ರಾಜ್ಯಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಧ್ವನಿ ಎತ್ತಿದ ಮಾಜಿ ಪ್ರಧಾನಿ ದೇವೇಗೌಡ!
ಮೇಕೆದಾಟು ಯೋಜನೆಯಿಂದ ಹಳೇ ಮೈಸೂರು ಭಾಗಕ್ಕೆ ಕುಡಿಯಲು ನೀರು ಸಿಗಲಿದೆ. ಇನ್ನು ನಮ್ಮ ಭಾಗದಲ್ಲಿ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಹೊರತು ಬೇರೆ ರಾಜ್ಯದ ಗಡಿಯಲ್ಲ ಅಲ್ಲ.
Published: 10th December 2022 12:14 AM | Last Updated: 10th December 2022 01:29 PM | A+A A-

ದೇವೇಗೌಡ
ನವದೆಹಲಿ: ಮೇಕೆದಾಟು ಯೋಜನೆಯಿಂದ ಹಳೇ ಮೈಸೂರು ಭಾಗಕ್ಕೆ ಕುಡಿಯಲು ನೀರು ಸಿಗಲಿದೆ. ಇನ್ನು ನಮ್ಮ ಭಾಗದಲ್ಲಿ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಹೊರತು ಬೇರೆ ರಾಜ್ಯದ ಗಡಿಯಲ್ಲ ಅಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆ ವಿವಾದವನ್ನು ಬಗೆಹರಿಸಬೇಕು ಎಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಗ್ರಹಿಸಿದ್ದಾರೆ.
ಮೇಕೆದಾಟು ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿಷಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ವಿವಿಧ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಅಗತ್ಯವಿರುವ ಅನುಮತಿಗಳನ್ನು ನೀಡಬೇಕೆಂದು ದೇವೇಗೌಡರು ಕೇಂದ್ರಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಸರ್ಕಾರ ಮುಂದು: ಹೆಚ್.ಡಿ.ದೇವೇಗೌಡ ವಿರೋಧ
ಮೇಕೆದಾಟು ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಕರ್ನಾಟಕ ನೀರಿನ ಕೊರತೆಯ ರಾಜ್ಯ. ತುಂಗಭದ್ರಾ ಆಗಲಿ, ಮಹದಾಯಿಯಾಗಲಿ ಕೇಂದ್ರದ ಮುಂದೆ ಎಷ್ಟೋ ಯೋಜನೆಗಳು ಬಾಕಿ ಇವೆ. ಇಂದು ಹಳೇ ಮೈಸೂರು ಭಾಗದ ಒಂಬತ್ತು ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಮೊರೆ ಹೋಗುತ್ತಿದ್ದೇವೆ ಎಂದು ಶೂನ್ಯ ವೇಳೆಯಲ್ಲಿ ದೇವೇಗೌಡರು ಪ್ರಸ್ತಾಪಿಸಿದರು. ಹೀಗಾಗಿ ಕರ್ನಾಟಕದ ಸಮಸ್ಯೆ ಬಗೆಹರಿಯಬೇಕು ಹೇಳಿದರು.