮಾಣವಾಗಲಿರುವ ಮೂರ್ತಿ ಸೆಂಟರ್ ಆಫ್ ಇಂಡಿಕ್ ಸ್ಟಡೀಸ್ ನಲ್ಲಿ 60ಕ್ಕೂ ಹೆಚ್ಚು ಸ್ಕಾಲರ್ ಗಳಿಗೆ ಅವಕಾಶ ಕಲ್ಪಿಸಲಾಗುವುದು, ಇದೇ ವೇಳೆ ಶೈಕ್ಷಣಿಕ ಕ್ಷೇತ್ರಕ್ಕೂ ಸಂಸ್ಥೆ ಕಾಲಿಟಿದ್ದು, ವಿವಿಧ ಕೋರ್ಸ್ ಗಳಿಗಾಗಿ 200 ವಿದ್ಯಾರ್ಥಿಗಳ ತರಗತಿ ಕೊಠಡಿಗೆ ಅವಕಾಶ ಕಲ್ಪಿಸಲಾಗುವುದು, ಮೂರ್ತಿ ಸೆಂಟರ್ ನಲ್ಲಿ ಒಂದು ಸ್ಟುಡಿಯೋ ಕೂಡಾ ಇರಲಿದ್ದು, 'ಭಾರತ್ ವಿದ್ಯಾ' ಆನ್ ಲೈನ್ ನಲ್ಲಿ ಉತ್ತಮ ಮಾಹಿತಿ ಒದಗಿಸಲಾಗುವುದು ಎಂದು  ಭಂಡಾರ್‌ಕರ್‌ ಓರಿಯಂಟಲ್ ಸಂಶೋಧನಾ ಸಂಸ್ಥೆ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಭೂಪಾಲ್ ಪಟವರ್ಧನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com